ಚಿಕ್ಕಮಗಳೂರು :ನಗರದ ಯುವ ಸಮೂಹಕ್ಕೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ಕೆಲಕಾಲ ತಮ್ಮ ಸಂಗೀತ ನಿರ್ದೇಶನ ಹಾಡು ಹೇಳುವ ಮೂಲಕ ರಂಜಿಸಿದರು. ಒಂದು ಮಳೆ ಬಿಳ್ಳು ಒಂದು ಮಳೆ ಮೋಡ , ಹಾಗೂ ಹಂಸ ನಡೆಯೋಳೆ ಮೀನು ಕಣ್ಣೋಳೆ ಸೊಬಗ ಮೈತುಂಬಿದೆ
ಈ ವೇಳೆ once more once more ಎಂಬ ಯುವಕ ಯುವತಿಯರಿಗೆ ಕೂಗಿದ ಹಿನ್ನೆಲೆಯಲ್ಲಿ ಮತ್ತೆ ಎರಡು ಹಾಡುಗಳನ್ನು ಜನ್ಯಾ ಹಾಡಿದರು. ಮೈ ಬ್ರದರ್ ಫ್ರಮ್ ಅನ್ ನದರ್ ಮದರ್ , ಶ್ರೀ ಆಂಜನೇಯಂ ಭಜರಂಗಿ ಚಿತ್ರದ ಗೀತೆಯನ್ನು ಕೂಡಾ ಹಾಡಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಟೌನ್ ಮಹಿಳಾ ಸಂಘದ 99 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದಂಪತಿ ಸಹಿತ ಆಗಮಿಸಿದ್ದ ಅರ್ಜುನ್ ಜನ್ಯಾ ತಮ್ಮ ಭಾಷಣದಲ್ಲಿ ಚಿಕ್ಕಮಗಳೂರಿನ ತಮ್ಮ ಕುಟುಂಬದ ನಂಟನ್ನು ನೆನಪಿಸಿಕೊಂಡರು ಅಲ್ಲದೇ ಮಹಿಳೆಗೆ ಸ್ವತಂತ್ರ ನೀಡಬೇಕು ಎಂದು ಪ್ರತಿಪಾದಿಸಿದರು. ಈ ವೇಳೆ ಆಂಕರ್ ಅನುಶ್ರೀ ಅವರನ್ನು ನೆನೆಯುವುದನ್ನು ಮರೆಯಲಿಲ್ಲ
Leave a comment