ಚಿಕ್ಕಮಗಳೂರು : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಡಿಕೆ ಕುರಿತು ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪ ತಮ್ಮ ಅಭಿಪ್ರಾಯ ಬಿಚ್ಚಿಟ್ಟಿದ್ದಾರೆ. ಬಾಡೂಟ ಬೇಡಿಕೆ ಬಗ್ಗೆ ಭಿನ್ನಾಭಿಪ್ರಾಯಗಳು ಬಂದಿವೆ ಆದರೆ ಇದು ಚರ್ಚಾಸ್ಪದ ವಿಷಯ ಆಗಬಾರದು, ಇದೇ ಬೇಕು ಎಂದು ಯಾರನ್ನು ಕೇಳಬಾರದು ಅತಿಥಿಗಳ ಮನೆಗೆ ಹೋದಾಗ ಏನನ್ನು ಉಣ ಬಡಿಸುತ್ತಾರೋ ಅದನ್ನೇ ಊಟ ಮಾಡೋಣ, ಆಹಾರದ ಬಗ್ಗೆ ಸ್ವಾಗತ ಸಮಿತಿ, ಆಹಾರ ಸಮಿತಿ ಏನು ನಿರ್ಧಾರ ಮಾಡುತ್ತದೆ ಅದಕ್ಕೆ ನನ್ನ ಸಹಮತವಿದೆ ಎಂದರು.
ಚಿಕ್ಕಮಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್.ಎಂ ಕೃಷ್ಣ ಹಾಗೂ ತಮ್ಮ ನಡುವಿನ ಒಡನಾಟ ಇದೇ ವೇಳೆ ಬಿಚ್ಚಿಟ್ಟರು. ಅವರ ನಿಧನದ ಸುದ್ದಿ ಕೇಳಿ ವ್ಯಸನ ಉಂಟಾಯಿತು. ನಾನಗೆ ಪ್ರಶಸ್ತಿ ಅವರೇ ಪ್ರದಾನ ಮಾಡಿದ್ದರು ಅವರು ಮುಖ್ಯ ಮಂತ್ರಿಗಳಾಗಿದ್ದರು ಸಾಕಷ್ಟು ಅನುದಾನಗಳನ್ನು ಸಾಹಿತ್ಯ ಪರಿಷತ್ತಿಗೆ ನೀಡಿದ್ದರು. ಅವರ ನಿಧನಕ್ಕೆ ಗೌರವಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದರು.
ಇದೆ ವೇಳೆ ಪತ್ರಕರ್ತರೊಂದಿಗೆ ಸಂವಾದದಲ್ಲಿ ಮನ ಬಿಚ್ಚಿ ಮಾತನಾಡಿದ ಅವರು, ನನಗೆ ಪತ್ರಕರ್ತರ ಜೊತೆಗೆ ಮಾತನಾಡುವುದು ಖುಷಿ ಕೊಡುತ್ತದೆ, ನಾನು ವಾರ್ತಾ ಇಲಾಖೆಯಲ್ಲಿ ಇದ್ದಿದ್ದರಿಂದ ಪತ್ರಕರ್ತರನ್ನು ನನ್ನ ಬಂಧುಗಳು ಎಂದುಕೊಳ್ಳುತ್ತೇನೆ.
ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಬಾರಿಗೆ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ದೊರೆತಿರುವುದು ಗೌರವ ಹಾಗೂ ಅಭಿಮಾನದ ಸಂಗತಿ ನಾನು ಗ್ರಾಮೀಣ ಸಂಸ್ಕೃತಿಯಲ್ಲಿ ಒಲವು, ಉಳ್ಳವನಾಗಿದ್ದು ಗ್ರಾಮೀಣ ಬದುಕು, ಹೆಮ್ಮೆ ಎನ್ನಿಸುತ್ತದೆ. ನಾನು ನಾನು ಸಾಹಿತ್ಯದಲ್ಲಿ ಬಲ್ಲಿದನೂ ಅಲ್ಲ ದೊಡ್ಡ ಸಾಹಿತಿಯೂ ಅಲ್ಲ ಕೇವಲ ಪರಿಚಾರಕ ಜಾನಪದಕ್ಕೆ ಇರುವ ಶ್ರೇಷ್ಠತೆ ಕನ್ನಡ ಸಾಹಿತ್ಯ ಪರಿಷತ್ತಿಗೂ ಬರಬೇಕು ಎಂದರು.
ಅಧ್ಯಕ್ಷ ಸ್ಥಾನಕ್ಕೆ ಹೆಸರು ಆಯ್ಕೆಯಾದಾಗ ನಿರಾಕರಣೆ ಅಸಾಧ್ಯವಾಯಿತು. 30 ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದಾಗ ಅಲ್ಲಿನ ಜನರ ಸಹಕಾರವನ್ನು ಮರೆತಿಲ್ಲ, ಈ ಬಾರಿಯೂ ಅವರ ಸಹಕಾರ ಇರಲಿದೆ ಎಂದು ನಿರೀಕ್ಷಿಸುತ್ತೇನೆ.
ಸಾಹಿತ್ಯ ಪರಿಷತ್ತಿಗೆ ಇಡೀ ಭಾರತದಲ್ಲಿ ಯಾವುದೇ ರಾಜ್ಯ ಸರ್ಕಾರಗಳು ಕೊಡದಷ್ಟು ಅನುದಾನ, ನೆರವನ್ನ ಯಾವ ಸರ್ಕಾರವು ಕೊಟ್ಟಿಲ್ಲ. ಅದಕ್ಕಾಗಿಯೇ ಕನ್ನಡ ಸಾಹಿತ್ಯ ಪರಿಷತ್ ಇಂದು ಶ್ರೀಮಂತ ಸಂಸ್ಥೆಯಾಗಿದೆ.
ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳು ಜಾರಿಗೆ ಬರುವುದು ವಿರಳ ಎಂಬ ಪ್ರಶ್ನೆಗೆ, ಅದನ್ನು ಒಪ್ಪಿಕೊಳ್ಳುತ್ತೇನೆ ಎಂದ ಅವರು, ಶೇಕಡ 80ರಷ್ಟು ನಿರ್ಣಯಗಳು ಅನುಷ್ಠಾನ ಗೊಳ್ಳುವುದಿಲ್ಲ ಕೇವಲ 20ರಷ್ಟು ಪ್ರತಿಶತ ಮಾತ್ರ ಅನುಷ್ಠಾನವಾಗುತ್ತದೆ. ಈ ಕಾರಣದಿಂದಲೇ ನಾನು ರಾಜ್ಯಾಧ್ಯಕ್ಷನಾಗಿದ್ದ ವೇಳೆ ಅನುಷ್ಠಾನ ಸಮಿತಿಯನ್ನು ರಚಿಸಿದ್ದೆ ಎಂದು ಅವರು ಇದೇ ವೇಳೆ ಸ್ಮರಿಸಿದರು.
ಇದೆ ವೇಳೆ ಪ್ರೆಸ್ ಕ್ಲಬ್ ನ ವತಿಯಿಂದ ಗೊ.ರು.ಚ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ನ ಪ್ರಧಾನ ಕಾರ್ಯದರ್ಶಿ, ತಾರಾನಾಥ್, ಕೆ ಯು ಡಬ್ಲ್ಯೂ ಜೆ ಮಾಜಿ ಅಧ್ಯಕ್ಷ ಎನ್ ರಾಜು ಉಪಸ್ಥಿತರಿದ್ದರು. ಇದೆ ವೇಳೆ ಹಿರಿಯ ಪತ್ರಕರ್ತ ತಿಪ್ಪೆ ರುದ್ರಪ್ಪ ಮುಖ್ಯ ಅತಿಥಿಗಳ ಪರಿಚಯಿಸಿದರು, ಕ್ಲಬ್ ನ ಖಜಾಂಚಿ ಎನ್.ಕೆ ಗೋಪಿ ಸ್ವಾಗತಿಸಿ, ನಿರೂಪಿಸಿದರು.
Leave a comment