Home ತರೀಕೆರೆ ದಸರಾ ಜಂಗಿ ಕುಸ್ತಿಗೆ ಅದ್ದೂರಿಗೆ ಚಾಲನೆ
Homenamma chikmagalurTarikere

ತರೀಕೆರೆ ದಸರಾ ಜಂಗಿ ಕುಸ್ತಿಗೆ ಅದ್ದೂರಿಗೆ ಚಾಲನೆ

Share
Share

ಚಿಕ್ಕಮಗಳೂರು :
ತರೀಕೆರೆ :

ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆಯುವ ಕುಸ್ತಿ ಪಂದ್ಯ ಬಿಟ್ಟರೆ ತರೀಕೆರೆಯಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗಳು ಹೆಸರು ಮತ್ತು ಕೀರ್ತಿಗೆ ಭಾಜನವಾಗಿದೆ.

ಪಾಳೇಗಾರರ ಕಾಲದಲ್ಲಿ ಪ್ರಾರಂಭವಾದ ತರೀಕೆರೆ ಕುಸ್ತಿ ಪಂದ್ಯಗಳು ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುತ್ತಿವೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಅನ್ಯ ರಾಜ್ಯಗಳಿಂದ ಕುಸ್ತಿಪಟುಗಳು ಆಗಮಿಸುತ್ತಾರೆ. ಇಲ್ಲಿನ “ಬೆಳ್ಳಿ ಗಧೆ” ಕುಸ್ತಿ ಎಲ್ಲೆಡೆ ಪ್ರಖ್ಯಾತಿ ಪಡೆದಿದೆ.
ಈ ಹಿಂದೆ ಕುಸ್ತಿಪಟುಗಳಿಗೆ ಮನೆಯಲ್ಲಿ ಆತಿಥ್ಯ ನೀಡುವುದರ ಮೂಲಕ ತರೀಕೆರೆಯ ಜನ ಕುಸ್ತಿಕಾಳಗಕ್ಕೆ ಉತ್ತೇಜನ ನೀಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಶ್ರೀ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಕುಸ್ತಿ ಪಟುಗಳಿಗೆ ಆತಿಥ್ಯ ನೀಡಲಾಗುತ್ತಿದೆ. ದಿವಂಗತ ಮಾಜಿ ಶಾಸಕ ಟಿ.ಹೆಚ್.ಶಿವಶಂಕರಪ್ಪನವರ ನೇತೃತ್ವದಲ್ಲಿ ಅಧುನಿಕ ಸ್ಪರ್ಶ ನೀಡಿ ಕುಸ್ತಿ ವೀಕ್ಷಿಸಲು ಬರುವ ಜನರಿಗೆ ಕುಳಿತುಕೊಳ್ಳಲು ಸ್ಟೇಡಿಯಂ ಸ್ವರೂಪ ಕೊಡಲಾಗಿದೆ. ಇಂದಿನಿಂದ ಮೂರು ದಿನಗಳಕಾಲ ನಡೆಯುವ ಕುಸ್ತಿ ಕಾಳಗಕ್ಕೆ ಚಾಲನೆ ನೀಡಲಾಗಿದ್ದು ಮಂಗಳವಾರ ಬೆಳ್ಳಿ ಗಧೆ ಕುಸ್ತಿ ನಡೆಯುತ್ತದೆ.

ಶ್ರೀ ಗುರು ರೇವಣಸಿದ್ದೇಶ್ವರ ಕುಸ್ತಿ ಸಂಘದ ಅಧ್ಯಕ್ಷರಾದ ಜಯಸ್ವಾಮಿ ಕಾರೆ ನೇತೃತ್ವದಲ್ಲಿ ಅಯೋಜನೆ ಮಾಡಲಾಗಿದೆ. ಹಿರಿಯ ಕುಸ್ತಿ ಪಟುಗಳಾದ ವಗ್ಗಪ್ಪರ ಮಂಜಣ್ಣ, ಸೀನಣ್ಣ,ಪುರಸಭಾ ಅಧ್ಯಕ್ಷ ವಂಸತಕುಮಾರ್, ಉಪಾಧ್ಯಕ್ಷ ಗಿರಿಜಾ ಪ್ರಕಾಶ್, ಪುರಸಭಾ ಸದಸ್ಯರಾದ ದಾದಪೀರ್, ಟಿ.ಜಿ.ಮಂಜುನಾಥ್ ಮಾಜಿ ಪುರಸಭಾ ಅಧ್ಯಕ್ಷ ಬೈಟು ರಮೇಶ್ ಮತ್ತು ವಿವಿಧ ಸಮಾಜದ ಮುಖಂಡರು ಜಂಗಿಕುಸ್ತಿ ಪಂದ್ಯವಳಿ ಯಶಸ್ವಿ ಯಾಗಲೇಂದು ಶುಭಹಾರೈಸಿದರು.

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಕೇಳೊರೆ ಇಲ್ಲದಂತಾಗಿದೆ ಕಾಂಗ್ರೆಸ್ ಕಾರ್ಯಕರ್ತರ ಗೋಳು

ಚಿಕ್ಕಮಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಸಮೀಪಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಐದು ಜನ ಮುಖಂಡರು ಆಯಾಕಟ್ಟಿನ ನಿಗಮ ಮಂಡಳಿಯ ಗೂಟದ...

ಪದವೀಧರರ ಸಹಕಾರ ಸಂಘದಲ್ಲಿ ಯಾವುದೇ ಅಕ್ರಮ ನಡೆದಿಲ್ಲ : ಲೋಕಪ್ಪಗೌಡ

ಚಿಕ್ಕಮಗಳೂರು : ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿಟಿ ಗೋಪಾಲಗೌಡ ಮಾಡಿರುವ ಆರೋಪಗಳಿಗೆ ಸಂಘದ ಮಾಜಿ ಅಧ್ಯಕ್ಷ ಲೋಕಪ್ಪ ಗೌಡ ಸ್ಪಷ್ಟನೆ ನೀಡಿದ್ದಾರೆ. ಸಂಘದ ನೂತನ ಕಟ್ಟಡ ನಿರ್ಮಾಣ...

Related Articles

ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ

ಚಿಕ್ಕಮಗಳೂರು :ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ* ಸಾಹಿತಿ ಶಿಕ್ಷಕ ಮೇಕನಗದ್ದೆ ಲಕ್ಷ್ಮಣಗೌಡರಿಗೆ ಸಮ್ಮೇಳನದ *ಮೂಡಿಗೆರೆಯಲ್ಲಿ...

ಒಕ್ಕಲಿಗರ ಹೆಮ್ಮೆಯ ಬೆಳ್ಳಿ ಭವನ ಲೋಕಾರ್ಪಣೆಗೆ ಸಿದ್ದ

ಚಿಕ್ಕಮಗಳೂರು : ಜಿಲ್ಲಾ ಒಕ್ಕಲಿಗರ ಸಂಘವು 25 ವರ್ಷಗಳ ಹಿಂದೆ ವಿಜಯಪುರದಲ್ಲಿ ಕಲ್ಯಾಣ ಮಂಟಪ ನಿರ್ಮಾಣ...

ವ್ಯಕ್ತಿ ಓರ್ವ ವ್ಯಕ್ತಿತ್ವ ಹಲವು : ಗೊ.ರು.ಚ ಸರ್ವಾಂತರ್ಯಾಮಿ

ಚಿಕ್ಕಮಗಳೂರು : ಗೊರುಚ ಅವರಿಗೆ ನೆನ್ನೆಯಿಂದ ರಾಜ್ಯದ ಎಲ್ಲಾ ಕಡೆಯಿಂದ ಶುಭಾಶಯಗಳು ಹರಿದು ಬರುತ್ತಿವೆ. ಅದರಲ್ಲೂ...

ವಕ್ಫ್ ವಿರುದ್ಧ ಆಹೋರಾತ್ರಿ ಬಿಜೆಪಿ ಅಹವಾಲು ಸ್ವೀಕಾರ

ಚಿಕ್ಕಮಗಳೂರು : ಜಿಲ್ಲೆಯ ವಕ್ಫ್ ಆಸ್ತಿ ಸಮಸ್ಯೆ ಬಗೆಹರಿಸಲು ರೈತರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ...