ಚಿಕ್ಕಮಗಳೂರು : ಎಂಬತ್ತರ ದಶಕದಲ್ಲಿ ಕಾಂಗ್ರೆಸ್ ಗೆ ಸೆಡ್ಡು ಹೊಡೆದು ಅಧಿಕಾರಕ್ಕೆ ಬಂದ ಜನತಾಪಕ್ಷಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಟ್ಟಿ ಅಸ್ತಿತ್ವ ಹೊಂದಿತ್ತು. ನಂತರ ಸಮಾಜವಾದಿ ಜನತಾದಳ, ಜನತಾದಳ (ಯು) ಮತ್ತು ಜಾತ್ಯತೀತ ಜನತಾದಳ ಹೀಗೆ ಪೀಸ್,ಪೀಸ್ ಆಗಿ ಜಿಲ್ಲೆಯಲ್ಲಿ ನೆಲೆಯನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿದೆ.
ಕಾಂಗ್ರೆಸ್ ನ ಭದ್ರ ಕೋಟೆಯೊಳಗೆ ನುಗ್ಗಿದ ಜನತಾ ಪಕ್ಷ 83 ರ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರದಲ್ಲಿ ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ 85 ರಲ್ಲಿ ಆರಕ್ಕೆ ಆರು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ತೋರಿಸಿದ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಅಳಿದುಳಿದ ಮುಖಂಡರು ಪರಿತಪಿಸುತ್ತಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡರೇ ಇರುವ ಏಕೈಕ ಮುಖಂಡ ಕಡೂರಿನಲ್ಲಿ ವೈ,ಎಸ್,ವಿ ದತ್ತ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗಿದೆ ಶೃಂಗೇರಿಯಲ್ಲಿ ಸುಧಾಕರ ಶೆಟ್ಟಿ ಬಿಟ್ಟರೆ ಪ್ರಮುಖರು ಇಲ್ಲ. ಮೂಡಿಗೆರೆಯಲ್ಲಿ ಸ್ವಲ್ಪ ಅಸ್ತಿತ್ವ ಇದ್ದರು ನಾಯಕತ್ವ ಇಲ್ಲ. ಚಿಕ್ಕಮಗಳೂರಿನಲ್ಲಿ ತಿಮ್ಮಶೆಟ್ಟಿಯಂತವರು ಬಂದುಹೋದರೆ ತರೀಕೆರೆಯಲ್ಲಿ ಎಂ.ನರೇಂದ್ರ ಏಕೈಕ ನಾಯಕ
ಜಿಲ್ಲಾ ಅಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ರಂಜನ್ ಅಜಿತ್ ಕುಮಾರ್ ಇದ್ದಾರೋ ಇಲ್ಲವೊ ಇತ್ತೀಚೆಗೆ ನಾಪತ್ತೆಯಾಗಿದ್ದಾರೆ ಎಂದು ಅಳಿದುಳಿದ ಮುಖಂಡರು ಹಾಗು ಕಾರ್ಯಕರ್ತರ ಅಳಲು.
ಇನ್ನೂ ವಿಚಿತ್ರ ಎಂದರೆ ಇವರ ಪತ್ನಿ ಕಾಂಗ್ರೆಸ್ ಸೇರಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿದ್ದಾರೆ. ಆದರೂ ಇವರು ಜಾ ದಳದ ಅಧ್ಯಕ್ಷರು ಪಕ್ಷದ ಸಭೆ ಕರೆಯುವುದಿರಲಿ ಕಛೇರಿ ಕಡೆ ತಲೆ ಹಾಕಿಲ್ಲ ಎಂದು ದಳದವರ ಗೊಣಗಾಟ ಅಧ್ಯಕ್ಷ ಇರಲಿ ಬಿಡಲಿ ತೀರ್ಮಾನ ಭೋಜೇಗೌಡರದ್ದೇ ಆಗಿರುವುದರಿಂದ ದಳದವರು ಕೈ ಕೈ ಹಿಸುಕಿಕೊಳ್ಳುತ್ತಾ ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್ ಮತ್ತೆ ಬಿಜೆಪಿ ಜೊತೆ ತೆಕ್ಕೆಯಲ್ಲಿ ಇರುವ ದಳದವರಿಗೆ ಯಾವ ಮೈತ್ರಿಯಾದರು ಒಂದೇ ಅಲ್ಲವೇ?
Leave a comment