Home namma chikmagalur chikamagalur ಕಾಫಿನಾಡಿನ ಹಲವೆಡೆ ಕಾಡಾನೆಗಳ ಸಂಚಾರ – ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ
chikamagalurLatest Newsnamma chikmagalur

ಕಾಫಿನಾಡಿನ ಹಲವೆಡೆ ಕಾಡಾನೆಗಳ ಸಂಚಾರ – ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ

Share
Share

ಚಿಕ್ಕಮಗಳೂರು: ಕಾಫಿನಾಡಿನ ಹಲವೆಡೆ ಕಾಡಾನೆಗಳ ಸಂಚಾರ ತೀವ್ರಗೊಂಡಿದ್ದು, ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯಪಡೆ (ETF) ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ನೀಡಿದೆ.

ಕಬ್ಬಿನಹಳ್ಳಿ ಸುತ್ತಮುತ್ತ ಎರಡು ಕಾಡಾನೆಗಳು ಬೀಡುಬಿಟ್ಟಿದ್ದು, ಇದರಿಂದಾಗಿ ಉಳುವಗಿಲು, ಹುಕ್ಕುಂದ, ಕಡಬನಹಳ್ಳಿ, ಇಂದಾವರ, ತಳಿಹಳ್ಳಿ, ಜಾಕನಹಳ್ಳಿ, ಚಿಕ್ಕೋಳಲೆ ಹಾಗೂ ಹಿರಿಕೊಳಲೆ ಗ್ರಾಮಸ್ಥರು ತೀವ್ರ ಜಾಗರೂಕತೆಯಿಂದ ಇರಬೇಕೆಂದು ಸೂಚಿಸಲಾಗಿದೆ.

ವಿಶೇಷವಾಗಿ ಬೆಳಿಗ್ಗೆ ತೋಟಗಳಿಗೆ ಹೋಗುವ ರೈತರು ಮತ್ತು ಕಾರ್ಮಿಕರು ಹೆಚ್ಚಿನ ನಿಗಾ ವಹಿಸುವಂತೆ ಕೋರಲಾಗಿದೆ. ಮತ್ತೊಂದೆಡೆ, ಜಾಗರ್ ಖಾನ್ ಕಾಡಿನಿಂದ ಒಂಟಿ ಅನೆಯೊಂದು ಸಂಚರಿಸುತ್ತಿದ್ದು ಬಾರದಹಳ್ಳಿ, ಕಾರ್‌ಬೈಲು, ಚಂದ್ರಪುರ, ಕಮ್ಮರಗೋಡು, ದುಂಡುಗ, ಶುಭನಗರ ಹಾಗೂ ಕಸ್ಕೆಬೈಲ್ ಭಾಗದಲ್ಲಿ ಆತಂಕ ಸೃಷ್ಟಿಸಿದೆ.

ಅಲ್ಲದೆ, ದೊಡ್ಡಗಳ್ಳ ಎಸ್ಟೇಟ್ ಪಕ್ಕದ ಕಾಡಿನಲ್ಲಿ ಕಾಡಾನೆಗಳ ಗುಂಪು ಪತ್ತೆಯಾಗಿದ್ದು, ನಂದಿಬೆಟ್ಟ, ಆನೆ ಮಲ್ಲಪ್ಪ ಗುಡ್ಡ, ಹೊಸಪುರ, ಕಲ್ಲುಗುಡ್ಡ ಹಾಗೂ ಜಿ. ಹೊಸಹಳ್ಳಿ ಗ್ರಾಮಗಳ ಸುತ್ತಮುತ್ತಲೂ ತುರ್ತು ಎಚ್ಚರಿಕೆ ನೀಡಲಾಗಿದೆ.

ಬಾಳೆಹೊನ್ನೂರು ವಲಯದ ಅಂಡವಾನೆ, ಎಲೆಕಲ್, ಬಿಳುಕೊಪ್ಪ, ಕುಂಬ್ರುಮನೆ ಹಾಗೂ ಬನ್ನೂರು ಭಾಗದಲ್ಲೂ ಒಂಟಿ ಆನೆಯ ಸಂಚಾರವಿರುವ ಬಗ್ಗೆ ವರದಿಯಾಗಿದೆ. ಕಾಡಾನೆಗಳ ಓಡಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ತೋಟಗಳಿಗೆ ನೀರು ಹಾಯಿಸಲು ಹೋಗುವುದು ಅಥವಾ ವಿನಾಕಾರಣ ಓಡಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು. ಒಂದು ವೇಳೆ ಆನೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಚಿಕ್ಕಮಗಳೂರು ಆನೆ ಕಾರ್ಯಪಡೆಯ ನಿಯಂತ್ರಣ ಕೊಠಡಿ ಸಂಖ್ಯೆ 7204004261 ಕ್ಕೆ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Wild elephants moving in many parts of Coffee Country – Urgent warning to the public

Share

Leave a comment

Leave a Reply

Your email address will not be published. Required fields are marked *

Don't Miss

ನೈತಿಕ ಪೊಲೀಸ್ ಗಿರಿ ಪ್ರಕರಣ – ಗಂಭೀರವಾಗಿ ಪರಿಗಣನೆ

ಚಿಕ್ಕಮಗಳೂರು: ಕಾಫಿನಾಡಿನ ಸಂತೇ ಮೈದಾನದ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್...

ಕಲ್ಲು ಎಸೆತ ಪ್ರಕರಣ: ಇಬ್ಬರು ಹಿಂದೂ ಯುವಕರ ಬಂಧನ

ಚಿಕ್ಕಮಗಳೂರು: ಕಾಫಿನಾಡಿನ ವಿಜಯಪುರ ಬಡಾವಣೆಯಲ್ಲಿ ನಡೆದಿದ್ದ ಹಿಂದೂ ಮನೆಯೊಂದರ ಮೇಲೆ ನಡೆದಿದ್ದ ಕಲ್ಲು ಎಸೆತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪೊಲೀಸರು ಇಬ್ಬರು ಹಿಂದೂ ಯುವಕರನ್ನು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ...

Related Articles

ಪ್ರವಾಸ ಮುಂದೂಡಲು ಜಿಲ್ಲಾಡಳಿತ ಮನವಿ

ಚಿಕ್ಕಮಗಳೂರು:  ಐ.ಡಿ. ಪೀಠ ಹಾಗೂ ಸುತ್ತಮುತ್ತಲಿನ ತಾಲ್ಲೂಕಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ ಹಾಗೂ...

ಫೆ.೨೮-ಮಾ.೧೭ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಫೆಬ್ರವರಿ ೨೮ ರಿಂದ ಮಾರ್ಚ್ ೧೭ರವರೆಗೆ ನಡೆಯಲಿದ್ದು, ಪರೀಕ್ಷೆಗಳನ್ನು...

ಕಾಡುಕೋಣ ದಾಳಿಗೆ ಕೃಷಿಕನಿಗೆ ಗಾಯ

ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಜನತೆಗೆ ಈಗ ಕಾಡುಕೋಣಗಳ ಉಪಟಳ ಹೊಸ ಆತಂಕ ತಂದೊಡ್ಡಿದೆ. ಕೊಪ್ಪ ತಾಲೂಕಿನ...

ಇನ್ವೆಸ್ಟ್ಮೆಂಟ್ ನಲ್ಲಿ ಅಧಿಕ ಲಾಭ ವೈದ್ಯರೊಬ್ಬರಿಗೆ 21.85 ಲಕ್ಷ ರೂ. ವಂಚನೆ

ಚಿಕ್ಕಮಗಳೂರು: ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ನಲ್ಲಿ ಅಧಿಕ ಲಾಭವಿದೆ ಎಂದು ನಂಬಿಸಿ ವೈದ್ಯರೊಬ್ಬರಿಗೆ 21.85 ಲಕ್ಷರು...