ಚಿಕ್ಕಮಗಳೂರು : ರಾಜ್ಯ ಸರ್ಕಾರಿ ನೌಕರರ ಚುನಾವಣೆ ನಡೆದು ಹದಿನೇಳು ದಿನಗಳು ಕಳೆದಿವೆ. ನೌಕರರ ಸಂಘದ ಪದಾಧಿಕಾರಿಗಳು ನಾಪತ್ತೆಯಾಗಿರುವುದು ಮಾತ್ರ ಆಶ್ಚರ್ಯ ಉಂಟುಮಾಡಿದೆ.
ಯಾವ ರಾಜಕೀಯ ಪುಡಾರಿಗಳಿಗೂ ಕಡಿಮೆ ಇಲ್ಲದಂತ ಪೈಪೋಟಿ ,ಜಿದ್ದಾಜಿದ್ದಿ ,ಹಣಬಲ,ತೋಳ್ ಬಲ, ಪ್ರತಿರೋಧವಿದ್ದರು ಭರ್ಜರಿ ಜಯ ಸಾಧಿಸಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾಗಿ ದೇವೇಂದ್ರ ಅಯ್ಕೆ ಆಗಿದ್ದು ಬಿಟ್ಟರೆ ಆದನ್ನು ಸಂಭ್ರಮಿಸುವುದಿರಲಿ ಅರಗಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.ಎಂ,ಎಲ್,ಸಿ, ಬೋಜೇಗೌಡರ ವಿರುದ್ಧ ಆರೋಪ ಮಾಡಿದ್ದರ ಹಿನ್ನೆಲೆಯಲ್ಲಿ ದೇವೇಂದ್ರರನ್ನು ಅಮಾನತು ಮಾಡಿ ಕುಂದಾಪುರಕ್ಕೆ ಸ್ಥಳ ನಿಯುಕ್ತಿ ಮಾಡಲಾಗಿದ್ದು ಅಂದಿನಿಂದ ಚಿಕ್ಕಮಗಳೂರು ತೊರೆದಿರುವ ದೇವೇಂದ್ರ ಆಂಡ್ ಗ್ಯಾಂಗ್ ಬೆಂಗಳೂರು ಟೂ ಬೆಳಗಾವಿಗೆ ಅಪ್ ಆಂಡ್ ಡೌನ್ ಮಾಡುತ್ತಿದೆ ಎಂದು ಅವರ ವಿರೋಧಿ ಗ್ಯಾಂಗ್ ಹೇಳುತ್ತಿದೆ.
ಬೆಂಗಳೂರಿನಲ್ಲಿ ರಾಜ್ಯ ಅಧ್ಯಕ್ಷ ರಾಗಿ ಮತ್ತೊಮ್ಮೆ ಅಯ್ಕೆ ಬಯಸಿರುವ ಷಡಕ್ಷರಿ ಟೀಮ್ ಜೊತೆಗೆ ಶಾಲು ಹೊದಿಸಿಕೊಂಡು ಖುಷಿ,ಖುಷಿಯಿಂದ ಸ್ಥಳ ಮಾರ್ಪಾಡು ಮಾಡಿಸಿಕೊಳ್ಳಲು ಹರಸಾಹಸ ಪಡುತ್ತಿರುವ ದೇವೇಂದ್ರ ಯಾವುದಕ್ಕೂ ಕಮ್ಮಿ ಇಲ್ಲ ಎಂದು ಸೆಡ್ಡು ಹೊಡೆಯುತ್ತಿದ್ದು ಇದಕ್ಕೆ ಭೋಜೇಗೌಡ ಮತ್ತು ಗಾಯತ್ರಿ ಶಾಂತೇಗೌಡ ಸುಮ್ಮನೆ ಬಿಡುವುದು ಕಷ್ಟ, ಕಷ್ಟ ಆದರೂ ಅಂತಿಮವಾಗಿ ನ್ಯಾಯಾಲಯ ದಲ್ಲಿ ಬಗೆಹರಿಸಿಕೊಳ್ಳುವುದು ಅನಿವಾರ್ಯ ಎನ್ನುತ್ತಾರೆ. ಹಣ ಖರ್ಚು ಮಾಡಿ ಸೋತಿರುವ ಹೇಮಂತ್ ಕುಮಾರ್ ಇದು ಬೇಕಿತ್ತಾ ಎಂದರೆ ಗೆದ್ದರೂ ತಪ್ಪಲಿಲ್ಲಾ ಸಂಕಷ್ಟ ಎಂದು ದೇವೇಂದ್ರ ಗೋಳಾಡುತ್ತಿರುವುದು ಮಾತ್ರ ಸತ್ಯ. ಈ ನಡುವೆ ಭೋಜೇಗೌಡ ಭೇಟಿ ಮಾಡಿ ಮಾಫಿ ಕೇಳಲು ಯತ್ನಿಸಿದರು ಯಾವುದೇ ಪ್ರಯೋಜವಾಗಿಲ್ಲ ಎಂದು ತಿಳಿದು ಬಂದಿದೆ
Leave a comment