ಚಿಕ್ಕಮಗಳೂರು : ಅಪರಿಚಿತ ವಾಹನ ಡಿಕ್ಕಿಯಾಗಿ ಸುಮಾರು ಐದು ವರ್ಷದ ಗಂಡು ಚಿರತೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇ ಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುದ್ದೆ ಬೋರನಹಳ್ಳಿ ಗ್ರಾಮದ ಏರ್ಟೆಲ್ ಟವರ್ ಬಳಿ ಈ ಅವಘಡ ಸಂಭವಿಸಿದ್ದು 5 ವರ್ಷದ ಗಂಡು ಚಿರತೆ ಸಾವನ್ನಪ್ಪಿದೆ. ಕಡೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದ್ದು ಟಿಟಿ ವಾಹನಕ್ಕೆ ಸಿಲುಕಿ ಚಿರತೆ ಸಾವನಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಚಿರತೆ ರಸ್ತೆ ದಾಟುವಾಗ ಜಂಪ್ ಮಾಡುವಾಗ ಟಿಟಿ ವಾಹನಕ್ಕೆ ಸಿಲುಕಿದೆ ಎಂದು ಹೇಳಲಾಗಿದೆ.
ಚಿರತೆ ಜಂಪ್ ಮಾಡಿ ಮತ್ತೊಂದು ಜಂಪ್ ಮಾಡುವ ವೇಳೆಗೆ ಟಿಟಿ ವಾಹನ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿದೆ. ಒಂದು ವೇಳೆ, ಚಿರತೆ ಗ್ರಾಮದ ಒಳಕ್ಕೆ ನುಗ್ಗಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆದರೆ, ಗ್ರಾಮದ ಬಾರ್ಡರ್ ನಲ್ಲಿ ಚಿರತೆ ರಸ್ತೆ ಕ್ರಾಸ್ ಮಾಡುವಾಗ ಈ ಅಪಘಾತ ಸಂಭವಿಸಿದೆ. ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಯಾವುದೇ ಅನಾಹುತ ಸಂಭವಿಸಬಾರದು ಎಂಬ ಕಾರಣಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಜೊತೆ ಜಗಳವಾಡಿ ಉದ್ದೇಬೋರನಹಳ್ಳಿ ಗ್ರಾಮಸ್ಥರು ಉದ್ದೇ ಬೋರನಹಳ್ಳಿ ಗ್ರಾಮದ ವ್ಯಾಪ್ತಿಗೆ 1 ಲಕ್ಷ ಖರ್ಚು ಮಾಡಿ ಹೈ ಮಾಸ್ಕ್ ಲೈಟ್ ಅಳವಡಿಸಿದ್ದರು. ಆದರೆ, ಗ್ರಾಮದ ತುಸು ಹೊರಭಾಗದಲ್ಲಿ ಲೈಟ್ ಇಲ್ಲದ ಜಾಗದಲ್ಲಿ ಈ ಅನಾಹುತ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Leave a comment