ಚಿಕ್ಕಮಗಳೂರು : ವಕ್ಫ್ ವಿರೋಧಿ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಸವಣ್ಣನವರಂತೆ ಹೊಳೆ ಹಾರಿ ಸಾಯಿರಿ ಎಂಬ ಹೇಳಿಕೆಗೆ ಚಿಕ್ಕಮಗಳೂರು ಜಾಗತಿಕ ಲಿಂಗಾಯಿತ ಮಹಾಸಭಾ ಹಾಗೂ ಕೆಪಿಸಿಸಿ ವಕ್ತಾರ ರವೀಶ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಗಂಗಾಧರಪ್ಪ, ಯತ್ನಾಳ್ ಬಸವಣ್ಣನವರ ಆಸ್ಥಾನದಲ್ಲಿ ಇದ್ದ ಕೊಂಡಿ ಮಂಚಣ್ಣ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಕೂಡಲೇ ಅವರು ಸಮಾಜದ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಲಿಂಗಾಯಿತ ಸಮಾಜ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಇದೆ ವೇಳೆ ಮಾತನಾಡಿದ ಜಯ ಬಸವನಂದ ಸ್ವಾಮೀಜಿ, ಬಸನಗೌಡ ಯತ್ನಾಳ್ ಅತ್ಯಂತ ಕೀಳು ಮಟ್ಟದ ವಿವೇಕ ರಹಿತ ಅಸಂಬದ್ಧ ಹೇಳಿಕೆಯನ್ನು ನೀಡಿರುತ್ತಾರೆ. ಎಲ್ಲಾ ಜಾತಿ ವರ್ಗದವರನ್ನು ಸಮಾನವಾಗಿ ಕಂಡು ಸಮಾನತೆ ಸಾರಿದ ಮೇರು ಪರ್ವತ ಆದ ವಿಶ್ವಗುರು ಬಸವಣ್ಣನವರು, ಯತ್ನಾಳ್ ಹೇಳಿದಂತೆ ಹೊಳೆ ಹಾರಿ ಸಾವನ್ನಪ್ಪಿಲ್ಲ. ಯತ್ನಾಳ್ ಯಾರನ್ನೊ ಓಲೈಸಲು ಅಧಿಕಾರದ ಆಸೆಗಾಗಿ, ಕೆಲವರನ್ನು ಮೆಚ್ಚಿಸಲು ಬಸವಣ್ಣನವರನ್ನು ಅವಮಾನಿಸಿದ್ದಾರೆ. ಇವರಿಗೆ ಲಿಂಗಾಯಿತರಿಗೆ ಇರಬೇಕಾದ ಆಚಾರವಾಗಲಿ, ಸಂಸ್ಕಾರವಾಗಲಿ ಇಲ್ಲದಿರುವುದು ದುರದೃಷ್ಟಕರ ಹಗ್ಗದ ಪ್ರಚಾರಕ್ಕಾಗಿ ರಾಜಕೀಯ ತೆವಲಿಗಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಕನಿಷ್ಠ ಜ್ಞಾನವು ಇವರಲ್ಲಿ ಕಂಡು ಬರುತ್ತಿಲ್ಲ, ಇವರ ಹೇಳಿಕೆ ಬಸವ ಭಕ್ತರಿಗೆ ಅವಮಾನಿಸಿದಂತೆ ಕಾಣುತ್ತಿದೆ ಎಂದು ಸ್ವಾಮೀಜಿ ಹೇಳಿದರು.
ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಖಂಡನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಸವಣ್ಣ ಅವರ ಬಗ್ಗೆ ನೀಡಿದ ಹೇಳಿಕೆಗೆ ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಹಸಾ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಯತ್ನಾಳ್ ಹೇಳಿಕೆ ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದ್ದು, ಇದನ್ನು ಸಂಘ ಪರಿವಾರ ಹುನ್ನಾರದಿಂದ ಹೇಳಿಸಿದ್ದು, ಈ ಬಗ್ಗೆ ಯಾವುದೇ ಬಿಜೆಪಿ ಶಾಸಕರು ಮಾತನಾಡುತ್ತಿಲ್ಲ ಏಕೆ ಯಾರೋ ಯತ್ನಾಳ್ರನ್ನು ಆಡಿಸುತ್ತಿದ್ದಾರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಆದರೆ ಬಿಜೆಪಿ ಸಂಘ ಪರಿವಾರದಂತಹ ಪಟ್ಟ ಭದ್ರ ಹಿತಾಸಕ್ತಿಗಳ ಕೈವಾಡದಿಂದ ಈ ರೀತಿ ಹೇಳಿಕೆಗಳನ್ನು ಯತ್ನಾಳ ಮೂಲಕ ಆಡಿಸುತ್ತಿದ್ದಾರೆ. ಈ ತಕ್ಷಣ ಯತ್ನಾಳ್ ಕನ್ನಡದ ಜನತೆಯ ಕ್ಷಮೆ ಯಾಚಿಸಬೇಕು. ನಾಳಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ರವೀಶ್ ಹೇಳಿದರು.
Leave a comment