ಚಿಕ್ಕಮಗಳೂರು: ಬೇಸಿಗೆ ಆರಂಭವಾಗುವ ಮೊದಲೇ ಅರಣ್ಯದಲ್ಲಿ ಬೆಂಕಿ ತಗುಲಿ ಅರಣ್ಯದಲ್ಲಿ ಬೆಲೆ ಬಾಳುವ ಮರ,ಗಿಡಗಳು ಸುಟ್ಟು ಹೋಗಿವೆ.
ಕಳಸ ತಾಲ್ಲೂಕಿನ ಆನೆಗುಡ್ಡ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ ಸಂಭವಿಸಿರುವುದನ್ನು ಡ್ರೋನ್ ಕ್ಯಾಮರದಲ್ಲಿ ಸೆರೆ ಹಿಡಿಯಲಾಗಿದೆ.
ಜನ ನಿಭೀಡ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡ ಆಶ್ಚರ್ಯ ಮತ್ತು ಅನುಮಾನ ಮೂಡಿಸುತ್ತಿದೆ.ಬಿಸಿಲಿನಿಂದ ಬೆಂಕಿ ತಾಗಿ ಅರಣ್ಯಕ್ಕೆ ಹಾನಿಯಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆಯವರು
ಅರಣ್ಯದ ತುದಿಯಲ್ಲಿ ಬೆಂಕಿ ಬಿದ್ದಿರುವುದರಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಅರಣ್ಯದ ಒಂದು ಭಾಗ ಹಸಿರಿನಿಂದ ಕಂಗೊಳಿಸುತ್ತಿದ್ದರೆ ಇನ್ನೊಂದು ಭಾಗ ಸುಟ್ಟು ಕರುಕಲಾಗಿರುವ ದೃಶ್ಯ ಕಂಡುಬರುತ್ತಿದೆ.
ಈ ಬಾರಿ ಹಿಂದಿಗಿಂತ ಹೆಚ್ಚು ಬಿಸಿಲು ಇರುತ್ತದೆ ಎಂದು ಹವಾಮಾನ ಇಲಾಖೆಯವರು ತಿಳಿಸಿರುವುದರಿಂದ ಅರಣ್ಯ ಇಲಾಖೆಯವರು ಮುನ್ನೆಚ್ಚರಿಕೆ ಜೊತೆಗೆ ಕಟ್ಟುನಿಟ್ಟಿನ ಕ್ರಮವಹಿಸ ಬೇಕಾಗಿದೆ.
Wildfire in Kalasa’s Anegudda forest
Leave a comment