ಚಿಕ್ಕಮಗಳೂರು : ಜಾನಪದ ಕ್ಷೇತ್ರದಲ್ಲಿ ಮುಗುಳಿ ಲಕ್ಮೀದೇವಮ್ಮನವರ ಹೆಸರು ನಾಡಿನಲ್ಲಿ ಚಿರಪರಿಚಿತ. ಲಕ್ಷೀದೇವಮ್ಮನವರಿಗೆ ಈಗ ಎಪ್ಪತ್ತೈದು ವರ್ಷಗಳ ಸನಿಹ ಹಾಡಲು ನಿಂತರೆ ಇಪ್ಪತೈದರ ಹರೆಯದಂತ ಧ್ವನಿ ಯಾರಪ್ಪ ಇವರು ಎಂದು ಕಿವಿಯಾಲಿಸುವ ಜನ.ಇಳಿ ವಯಸ್ಸಿನಲ್ಲೂ ಹರೆಯದವರಂತೆ ಕಾರ್ಯಗಳಲ್ಲಿ ಹಾಡುತ್ತಾ ಇದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಮುಗುಳಿ ಎಂಬ ಗ್ರಾಮದ ಹಿಂದುಳಿದ ಕುಟುಂಬದಲ್ಲಿ ತಂದೆ,ತಾಯಿ,ಅಣ್ಣನ ಜೊತೆಗೆ ಬಾಲ್ಯದಲ್ಲಿ ಭಜನೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಹಾಡಿನ ಜಾಡು ಹಿಡಿದವರು.
ಭಜನೆ,ಕೋಲಾಟ,ಲಾವಣಿ,ಸೋಬಾನೆ ಗೀತೆಗಳು,ಬಿಸೇಕಲ್ಲು ಹಾಡಿನ ಜೊತೆಗೆ ಜಾನಪದ ಗೀತೆಗಳನ್ನು ಹಾಡಿದ್ದಾರೆ ಹಾಡುತ್ತಿದ್ದಾರೆ.
1981 ರಲ್ಲಿ ಮುಗಳಿಯಲ್ಲಿ ಅರುಣೋದಯ ಯುವತಿ ಮಂಡಳಿ ಸ್ಥಾಪಿಸಿ ಅಕ್ಷರ ಅಭ್ಯಾಸ ಮತ್ತು ಹಾಡುಗಾರಿಕೆ ಕಲಿಸಿರುವ ಇವರಿಗೆ ಜಾನಪದಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ನಾಡಿನ ಸಾವಿರಾರು ಪ್ರಶಸ್ತಿ ಮತ್ತು ಗೌರವ ದೊರೆತಿವೆ.
ಜಿಲ್ಲೆಯಲ್ಲಿ ಪ್ರಾರಂಭವಾದ ಅಕ್ಷರ ಧಾರ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಕೇರಳ ಮತ್ತು ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ತರಭೇತಿಯನ್ನು ನೀಡಿದ್ದಾರೆ ಜಾನಪದ ಅಕಾಡೆಮಿ ಸದಸ್ಯರಾಗಿದ್ದ ಈ ಹಿರಿಯ ಜೀವಕ್ಕೆ ನಾಡಿನ ರಾಜ್ಯೋತ್ಸವ ಪ್ರಶಸ್ತಿ ಸಿಗಲಿಲ್ಲ ಎಂಬ ಕೊರಗಿದೆ.ಹಳ್ಳಿಯಿಂದ ದಿಲ್ಲಿವರೆಗೆ ಕಲೆಯಲ್ಲಿ ತೊಡಗಿಸಿಕೊಂಡ ಲಕ್ಮೀದೇವಮ್ಮನವರಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜ್ಞಾನವಿದ್ದರೆ ಸ್ಪಂದಿಸಿ ಇವರ ಆಯ್ಕೆ ಮಾಡಿದರೆ ಅರ್ಹರನ್ನು ಗುರುತಿಸಿದ ಸಾರ್ಥಕತೆಗೆ ಭಾಜನರಾಗುತ್ತಾರೆ.
Leave a comment