ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ಎಂ.ಸಿ ಹಳ್ಳಿ ಪ್ರೌಢಶಾಲೆಯ 9 ನೇ ತರಗತಿಯ ಅಪ್ಪಟ ಗ್ರಾಮೀಣ ಕ್ರೀಡಾ ಪ್ರತಿಭೆ ಸಮೀಕ್ಷಾ ರಾಷ್ಟ್ರಮಟ್ಟದ ಚಿನ್ನದ ಪದಕ ಗೆದ್ದು ದಾಖಲೆ ಮಾಡಿ ಊರಿಗೆ,ನಾಡಿಗೆ ಕೀರ್ತಿ ತಂದಿರುವುದು ಸಂತೋಷ .
ರಾಷ್ಟ್ರಮಟ್ಟದ 19 ವರ್ಷದೊಳಗಿನ ಥ್ರೋಬಾಲ್ ಸ್ಪರ್ಧೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದ್ದು ಎಂ.ಸಿ ಹಳ್ಳಿ ಪ್ರೌಢಶಾಲಾ ವಿದ್ಯಾರ್ಥಿ ಸಮೀಕ್ಷಾ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕದ ಜೊತೆಗೆ ಮ್ಯಾನ್ ಅಫ್ ದ ಮ್ಯಾಚ್ ಪ್ರಶಸ್ತಿ ಪಡೆದಿರುವುದು ಶಾಲೆಗಷ್ಟೇ ಅಲ್ಲದೆ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿರುವುದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ದೈಹಿಕ ಶಿಕ್ಷಕರಾದ ಬಿ.ಪಿ.ಕುಮಾರಸ್ವಾಮಿ ಉತ್ತಮ ತರಭೇತಿ ನೀಡಿದ್ದು ಅವರನ್ನು ಅಭಿನಂದಿಸಲೇ ಬೇಕು.
ಚಿನ್ನ ಮತ್ತು ಕೀರ್ತಿ ತಂದ ಸಮೀಕ್ಷಾ ಎಂ.ಸಿ.ಹಳ್ಳಿಯ ಕುಮಾರಸ್ವಾಮಿ ಮತ್ತು ರೇಖಾ ದಂಪತಿಯ ಪುತ್ರಿಯಾಗಿದ್ದು ಇವಳ ಸಾಧನೆಗೆ ಮುಖ್ಯ ಶಿಕ್ಷಕಿ ವೀಣಾಬಾಯಿ ಮತ್ತು ಶಿಕ್ಷಕರುಗಳು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಹಿನುದ್ದಿನ್ ಮತ್ತು ಸದಸ್ಯರಗಳು ಹಾಗು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎನ್.ರಾಮೇಗೌಡ ಮತ್ತು ಸದಸ್ಯರಗಳು ಮತ್ತು ಊರಿನ ಪ್ರಮುಖರು ಅಭಿನಂದಿಸಿ ಬೆನ್ನು ತಟ್ಟಿದ್ದಾರೆ.
ಅಪ್ಪಟ ಗ್ರಾಮೀಣ ಪ್ರದೇಶದ ಸಮೀಕ್ಷಾ ಹದಿನೆಂಟು ವರ್ಷಗಳ ಹಿಂದೆ ಮಾಡಿದ್ದ ಕರ್ನಾಟಕದ ಸಾಧನೆಯನ್ನು ಈ ಬಾರಿ ಮತ್ತೆ ಮಾಡಿರುವುದು ಕೂಡ ದಾಖಲೆ ರಾಷ್ಟ್ರ ಮಟ್ಟದ ಸಾಧನೆಯ ಜೊತೆಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ವಿಜಯ ಸಾಧಿಸಲಿ .
Leave a comment