ಚಿಕ್ಕಮಗಳೂರು : ವರ್ಷಕ್ಕೊಮ್ಮೆ ದರ್ಶನ ನೀಡುವ ಚಿಕ್ಕಮಗಳೂರಿನ ಅದಿ ದೇವತೆ ದೇವಿರಮ್ಮ ಬೆಟ್ಟ ಹತ್ತಲು ಮಳೆಯ ನಡುವೆಯೂ ಸಾವಿರಾರು ಭಕ್ತರು ಆಗಮಿಸಿದ್ದಾರೆ , ಕಿರಿದಾದ ರಸ್ತೆಯಲ್ಲಿ ಜಾರಿಕೆ ಮಧ್ಯೆಯೂ ದೇವೀರಮ್ಮನ ಬೆಟ್ಟ ಹತ್ತುತ್ತಿದ್ದು ಈ ವೇಳೆ ಕೆಲವು ಭಕ್ತರಿಗೆ ನಾನಾ ರೀತಿಯ ತೊಂದರೆಗಳು ಉಂಟಾಗಿವೆ.
ಬೆಟ್ಟದಲ್ಲಿ ಪ್ರಜ್ಞೆ ತಪ್ಪಿ 25 ವರ್ಷದ ಯುವತಿ ಸಿಂಧು ಬಿದ್ದಿದ್ದರೆ
ಬೆಂಗಳೂರು ಮೂಲದ 30 ವರ್ಷದ ದಿವ್ಯಾ ಎಂಬ ಯುವತಿಗೆ ಕಾಲು ಮುರಿತವಾಗಿದೆ. ಲೋ ಬಿಪಿಯಿಂದ ಗುಡ್ಡದಲ್ಲೇ ಸುಸ್ತಾಗಿ ಮಂಗಳೂರಿನ 55 ವರ್ಷದ ಜಯಮ್ಮ ಅಲ್ಲಿಯೇ ಕುಳಿತಿದ್ದಾರೆ. ಅಲ್ಲದೇ ಜಾರಿ ಬಿದ್ದು ತರೀಕೆರೆ ಮೂಲದ ವೇಣು ಎಂಬ ಯುವಕನ ತಲೆಗೆ ಗಾಯವಾಗಿದೆ. ಈ ಎಲ್ಲರನ್ನೂ ಸುರಕ್ಷಿತವಾಗಿ ಸ್ಟ್ರೆಚ್ಚರನಲ್ಲಿ ಪೊಲೀಸರು ಹೊತ್ತು ತಂದಿದ್ದಾರೆ. ಪೊಲೀಸರಿಗೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಇದೇ ದೇವೀರಮ್ಮನ ಬೆಟ್ಟ ಹತ್ತುವಾಗ ಮತ್ತೊಬ್ಬ ಯುವತಿ ಕಾಲು ಉಳುಕಿ, ಪ್ರಜ್ಞೆ ತಪ್ಪಿದ್ದಾಳೆ
ದೇವೀರಮ್ಮ ದರ್ಶನ ಪಡೆದು ಹಿಂದಿರುಗುವಾಗ ಈ ಘಟನೆ ನಡೆದಿದೆ ಯುವತಿಯನ್ನು ಬೇಲೂರು ತಾಲೂಕಿನ ಎಂಸಂದಿ ಗ್ರಾಮದ ಸಿಂಚನ ಎಂದು ಗುರುತಿಸಲಾಗಿದೆ.
ಆಂಬುಲೆನ್ಸ್ ಆಕೆಯನ್ನು ರವಾನೆ ಮಾಡಲಾಗಿದೆ. ಅದಲ್ಲದೇ ಅಸ್ವಸ್ಥ ಗೊಂಡವರನ್ನ ಗುಡ್ಡದಿಂದ ತಂದು ಜಿಲ್ಲಾ ಆಸ್ಪತ್ರೆಗೆ ರೆಸ್ಕ್ಯೂ ಟೀಂ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದೆ. ನಿನ್ನೆ ಸಂಜೆ ಯಿಂದಲೂ ಮಳೆಗೆ ದೇವಿರಮ್ಮ ಗುಡ್ಡ ಜಾರುತ್ತಿರೋ ಘಟನೆಗಳು ನಡೆಯುತ್ತಿವೆ. ಈ ನಡುವೆ ಹಗ್ಗ ಹಿಡಿದೆ ಕಿ.ಮೀ.ಗಟ್ಟಲೇ ಗುಡ್ಡವನ್ನು ಭಕ್ತರು ಹತ್ತುತ್ತಿರೋ ದೃಶ್ಯ ಸಾಮಾನ್ಯವಾಗಿದೆ. ಚಿಕ್ಕಮಗಳೂರು ತಾಲೂಕಿನ ಪಶ್ಚಿಮ ಘಟ್ಟಗಳ ತಪ್ಪಲಿನ ದೇವೀರಮ್ಮನ ಗುಡ್ಡ ಇಂದು ಭಕ್ತರಿಂದ ತುಂಬಿ ತುಳುಕುತ್ತಿದೆ.
Leave a comment