Home Crime News ಮುಂಡಗಾರು ಲತಾ ಬಗ್ಗೆ ಸುಳಿವು ಹಿನ್ನೆಲೆ : ನಕ್ಸಲ್ ಕೂಂಬಿಂಗ್ ತೀವ್ರ
Crime News

ಮುಂಡಗಾರು ಲತಾ ಬಗ್ಗೆ ಸುಳಿವು ಹಿನ್ನೆಲೆ : ನಕ್ಸಲ್ ಕೂಂಬಿಂಗ್ ತೀವ್ರ

Share
Share

ಚಿಕ್ಕಮಗಳೂರು : ಜಿಲ್ಲೆಯ ಕಾಡಂಚಿನ ಕುಗ್ರಾಮಗಳಿಗೆ ಭೇಟಿ ನೀಡಿ ಎಸ್ಕೇಪ್ ಆಗಿದ್ದ ನಕ್ಸಲರಿಗಾಗಿ ಇದೀಗ ಪೊಲೀಸ್ ಹಾಗೂ ನಕ್ಸಲ್‌ ನಿಗ್ರಹ ಪಡೆ ಸಿಬ್ಬಂದಿಗಳು ಕೂಂಬಿಂಗ್ ಚುರುಕುಗೊಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಾಡಂಚಿನ ಗಡಿ ಗ್ರಾಮಗಳಲ್ಲಿ ಕೂಂಬಿಂಗ್ ಚುರುಕುಗೊಂಡಿದ್ರೆ, ಅಂತರ್ ಜಿಲ್ಲಾ ಗಡಿಯಲ್ಲಿ ವಾಹನ ತಪಾಸಣೆ ಕೂಡ ಹೆಚ್ಚಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ, ಆಗುಂಬೆ ಘಾಟಿ, ಕಳಸ ತಾಲೂಕಿನ ಕುದುರೆಮುಖ ಮಾರ್ಗ, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಸುತ್ತಮುತ್ತ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಮಾರ್ಗದಲ್ಲಿ ಓಡಾಡುವ ಪ್ರತಿಯೊಂದು ವಾಹನಗಳನ್ನೂ ಚೆಕ್ ಮಾಡಿ ಬಿಡುತ್ತಿದ್ದಾರೆ. ಕೊಪ್ಪ ತಾಲೂಕಿನ ಕಾಡಂಚಿನ ಕುಗ್ರಾಮ ಕಡೇಗುಂದಿ ಗ್ರಾಮದ ಸುಬ್ಬೇಗೌಡ ಎಂಬುವರ ಮನೆಗೆ ಭೇಟಿ ನೀಡಿ ಹೋದ ಪರಿಣಾಮ ಅವರು ಹೋದ ಮಾರ್ಗದಲ್ಲಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಕೂಡ್ಲಿ ಗ್ರಾಮದಲ್ಲಿ ಆರು ಜನ ಅಪರಿಚಿತರು ಓಡಾಡಿದ್ದರು ಎಂಬ ಮಾಹಿತಿ ಹಿನ್ನೆಲೆ ಆ ಭಾಗದಲ್ಲೂ ಕೂಂಬಿಂಗ್ ಹೆಚ್ಚಾಗಿದೆ.‌ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಗಡಿ ಹಂಚಿಕೊಂಡಿರೋ ಮೂರು ತಾಲೂಕಿನ ಗಡಿಯಲ್ಲೂ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆ ತೀವ್ರ ಶೋಧ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಕೇಳೊರೆ ಇಲ್ಲದಂತಾಗಿದೆ ಕಾಂಗ್ರೆಸ್ ಕಾರ್ಯಕರ್ತರ ಗೋಳು

ಚಿಕ್ಕಮಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಸಮೀಪಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಐದು ಜನ ಮುಖಂಡರು ಆಯಾಕಟ್ಟಿನ ನಿಗಮ ಮಂಡಳಿಯ ಗೂಟದ...

ಪದವೀಧರರ ಸಹಕಾರ ಸಂಘದಲ್ಲಿ ಯಾವುದೇ ಅಕ್ರಮ ನಡೆದಿಲ್ಲ : ಲೋಕಪ್ಪಗೌಡ

ಚಿಕ್ಕಮಗಳೂರು : ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿಟಿ ಗೋಪಾಲಗೌಡ ಮಾಡಿರುವ ಆರೋಪಗಳಿಗೆ ಸಂಘದ ಮಾಜಿ ಅಧ್ಯಕ್ಷ ಲೋಕಪ್ಪ ಗೌಡ ಸ್ಪಷ್ಟನೆ ನೀಡಿದ್ದಾರೆ. ಸಂಘದ ನೂತನ ಕಟ್ಟಡ ನಿರ್ಮಾಣ...

Related Articles

ಸಿ.ಟಿ ರವಿ ಸ್ವಾಗತ ವೇಳೆ ಆಂಬುಲೆನ್ಸ್ ದುರ್ಬಳಕೆ : ಎಫ್ಐಆರ್‌ ದಾಖಲು

ಚಿಕ್ಕಮಗಳೂರು : ಕಳೆದ ರಾತ್ರಿ ಸಿ.ಟಿ ರವಿ ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ ವೇಳೆ ಅದ್ದೂರಿ ಸ್ವಾಗತ...

ಆಂಬುಲೆನ್ಸ್ ನಲ್ಲಿ ಕಾಪರ್ ಕಳ್ಳ ಸಾಗಾಟ : ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು: ಆಂಬುಲೆನ್ಸ್ ನಲ್ಲಿ ಕೋಟ್ಯಂತರ ಮೌಲ್ಯದ ತಾಮ್ರ ಸಾಗಿಸುತ್ತಿದ್ದ ಖತರ್ನಾಕ್ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ...

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುರ ಆರೋಪ : ಶಿಕ್ಷಕ ಬಂಧನ

ಚಿಕ್ಕಮಗಳೂರು : ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಹ ಶಿಕ್ಷಕ ಒಬ್ಬರನ್ನು ಬಂಧಿಸಿ...

ಕೊನೆಗೂ ಬಾಣಂತಿ ಸಾವು : ಅನುಮಾನಕ್ಕೆ ಕಾರಣವಾದ ಜಿಲ್ಲಾಸ್ಪತ್ರೆ ನಡೆ

ಚಿಕ್ಕಮಗಳೂರು :ಬಳ್ಳಾರಿ ಬಾಣಂತಿರ ಸಾವು ಮಾಸುವ ಮುನ್ನವೇ ಚಿಕ್ಕಮಗಳೂರಿನಲ್ಲೂ ಬಾಣಂತಿ ಒಬ್ಬರು ಮೃತಪಟ್ಟಿದ್ದಾರೆ. ಹೆರಿಗೆ ನಂತರ...