ಚಿಕ್ಕಮಗಳೂರು : ಕಾಂಗ್ರೆಸಿಗಿಂತ ಬಿಜೆಪಿ ಅವಧಿಯಲ್ಲೆ ಹೆಚ್ಚು ವಕ್ಫ್ ನೋಟಿಸ್ ನೀಡಿದ್ದಾರೆಂಬ ಹೇಳಿಕೆ ವಿಚಾರ ದಿನದಿಂದ ದಿನಕ್ಕೆ ತೀವ್ರ ಸ್ವರೂಪದ ರಾಜಕೀಯ ತಿರುವು ಪಡೆಯುತ್ತಿದೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಿಟಿ ರವಿ ದಾನದ ಆಸ್ತಿ ಬೇರೆ, ಕಂಡ ಕಂಡವರ ಆಸ್ತಿ ವಕ್ಫ್ ಬೋರ್ಡಿಗೆ ಬರೆಯೋದು ಬೇರೆ, ದಾನದ ಆಸ್ತಿಯನ್ನು ಪ್ರಭಾವಿಗಳು ದುರ್ಬಳಕೆ ಮಾಡಿಕೊಂಡಿರುವುದು ಅನ್ವರ್ ಮಾನಪ್ಪಾಡಿ ವರದಿಯಲ್ಲಿ ಉಲ್ಲೇಖವಿದೆ ಎಂದು ಸಿ.ಟಿ ರವಿ ಹೇಳಿದ್ದಾರೆ.
ನಾವು ಆ ಆಸ್ತಿಯನ್ನು ಉಳಿಸಿ ಎಂದು ಹೇಳಿದ್ದು ಹೌದು, ಈಗ ಎಲ್ಲಾ ನಂದು-ನಂದು ಅಂತ ಕಂಡ ಕಂಡವರ ಆಸ್ತಿಗೆ ಕಣ್ಣಾಕುವ ಕೆಲಸ ಆಗುತ್ತಿದೆ. ದೇವಸ್ಥಾನ ವಿಧಾನಸೌಧ ಸಂಸತ್ತು ಎಲ್ಲಾ ನಮ್ದು ಅನ್ನೋದು ಬಕಾಸುರ ಸಂಸ್ಕೃತಿ ಅಂತ ಹೇಳಿದ್ದು ನಾನು. ಜನ ಬರಿ ಬಡಿಗೆ ತೆಗೆದುಕೊಳ್ಳಲ್ಲ, ಬಡಿಗೆ ಜೊತೆ ಕಾಲಿನಲ್ಲಿ ಇರೋದನ್ನ ತೆಗೆದುಕೊಳ್ಳುತ್ತಾರೆ. ರೈತರ ಆಸ್ತಿ ದೇವಸ್ಥಾನ, ಸ್ಮಶಾನ, ಶಾಲೆ, ಆಸ್ಪತ್ರೆ, ಕೆರೆಯನ್ನು ಅತಿಕ್ರಮಿಸಿಕೊಳ್ಳೋಕೆ ಯಾವತ್ತು ಆದೇಶಿಸಲ್ಲ. 1500 ವರ್ಷದ ದೇವಸ್ಥಾನವನ್ನು ಅತಿಕ್ರಮಿಸಿ ಎಂದು ಬಿಜೆಪಿ ಯಾವತ್ತಾದರೂ ಹೇಳಿತ್ತಾ ಎಂದು ಪ್ರಶ್ನಿಸಿದರು.
ರೈತರ 18,000 ಎಕರೆಯನ್ನ ದಾಖಲೆ ಇಲ್ಲದೆ ವಕ್ಫ್ ಬೋರ್ಡಿಗೆ ಮಾಡುವುದಕ್ಕೆ ನಾವು ಎಂದಾದರೂ ಹೇಳಿದ್ವಾ… ದುರ್ಬಳಕೆ ಆಗಿರೋ ದಾನದ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕೆ ನಾವು ಈಗಲೂ ಬದ್ದ, ದಾನ ಬೇರೆ ಕಂಡವರ ಆಸ್ತಿಗೆ ಕಣ್ಣು ಹಾಕೋದು ಬೇರೆ ಎಂದು ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿದರು.
Leave a comment