ಚಿಕ್ಕಮಗಳೂರು : ದಶಕದ ನಂತರ ಮಲೆನಾಡಿನಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಸದ್ದು ಮಾಡಿದೆ. ದಟ್ಟ ಅರಣ್ಯದ ಕಾನನದಲ್ಲಿ ಇಂದಿಗೂ ಕೆಂಪು ಉಗ್ರರು ಇರುವ ಬಗ್ಗೆ ಇಂಬು ನೀಡುವ ಘಟನೆ ಒಂದು ನಡೆದಿದ್ದು ಕಳೆದ ಎರಡು ದಿನಗಳ ಹಿಂದೆ ಧರ್ಮಸ್ಥಳದಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು ಕೊಪ್ಪ ಮೂಲದ ಇವರನ್ನು ಶೃಂಗೇರಿ ಪೊಲೀಸ್ ಠಾಣೆಗೆ ಕರೆ ತಂದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರಿಂದ ನಾಡ ಬಂದೂಕು ಒಂದನ್ನು ವಶಕ್ಕೆ ಪಡೆಯಲಾಗಿದೆ.
ದಶಕಗಳ ಬಳಿಕ ಮಲೆನಾಡಲ್ಲಿ ಮತ್ತೆ ನಕ್ಸಲರ ಸದ್ದು ಕೇಳಿ ಬಂದಿದೆ. 2014 ನಂತರ ಮಲೆನಾಡಲ್ಲಿ ಕೆಂಪು ಉಗ್ರರ ಹೆಜ್ಜೆ ಇಲ್ಲ ಎಂದೇ ಹೇಳಲಾಗಿತ್ತು ಈ ನಡುವೆ ಮಲೆನಾಡಿಗೆ ಒತ್ತುವರಿ ತೆರೆವು ಗುಮ್ಮ ಹಾಗೂ ಕಸ್ತೂರಿ ರಂಗನ್ ವರದಿ ಭಯ ಬಹುದೊಡ್ಡ ಚಳುವಳಿಗೆ ನಾಂದಿ ಹಾಡಿತ್ತು. ಈ
ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಗ್ರಾಮಸ್ಥರ ಸಂಪರ್ಕ ಮಾಡುತ್ತಿದ್ದಾರೆ ಕೆಂಪು ಉಗ್ರರು ಎಂದು ಗೊತ್ತಾಗಿದೆ. ಬಂಧಿತ ಶಂಕಿತರಿಂದ ಒಂದು ನಾಡ ಬಂದೂಕು ವಶಕ್ಕೆ ಪಡೆದು ಇಬ್ಬರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ನಕ್ಸಲ್ ನಿಗ್ರಹ ಪಡೆಯಿಂದ ಮಲೆನಾಡಲ್ಲಿ ತೀವ್ರ ಶೋಧ ಕಾರ್ಯ ಕೂಡ ನಡೆಯುತ್ತಿದೆ. ವಶಕ್ಕೆ ಪಡೆದ ಇಬ್ಬರು
ಕೊಪ್ಪ ತಾಲೂಕಿನ ಯಡಗುಂದದ ಬಳಿ ನಕ್ಸಲರ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ನಕ್ಸಲರಿಗೆ ಮಾಹಿತಿ ರವಾನೆ ಸಹಕಾರ ಇವರು ಮಾಡುತ್ತಿದ್ದರು ಎನ್ನಲಾಗುತ್ತಿದೆ.
ಶೃಂಗೇರಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿಯೇ ಎ.ಎನ್.ಎಫ್ ಎಸ್ಪಿ ಹಾಗೂ
ಚಿಕ್ಕಮಗಳೂರು ಎಸ್ಪಿ ಮೊಕ್ಕಾಂ ಹೂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ನಕ್ಸಲರ ಹೆಜ್ಜೆ ಇನ್ನೂ ಮಾಸಿಲ್ಲ ಎಂಬುದು ಗೊತ್ತಾಗುತ್ತಿದೆ
Leave a comment