ಚಿಕ್ಕಮಗಳೂರು : ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಬೇಸತ್ತಿದ್ದು ಗೋ ಬ್ಯಾಕ್ ಪತ್ರ ಬರೆಯುವ ಮೂಲಕ ಪ್ರತಿಭಟನೆ ನಡೆಸಿದರು ಆಶ್ಚರ್ಯ ಪಡುವಂತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಲು ಬರುತ್ತಿದ್ದಾರೆ, ಸ್ವಾತಂತ್ರೊ ತ್ಸವಕ್ಕೆ ದಿನಾಚರಣೆ ನಂತರ ನಾಳೆ ರಾಜ್ಯೋತ್ಸವಕ್ಕೆ ಬರುತ್ತಿದ್ದಾರೆ ದಾರಿ ಬಿಡಿ, ದಾರಿ ಬಿಡಿ ಎಂದು ಅವರ ಸ್ವಾಗತಕ್ಕೆ ಎಲ್ಲರೂ ಸಜ್ಜಾಗಿದ್ದಾರೆ.
ನೆಂಟರು ಹಬ್ಬ ಹರಿದಿನಗಳಿಗೆ ಬಂದಂತೆ ಜಿಲ್ಲೆಗೆ ಬಂದು ಹೋಗುವ ಸಚಿವರ ಬಗ್ಗೆ ಕಾಂಗ್ರೆಸ್ ನವರಿಗೆ ಬೇಸರವಿದೆ .ಆದರೆ ವಿರೋಧ ಪಕ್ಷದ ಬಿಜೆಪಿಯವರು ಏನು ಮಾಡುತ್ತಿದ್ದಾರೆ ? ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಮಳೆಯ ಅವಾಂತರದಿಂದ ಕೆಲವು ಕಡೆ ಭೂಕುಸಿತ ಉಂಟಾಗಿದೆ ರಣಮಳೆಗೆ ಕಾಫಿ,ಕಾಳುಮೆಣಸು, ಅಡಿಕೆ, ಈರುಳ್ಳಿ, ತರಕಾರಿ ಬೆಳೆಗಳು ಸೇರಿದಂತೆ ಭಾರಿ ನಷ್ಟ ಉಂಟಾದರೂ ಇತ್ತ ತಲೆ ಹಾಕದ ಸಚಿವರ ಬಗ್ಗೆ ಏನು ಹೇಳುವುದು. ಈ ಬಗ್ಗೆ ಶಾಸಕರನ್ನು ಪ್ರಶ್ನೆಸಿದರೆ ವಯಸ್ಸಾಗಿದೆ ಏನು ಮಾಡುವುದು ಎಂದು ಸಮರ್ಥನೆ ಮಾಡುತ್ತಾರೆ.
ಚಿನ್ನದ ಸೂಜಿ ಎಂದು ಯಾರಾದರೂ ಕಣ್ಣಿಗೆ ಚುಚ್ಚಿ ಕೊಳ್ಳಲು ಸಾಧ್ಯವೇ ?ಇಂತವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಏಕೆ ಎಂದು ಜನ ಪ್ರಶ್ನಿಸುತ್ತಾರೆ.
ಜಿಲ್ಲೆಯ ಕೆಲ ಇಲಾಖೆ ಕೇಳುವಂತಿಲ್ಲ.ಅಷ್ಟೊಂದು ಭ್ರಷ್ಟಾಚಾರ ತಾಂಡವವಾಡುತ್ತಿದೆ.ಗಣಿ ಇಲಾಖೆ,ಅಬಕಾರಿ ಇಲಾಖೆ, ನೀರಾವರಿ ಇಲಾಖೆ ಸಬ್ ರಿಜಿಸ್ಟರ್ ಕಛೇರಿಗಳು ಲಂಚದ ತಾಣಗಳಾಗಿವೆ ಇದರ ಜೊತೆಗೆ ಜಿಲ್ಲೆಯಲ್ಲಿ ಭೂಕುಸಿತ, ಒತ್ತುವರಿ ಸಮಸ್ಯೆ, ಕಾಡು ಪ್ರಾಣಿಗಳ ಕಾಟ,ಬೆಳೆ ನಷ್ಟ, ಕಸ್ತೂರಿ ರಂಗನ್ ವರದಿ ಭೂತ,ಪ್ರವಾಸಿಗಳ ಉಪಟಾಳ ಹೀಗೆ ಸಾಲು,ಸಾಲು ಸಮಸ್ಯೆಗಳ ಬಗೆಹರಿಸುವ ಬದಲು ತಮ್ಮ ಗರ್ಗೆಖಾನ್ ಎಸ್ಟೇಟ್ ಗೆ ಭೇಟಿ ನೀಡುವಾಗ ಜಿಲ್ಲಾ ಕೇಂದ್ರಕ್ಕೆ ಬಂದು ಹೋಗುವುದು ಎಷ್ಟರಮಟ್ಟಿಗೆ ಸರಿ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
Leave a comment