ಚಿಕ್ಕಮಗಳೂರು: ಮಲೆನಾಡಿನಲ್ಲಿ ಹಲವಾರು ವರ್ಷಗಳಿಂದ ಕಾಟದಿಂದ ಜೀವ ಉಳಿಸಿಕೊಳ್ಳಲು ಪರದಾಡುವಂತಹ ಪರಿಸ್ಥಿತಿ ಉಲ್ಬಣಗೊಂಡಿದೆ.
ಆನೆ ಕಾಟದಿಂದ ಪ್ರಾಣದ ಜೊತೆಗೆ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲದಂತ ದುಸ್ಥತಿತಿ ಇದ್ದು ಅರಣ್ಯ ಇಲಾಖೆ ಸತ್ತ ಶವದಂತಾಗಿದೆ.
ಆನೆ ಕಾಟ,ಚಿರತೆ ಕಾಟದ ಜೊತೆಗೆ ಕಾಡು ಕೋಣದ ಕಾಟ ಬೇರೆ ಹೆಚ್ಚಾಗಿದ್ದು ಈಗಾಗಲೇ ಮೂರು ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಹಲವು ಬಾರಿ ಅರಣ್ಯ ಇಲಾಖೆಯ ಗಮನಕ್ಕೆ ತಂದರು ಅರಣ್ಯರೋಧನವಾಗಿದೆ.
ಕಾಡುಕೋಣದ ತಡೆಗಟ್ಟಲು ಆಗ್ರಯಿಸಿ ಇಂದು ಕಳಸದಲ್ಲಿ ಸ್ವಯಂ ಪ್ರೇರಿತ ಬಂದ್ ಆಚರಿಸಲಾಗುತ್ತಿದೆ.
ಬೆಳಗ್ಗೆಯಿಂದಲೇ ಕಳಸ ಮತ್ತು ಸುತ್ತಮುತ್ತಲಿನ ಜನ ಅಂಗಡಿ ಮುಚ್ಚಿ ಬಂದ್ ಮಾಡಿ ಅರಣ್ಯ ಇಲಾಖೆ ಮತ್ತು ಸರ್ಕಾರದ ವಿರುದ್ದ ಮೌನವಾಗಿ ಪ್ರತಿಭಟಿಸುತ್ತಿದ್ದಾರೆ.
ಸರ್ಕಾರ ಮತ್ತು ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಕಾಟ ತಪ್ಪಿಸದಿದ್ದರೆ ಜನ ಬೀದಿಗಿಳಿಯುವ ದಿನಗಳು ದೂರವಿಲ್ಲ ಎಂದು ಹೇಳುತ್ತಿದ್ದಾರೆ.
Voluntary bandh in Kalasa to condemn wild animal menace
Leave a comment