ಚಿಕ್ಕಮಗಳೂರು: ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತ್ಯಗೊಂಡಿದೆ
ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಇಂದು ಒಟ್ಟು 40 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 4 ಸ್ಥಾನಗಳು ಅವಿರೋಧ ಆಯ್ಕೆಯ ಹಾದಿಯಲ್ಲಿವೆ. ಪ್ರಮುಖವಾಗಿ ಎನ್.ಆರ್. ಪುರದಿಂದ ಕೆ.ಸಿ. ಜಯಪಾಲ ಮತ್ತು ಮೂಡಿಗೆರೆಯಿಂದ ಹಳಸೆ ಶಿವಣ್ಣ ಅವರು ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಗಳಾಗಿದ್ದು, ಅವಿರೋಧ ಆಯ್ಕೆ ಖಚಿತಗೊಂಡಿದೆ.
ಚುನಾವಣಾ ಕಣದಲ್ಲಿ ರಾಜಕೀಯದ ಘಟಾನುಘಟಿಗಳಾದ ಮಾಜಿ ಸಚಿವ ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್, ಡಿ.ಎಸ್. ಸುರೇಶ್ ಮತ್ತು ಎಂ.ಪಿ. ಕುಮಾರ್ ಸ್ವಾಮಿ ಅವರುಗಳು ವಿವಿಧ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿರುವುದು ಚುನಾವಣಾ ಕಣದ ರಂಗೇರುವಂತೆ ಮಾಡಿದೆ.
ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪರವಾಗಿ ಚಿಕ್ಕಮಗಳೂರು ಸ್ಥಾನಕ್ಕೆ 8 ನಾಮಪತ್ರಗಳು, ಕಡೂರು ತಾಲೂಕಿನ ಎರಡು ಸ್ಥಾನಗಳಿಗೆ 3 ನಾಮಪತ್ರಗಳು ಹಾಗೂ ತರೀಕೆರೆ ತಾಲೂಕಿನ ಎರಡು ಸ್ಥಾನಗಳಿಗೆ ಕೆ.ಆರ್. ಆನಂದಪ್ಪ ಮತ್ತು ಡಿ.ಎಸ್. ಸುರೇಶ್ ಕಣದಲ್ಲಿದ್ದಾರೆ.
ಇತರ ಕ್ಷೇತ್ರಗಳಲ್ಲೂ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕೊಪ್ಪ ತಾಲೂಕಿನ ಒಂದು ಸ್ಥಾನಕ್ಕೆ ಪ್ರಜ್ವಲ್, ರವೀಂದ್ರ ಮತ್ತು ಸತೀಶ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶೃಂಗೇರಿ ತಾಲೂಕಿನಲ್ಲಿ ದಿನೇಶ್ ಹೆಗ್ಡೆ ಮತ್ತು ಪ್ರಸನ್ನ ನಾಮಪತ್ರ ಸಲ್ಲಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಟಿ.ಕೆ. ಜಗದೀಶ್ ಮತ್ತು ಎಸ್.ಡಿ. ಸೋನಾಲ್ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಜಿಲ್ಲಾ ವ್ಯವಸಾಯೋತ್ಪನ್ನ ಸಹಕಾರ ಸಂಘ ಮತ್ತು ಇತರ ಸಹಕಾರ ಸಂಘಗಳ ಕ್ಷೇತ್ರಗಳಿಗೂ ಹಿರಿಯ ಮುಖಂಡರು ನಾಮಪತ್ರ ಸಲ್ಲಿಸಿದ್ದು, ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆಯ ನಂತರ ಅಂತಿಮ ಚಿತ್ರಣ ಲಭ್ಯವಾಗಲಿದೆ.
40 nominations submitted for 13 director positions in DCC Bank
Leave a comment