ಚಿಕ್ಕಮಗಳೂರು : ಮನೆ ಖಾಲಿ ಮಾಡಿಲ್ಲ ಎಂಬ ಕಾರಣಕ್ಕೆ ಬಾವನನ್ನೇ ಭಾಮೈದುನ ಇಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯಲ್ಲಿ ಈ ಹತ್ಯೆ ಘಟನೆ ನಡೆದಿದ್ದು 25 ಸಾವಿರಕ್ಕೆ ಮೃತ ಮಂಜು ತನ್ನ ಮನೆಯನ್ನು ಮಾರಿದ್ದ ಮಂಜು 3 ವರ್ಷಗಳ ಹಿಂದೆಯೇ ತನ್ನ ಸ್ವಂತ ಭಾವನಿಗೆ ಈ ಮನೆ ಮಾರಾಟ ಮಾಡಿದ್ದು ಮನೆ ಮಾರಿದ್ದರೂ 3 ವರ್ಷಗಳಿಂದ ಆರೋಪಿ ಗೋಪಾಲ್ ಮನೆ ಖಾಲಿ ಮಾಡಿರಲಿಲ್ಲ, ಇದನ್ನು ಪ್ರಶ್ನಿಸಿ ಮನೆ ಖಾಲಿ ಮಾಡುವಂತೆ ನಿತ್ಯ ಜಗಳ ನಡೆಯುತ್ತಿತ್ತು ಇಂದು ವಿಕೋಪಕ್ಕೆ ಹೋಗಿ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಭಾವನಾದ ಮಂಜುನನ್ನು ಗೋಪಾಲ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಘಟನೆಯಿಂದ ತಮಿಳು ಕಾಲೋನಿ ಜನರು ಬೆಚ್ಚಿ ಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ
ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಆರೋಪಿ ಗೋಪಾಲ್ ನನ್ನು ಬಂಧನ ಮಾಡಿದ್ದಾರೆ. ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Leave a comment