ಚಿಕ್ಕಮಗಳೂರು : ಕಾಫಿನಾಡ ಧಾರ್ಮಿಕ ಹಾಗೂ ವಿವಾದಿತ ಪ್ರದೇಶ ದತ್ತಪೀಠದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ದತ್ತ ಜಯಂತಿಗೆ ಶಾಂತಿಯುತ ತೆರೆ ಬಿದ್ದಿದೆ. ಮಾಗಿಯ ಚಳಿಯಲ್ಲೂ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಭಾರೀ ಭದ್ರತೆ ನಡುವೆ ದತ್ತಪಾದುಕೆ ದರ್ಶನ ಪಡೆದು ಪುನೀತರಾದ್ರು. ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರ ಕಣ್ಗಾವಲಿನಲ್ಲಿ ಹತ್ರತ್ರ 15 ಸಾವಿರ ದತ್ತಭಕ್ತರು ಪಾದುಕೆ ದರ್ಶನ ಪಡೆದ್ರು. ಆದ್ರೆ, ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗಬೇಕು. ಗೋರಿಗಳನ್ನ ಸ್ಥಳಾಂತರಿಸಬೇಕು ಎಂಬ ಆಕ್ರೋಶದ ಘೋಷಣೆ ಮಾತ್ರ ಹಾಗೇ ಇತ್ತು. ಈ ಮಧ್ಯೆ ಮೊದಲ ಬಾರಿಗೆ ಶ್ರೀರಾಮಸೇನೆ ಭಜರಂಗದಳ ವಿಶ್ವಹಿಂದೂ ಪರಿಷದ್ ನಾಯಕರು ಒಟ್ಟಿಗೆ ಸೇರಿ ಒಗ್ಗಟ್ಟಿನ ಮಂತ್ರ ಪಠಿಸಿದ್ದು ವಿಶೇಷವಾಗಿತ್ತು
ಸರದಿ ಸಾಲಿನಲ್ಲಿ ಸಾಗುತ್ತಿರುವ ಮಾಲಾಧಾರಿಗಳು. ದತ್ತಗುಹೆ ಸಮೀಪದಲ್ಲಿಯೇ ಹೋಮ-ಹವನ. ಇರುಮುಡಿ ಹೊತ್ತು ಕಾಲ್ನಡಿಗೆಯಲ್ಲಿ ತೆರಳ್ತಿರೋ ದತ್ತಮಾಲಾಧಾರಿಗಳು ಕಳೆದ 9 ದಿನಗಳಿಂದ ವೃತ್ತಾಚಾರಣೆ ಯೊಂದಿಗೆ ನಡೆದ ದತ್ತಜಯಂತಿ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಇಂದು ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಜಯಂತಿ ಹಿನ್ನೆಲೆಯಲ್ಲಿ ಸಾವಿರಾರು ಮಾಲಾಧಾರಿಗಳು ಆಗಮಿಸಿದ್ರು. ಮಳೆ-ಮಂಜು ಅತಂಕವಿದ್ದರೂ ನಿರೀಕ್ಷೆಗೂ ಮೀರಿಯೇ ಮಾಲಾಧಾರಿಗಳು ದತ್ತಪಾದುಕೆ ದರ್ಶನ ಪಡೆದಿದ್ದಾರೆ. ಸಾವಿರಾರು ದತ್ತಭಕ್ತರು ಸರತಿ ಸಾಲಿನಲ್ಲಿ ನಿಂತು ದತ್ತಭಜನೆಯೊಂದಿಗೆ ದತ್ತಾತ್ರೇಯ ಸ್ವಾಮಿಯ ದರ್ಶನ ಪಡೆದ್ರು. ಇನ್ನು ಸಿ.ಟಿ.ರವಿ ಹೊನ್ನಮ್ಮ ಹಳ್ಳದಿಂದ ಕಾಲ್ನಡಿಗೆ ಮೂಲಕ ಇರುಮುಡಿ ಹೊತ್ತು ಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದ್ರು. ಆದರೆ, ಬಂದಂತಹಾ ಸಾವಿರಾರು ದತ್ತಭಕ್ತರ ಒಕ್ಕೊರಲ ಕೂಗು ಒಂದೇ ಆಗಿತ್ತು. ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠ. ದತ್ತಪೀಠ ಹಿಂದೂಗಳಿಗೆ ಸೇರಬೇಕು. ನಾವು ದತ್ತಪೀಠಿವನ್ನ ಪಡೆದೇ ತೀರುತ್ತೇವೆ ಎಂದು ಘೋಷಣೆಯೊಂದಿಗೆ ಆಗ್ರಹಿಸಿದರು. ಆದ್ರೆ, ನಾಲ್ಕು ಸಾವಿರ ಪೊಲೀಸರು ಹೆಜ್ಜೆಗೊಬ್ಬರಂತೆ ನಿಂತಿದ್ರಿಂದ ಹಾಟ್ ಕಾರ್ಯಕ್ರಮ ಕೂಲಾಗಿ ಮುಗಿದಿದ್ದು, ಪೊಲೀಸರು ಹಾಗೂ ಜಿಲ್ಲಾಡಳಿತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ದತ್ತಜಯಂತಿ ಅಂಗವಾಗಿ ದತ್ತಗುಹೆ ಸಮೀಪವೇ ಹೋಮ-ಹವನ ನಡೆಸಲಾಯ್ತು ಗುಹೆ ಸಮೀಪವೇ ಗಣಪತಿ ಹೋಮ, ದತ್ತ ಹೋಮವನ್ನ ನಡೆಸಿದ್ರು. ಪೂರ್ಣಾಹುತಿಯಲ್ಲಿ ವಿವಿಧ ಮಠದ ಸ್ವಾಮಿಗಳು, ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸಿ.ಟಿ.ರವಿ ಹಾಗೂ ವಿಎಚ್‍ಪಿ, ಬಜರಂಗದಳದ ಪ್ರಮುಖರು ಪಾಲ್ಗೊಂಡರು. ಈ ಬಾರಿ ವಿ.ಎಚ್.ಪಿ ಬಜರಂಗದಳದ ದತ್ತಜಯಂತಿಯಲ್ಲಿ ಶ್ರೀರಾಮಸೇನೆ ಸಹಾ ಭಾಗಿಯಾಗೋ ಮೂಲಕ ನಾವೆಲ್ಲಾ ಒಂದೇ ಅನ್ನೋ ಸಂದೇಶ ರವಾನಿಸಿದ್ರು. ಮುಂದಿನ ವರ್ಷದಿಂದ ಪ್ರತ್ಯೇಕ ಮಾಲಾಧಾರಣೆ ನಡೆಸಿ ಹೋರಾಟ ನಡೆಸೋ ಬದಲು ಒಂದಾಗಿಯೇ ನಡೆಸುತ್ತೇವೆ. ಈ ಬಗ್ಗೆ ಎಲ್ಲರ ಜೊತೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು ಎಂದರು. ದತ್ತಪೀಠದ ಹೋರಾಟ ಒಂದೇ ಆದ್ರು ಇಬ್ಭಾಗವಾಗಿದ್ದ ಸಂಘಟನೆಗಳು ಇನ್ನು ಮುಂದೆ ಒಂದೇ ಎನ್ನೋ ಸಂದೇಶ ಮತ್ತೊಮ್ಮೆ ರವಾನಿಸಿದ್ರು.
ಒಟ್ಟಾರೆ, ಕಾಫಿನಾಡಿನ ಬೆಂಕಿಯಂತ ದತ್ತಜಯಂತಿ ಕಾರ್ಯಕ್ರಮ ಕರ್ಪೂರ ಕರಗಿದಂತೆ ಶಾಂತಿಯುತವಾಗಿ ಮುಗಿದಿದ್ದು, ಕಾಫಿನಾಡಿಗರು, ಜಿಲ್ಲಾಡಳಿತ ಹಾಗೂ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 4000ಕ್ಕೂ ಅಧಿಕ ಪೊಲೀಸರ ಸರ್ಪಗಾವಲಲ್ಲಿ ಮೂರು ದಿನದ ಕಾರ್ಯಕ್ರಮಗಳು ಶಾಂತಿಯುತವಾಗಿ ತೆರೆಕಂಡಿದೆ. ಅಂತೂ-ಇಂತೂ ಬಿಗಿ ಪೋಲಿಸ್ ಭದ್ರೆತೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸುಮಾರು 15 ಸಾವಿರಕ್ಕೂ ಅಧಿಕ ದತ್ತಭಕ್ತರು ಪಾದುಕೆ ದರ್ಶನ ಪಡೆದು, ದತ್ತಪೀಠ ಹಿಂದೂಗಳ ಪೀಠ ಎಂದು ಆಗ್ರಹಿಸಿದ್ರು.
Leave a comment