ಚಿಕ್ಕಮಗಳೂರು: ನೌಕರರ ಚುನಾವಣೆಯ ವೇಳೆ ಎಂಎಲ್ಸಿ ಬೋಜೇಗೌಡ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಚುನಾವಣಾ ಆಮಿಷ ಒಡ್ಡಿದ್ದಾರೆಂದು ಹೇಳಿಕೆ ನೀಡಿದ ಕಾರಣಕ್ಕೆ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷ ದೇವೇಂದ್ರ ಅವರನ್ನು ಅಮಾನತುಗೊಳಿಸಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಲಾಖೆ ಈ ಆದೇಶ ಹೊರಡಿಸಿದ್ದು, ಕಳೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯ ವೇಳೆ ಪತ್ರಿಕಾಗೋಷ್ಠಿಯಲ್ಲಿ ಬೋಜೆಗೌಡರ ನೀಚ ಕೃತ್ಯ ಮತ್ತು ಸರ್ಕಾರಿ ನೌಕರರಿಗೆ ಬೆದರಿಕೆ ಒಡ್ಡಿರುತ್ತಾರೆ ಎಂದು ಚುನಾವಣೆಯಲ್ಲಿ ಹಣ ಹಾಗೂ ಬೆಳ್ಳಿಯ ಬಟ್ಟಲುಗಳನ್ನು ಮತದಾರರಿಗೆ ಆಮಿಷದ ರೂಪದಲ್ಲಿ ನೀಡಿರುತ್ತಾರೆ ಎಂದು ಗಂಭೀರವಾದ ಆರೋಪವನ್ನು ದೇವೇಂದ್ರ ಮಾಡಿದ್ದರು
ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರ ನಿಯಮ 98ರ ಅನ್ಮಯ, ಶಿಕ್ಷಣ ಇಲಾಖೆಯ ಸಿಂಧು.ಬಿ ರೂಪೇಶ್, ಅಮಾನತ್ತು ಆದೇಶ ಹೊರಡಿಸಿರುತ್ತಾರೆ. ಸದ್ಯ ದೇವೇಂದ್ರ ಅವರನ್ನು ಅಮಾನತ್ತು ಗೊಳಿಸಿ ಉಡುಪಿ ಜಿಲ್ಲೆಯ ಬೈಂದೂರು ಕಾಲೇಜಿಗೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಲಾಗಿದೆ.
ಅನುಮತಿ ಇಲ್ಲದೆ ಉಡುಪಿ ಜಿಲ್ಲಾ ಕೇಂದ್ರವನ್ನು ಬಿಡತಕ್ಕದ್ದು ಅಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.ಈ ಮೂಲಕ ಚುನಾವಣೆ ಸೋಲಿಗೆ ಎಸ್.ಎಲ್ ಭೋಜೇಗೌಡ ಸೇಡು ತೀರಿಸಿಕೊಂಡಂತೆ ಆಗಿದೆ. ಚುನಾವಣೆಯಲ್ಲಿ ಹಟಕ್ಕೆ ಬಿದ್ದವರಂತೆ ದೇವೇಂದ್ರ ವಿರುದ್ಧದ ಬಣಕ್ಕೆ ಪರೋಕ್ಷ ಬೆಂಬಲ ನೀಡಿದ್ದ ಎಸ್ ಎಲ್ ಬಿ ಕೊನೆಗೂ ಜಿದ್ದಿಗೆ ಬಿದ್ದು ಅಮಾನತುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
Leave a comment