ಚಿಕ್ಕಮಗಳೂರು : ಕಾಫಿನಾಡ ವಿವಾದಿತ ದತ್ತಪೀಠದಲ್ಲಿ ದತ್ತ ಜಯಂತಿ ಹಿನ್ನೆಲೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಎಸ್ಪಿ ವಿಕ್ರಂ ಅಮಟೆ ದತ್ತಪೀಠ ಮಾರ್ಗದ ಚೆಕ್ ಪೋಸ್ಟ್, ಕಿರಿದಾದ ರಸ್ತೆ, ಅಪಾಯದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ನಗರದ ಅಲ್ಲಂಪುರದಿಂದ ದತ್ತಪೀಠವರೆಗಿನ ಸುಮಾರು 30 ಕಿ.ಮೀ. ದೂರವನ್ನ ಪರಿಶೀಲನೆ ನಡೆಸಿದ್ದಾರೆ.
ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ದತ್ತಪೀಠದ ಮಾರ್ಗ ಹಾವುಬಳುಕಿನ ಮೈಕಟ್ಟಿನ ರಸ್ತೆಯಾಗಿದೆ. ಈ ವರ್ಷದ ನಿರಂತರ ಮಳೆಯಿಂದ ಮಾರ್ಗ ಮಧ್ಯೆ ಅಲ್ಲಲ್ಲೇ ಭೂ ಕುಸಿತ ಹಾಗೂ ಗುಡ್ಡ ಕುಸಿತ ಕೂಡ ಸಂಭವಿಸಿದೆ. ಕೆಲವೆಡೆ ಸಿಂಗಲ್ ರೋಡ್ ರೀತಿಯಂತಹಾ ಮಾರ್ಗವೂ ಇರೋದ್ರಿಂದ ಟ್ರಾಫಿಕ್ ಜಾಮ್ ಉಂಡಾಗದಂತೆ, ಭಕ್ತರ ಹಿತದೃಷ್ಟಿಯಿಂದ ಬಂದೋಬಸ್ತ್ ಮಾಡುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ದತ್ತಪೀಠದಲ್ಲೂ ಪಾರ್ಕಿಂಗ್ ವ್ಯವಸ್ಥೆಯನ್ನ ಪರಿಶೀಲನೆ ನಡೆಸಿದ್ದು ಟ್ರಾಫಿಕ್ ಜಾಮ್ ಉಂಟಾಗದಂತೆ ಕ್ರಮಕೈಗೊಂಡಿದ್ದಾರೆ. ದತ್ತಜಯಂತಿಯ ಕೊನೆ ದಿನವಾದ 14ರಂದು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಗಾಡಿಗಳಲ್ಲಿ ಬರುವ ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಪೂರ್ಣ ಬಂದೋಬಸ್ತ್ ಕಲ್ಪಿಸಿದೆ. ಜೊತೆಗೆ, ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ 4500ಕ್ಕೂ ಅಧಿಕ ಪೊಲೀಸರು ದತ್ತಪೀಠ ಹಾಗೂ ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಡಿದ್ದಾರೆ.
Leave a comment