- ಚಿಕ್ಕಮಗಳೂರು :
ಹಾಸ್ಟೆಲ್ ಗಳು ನಕ್ಸಲ್ ತಾಣ ಎಂದಿರುವ ಎಂಎಲ್.ಸಿ ಸಿ.ಟಿ ರವಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲಿವೇ ಹೋದಲಿಲ್ಲಾ ಅವರ ವಿರುದ್ಧ ಪ್ರತಿಭಟಿಸಿ ಬಹಿಷ್ಕಾರ ಹಾಕಲಾಗುವುದು ಎಂದು ಡಿಎಸ್ಎಸ್ ನ ರಾಜ್ಯ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ. ಮತ್ತೊಬ್ಬ ಡಿಎಸ್ಎಸ್ ಮುಖಂಡ ಮರ್ಲೆ ಅಣ್ಣಯ್ಯ ಸಿ.ಟಿ ರವಿ ಹೇಳಿಕೆ ಯನ್ನು ತೀವ್ರವಾಗಿ ಖಂಡಿಸಿದ್ದು ಇದು ಅವರ ಮನಸ್ಥಿತಿ ತೋರಿಸುತ್ತದೆ ಎಂದಿದ್ದಾರೆ.
ಸಿ.ಟಿ ರವಿ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸೂಕ್ತ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಶ್ರೀನಿವಾಸ್ ಇಲ್ಲದಿದ್ದರೆ ಹೋರಾಟ ರೂಪಿಸ ಬೇಕಾಗುತ್ತದೆ ಎಂದಿದ್ದಾರೆ.
ನಕ್ಸಲ್ ಚಟುವಟಿಕೆ ಹಾಸ್ಟೆಲ್ ಗಳಲ್ಲಿ ನಡೆಯುತ್ತಿದೆ ಎಂದು ಹೇಳುವ ಮೂಲಕ ದಲಿತ ವಿದ್ಯಾರ್ಥಿಗಳಿಗೆ ನಕ್ಸಲ್ ಪಟ್ಟ ಕಟ್ಟಿ ಅವರಿಗೆ ಅವಮಾನಿಸಲಾಗಿದೆ ಎಂದು ದಲಿತ ಸಂಘಟನೆಯ ಒಕ್ಕೂಟ ತಿಳಿಸಿದೆ. ಪ್ರಜ್ಞೆ ಇಲ್ಲದೇ ಹಗುರವಾಗಿ ಮಾತನಾಡುವ ನೀವು 20 ವರ್ಷಗಳಿಂದ ಏನ್ ಮಾಡಿದ್ರಿ ಎಂದು ಪ್ರಶ್ನೆ ಮಾಡಿರುವ ಮುಖಂಡರು ದಲಿತರಿಗೆ ಶಿಕ್ಷಣ ಸಿಗಬಾರದು ಎಂಬುದು ನಿಮ್ಮ ಉದ್ದೇಶವೇ ಎಂದಿದ್ದಾರೆ.
ಹಾಸ್ಟೆಲ್ ಗಳು ನಕ್ಸಲ್ ತರಬೇತಿ ಕೇಂದ್ರಗಳಾಗಿದ್ದರೆ ನ್ಯಾಯಾಂಗ ತನಿಖೆಗೆ ಒಳಪಡಿಸಿ ಆಗ ವಿಷಯದ ಸತ್ಯಾಸತ್ಯತೆ ಹೊರಬರುತ್ತದೆ ಎಂದು ಮರ್ಲೆ ಅಣ್ಣಯ್ಯ ಒತ್ತಾಯಿಸಿದ್ದಾರೆ.
Leave a comment