ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮತ್ತು ಐ.ಡಿ.ಪೀಠ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿ ವಾಸಿಗಳಿಗೆ ಪ್ರವೇಶ ಶುಲ್ಕ ಮತ್ತು ಪಾಸ್ ವಿತರಿಸುವ ನಿರ್ಧಾರ ಖಂಡಿಸಿ ಅತ್ತಿಗುಂಡಿ, ಮಹಲ್, ಬಿಸಗ್ನಿ ಮಠ, ಕೆಸವಿನಮನೆ, ಪಂಡರವಳ್ಳಿ, ಉಕುಡ, ಚಂದ್ರಗಿರಿ, ಗೌರಿಶಂಕರದ ನೂರಾರು ಗ್ರಾಮಸ್ಥರು ಶುಕ್ರವಾರ ಅತ್ತಿಗುಂಡಿ ಗ್ರಾಮದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ವಾಹನ ಚಾಲಕರು, ವ್ಯಾಪಾರಿಗಳು ಸ್ವಯಂಪ್ರೇರಿತ ಬಂದ್‌ಗೊಳಿಸಿದರು. ನಂತರ ಗ್ರಾಮ ಪಂಚಾಯಿತಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಪ್ರವೇಶ ಶುಲ್ಕ ಮತ್ತು ಪಾಸ್ ಕೊಡುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಪಿಡಿಓ ಮಂಜುನಾಥ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ ಪಾಸ್ ವಿತರಿಸುವ ಸಂಬಂಧ ಗಿರಿಪ್ರದೇಶ ನಿವಾಸಿಗಳ ಜೊತೆ ಚರ್ಚಿಸಿ ನಂತರ ನಿರ್ಣಯ ಕೈಗೊಳ್ಳುವ ಬದಲು, ಏಕಾಏಕಿ ಪಾಸ್ ವ್ಯವಸ್ಥೆ ಜಾರಿಗೆ ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ಗ್ರಾಮಾಡಳಿತವು ನಿವಾಸಿಗಳ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರೂ ಜಿಲ್ಲಾಧಿಕಾರಿಗಳು ದಿಡೀರನೇ ಸ್ಥಳೀಯರಿಗೆ ಪಾಸ್ ಕಡ್ಡಾಯಗೊಳಿಸುವುದು ನ್ಯಾಯಸಮಂಜಸವಲ್ಲ ಎಂದು ಹೇಳಿದರು.
ಎನ್‌ಎಂಡಿಸಿ ಚೆಕ್‌ಪೋಸ್ಟ್‌ನಿಂದ ಮುಂದೆ ಸುಮಾರು ಎರಡು ಸಾವಿರ ಕುಟುಂಬಗಳ ಪೈಕಿ ಏಳು ಸಾವಿರ ಮಂದಿ ವಾಸಿಸುತ್ತಿದ್ದಾರೆ. ಮದುವೆ ಕಾರ್ಯ ಅಥವಾ ಸಾವು-ನೋವುಗಳು ಸಂಭವಿಸಿದರೆ ದೂರದ ಊರಿನಿಂದ ಬರುವಂಥ ಬಂಧುಗಳು, ಸ್ನೇಹಿತರು ಪಾಸ್‌ನಲ್ಲಿಯೇ ಆಗಮಿಸಬೇಕೇ ಎಂದು ಪ್ರಶ್ನಿಸಿದ ಅವ ರು ಆ ರೀತಿಯ ನಿರ್ಣಯ ಕೈಗೊಂಡಲ್ಲಿ ಯಾವುದೇ ಕಾರ್ಯ ನಡೆದರೂ ಚೆಕ್‌ಪೋಸ್ಟ್‌ನಲ್ಲಿ ಕುಟುಂಬಸ್ಥ ರು ತಿಕಾಣಿ ಹೂಡಬೇಕಾಗುತ್ತದೆ ಎಂದರು.
ಗಿರಿಭಾಗಕ್ಕೆ ದಿನಕ್ಕೆ ಒಂದು ಬಸ್ಸಿನ ವ್ಯವಸ್ಥೆಯಿದ್ದು ಈ ಹಿಂದಿನಂತೆ ಖಾಸಗೀ ಬಸ್‌ಗಳ ಸಂಚಾರವಿಲ್ಲ. ಇದನ್ನು ಹೊರತುಪಡಿಸಿ ಉಳಿದಂತ ಗ್ರಾಮಗಳಿಗೆ ಬಹುತೇಕ ಸ್ವಂತ ವಾಹನಗಳಲ್ಲಿ ತೆರಳಬೇಕಾಗಿದೆ. ಜೊ ತೆಗೆ ಈ ವ್ಯಾಪ್ತಿಯಲ್ಲಿ ತೋಟ, ಕಟ್ಟಡ ಅಥವಾ ಇನ್ನಿತರೆ ಕೆಲಸಗಳಿಗೆ ತೆರಳಲು ಸ್ಥಳೀಯರಿಗೆ ಪಾಸ್ ಕಡ್ಡಾ ಯವಾದರೆ ಜೀವನ ರೂಪಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ ಎಂದು ಹೇಳಿದರು.
ಪರಿಸರ ಕಾಳಜಿ ದೃಷ್ಟಿಯಿಂದ ಜಿಲ್ಲಾಡಳಿತ ಆದೇಶದಂತೆ ಗಿರಿಭಾಗದ ಅಂಗಡಿಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ಮಾರಾಟಕ್ಕೆ ಕಡಿವಾಣ ಹಾಕಿದೆ. ಆದರೆ ಸ್ಥಳೀಯರು ತಮ್ಮ ತಮ್ಮ ಮನೆಗಳಿಗೂ ತೆರಳಲು ಸ್ವತ ಂತ್ರವಿಲ್ಲದೇ ಅಪ್ಪಣೆ ಪಡೆಯಬೇಕೇ ಎಂದ ಅವರು ಈ ನಿರ್ಣಯ ಕೇವಲ ಗುಬ್ಬಿ ಮೇಲೆ ಬ್ರಹ್ಮಸ್ತ್ರದಂತಾ ಗಿದ್ದು ಬಲಾಡ್ಯ ರೆಸಾರ್ಟ್ ಹಾಗೂ ಎಸ್ಟೇಟ್ ಮಾಲೀಕರಿಗೆ ಅನ್ವಯಿಸುವುದಿಲ್ಲ ಎಂದರು.
ಪ್ರವಾಸಿಗರು ಗಿರಿಪ್ರದೇಶ ಭೇಟಿ ನೀಡಲು ಜಿಲ್ಲಾಡಳಿತ ಇಂತಿಷ್ಟು ವಾಹನಗಳ ಸಂಚಾರ ನಿಗಧಿಪಡಿ ಸಿರುವುದು ಉತ್ತಮ ಕೆಲಸ. ಆದರೆ ಈ ಭಾಗದಲ್ಲಿ ಮುಳ್ಳಪ್ಪಸ್ವಾಮಿ, ಸೀತಳಯ್ಯನಗಿರಿ, ದತ್ತಾತ್ರೇಯಸ್ವಾಮಿ, ಬಿಸಗ್ನಿಮಠ, ಬೈರೇಶ್ವರ ಬೆಟ್ಟ, ಹೊನ್ನಮ್ಮದೇವಿಹಳ್ಳ, ಮುತ್ತಿನಮ್ಮ ದೇವಾಲಯ, ದರ್ಗಾ ಸೇರಿದಂತೆ ಅನೇಕ ಪವಿತ್ರ ಶ್ರದ್ದಾಕೇಂದ್ರಗಳಿರುವ ಕಾರಣ ಪಾಸ್ ನಿರ್ಧಾರವನ್ನು ಕೈಬಿಡಬೇಕಿದೆ ಎಂದರು.
ಈ ಪವಿತ್ರ ಕೇಂದ್ರಗಳಿಗೆ ಬರುವ ಬಹುತೇಕ ಭಕ್ತಾಧಿಗಳು ಅನಕ್ಷರಸ್ಥರಾದ ಕಾರಣ ಆನ್‌ಲೈನ್ ಬುಕ್ಕಿಂ ಗ್ ವ್ಯವಸ್ಥೆಯ ಅರಿವಿಲ್ಲ ಹಾಗೂ ಗೊಂದಲಗಳು ಉಂಟಾಗಲಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೈಗೊಂ ಡಿರುವ ನಿರ್ಧಾರವನ್ನು ಕೈಬಿಡದಿದ್ದಲ್ಲಿ ಗಿರಿಪ್ರದೇಶದ ನಿವಾಸಿಗಳು ಒಟ್ಟಾಗಿ ದೊಡ್ಡಮಟ್ಟಿನಲ್ಲಿ ಉಗ್ರ ಪ್ರತಿಭ ಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಿವಕುಮಾರ್, ಶಾಂತಕುಮಾರ್, ಸತೀಶ್, ಮುನ್ನ, ಅಬ್ದುಲ್ ಸು ಮಾನ್, ಆದಿಲ್, ಬಾಬಿ, ಇಬ್ರಾಹಿಂ, ಮಹಮ್ಮದ್ ಅಪ್ಸರ್, ಸೈಯದ್ ನಜೀಮ್, ಸಿದ್ದಿಕ್, ಉಮೇಶ್, ಸುಂದರೇಶ್, ಹೊನ್ನಪ್ಪ, ನವೀನ್, ನಾಗರಾಜ್, ಸೈಯದ್ ಮುಕ್ಪಾಶ, ಪ್ರೇಮ, ಭರತ್, ಧರ್ಮರಾಜ್, ಚನ್ನ ಕೇಶವ, ಶಹಬುದ್ಧೀನ್, ಅವಿನಾಶ್ ಮತ್ತಿತರರು ಹಾಜರಿದ್ದರು.
Villagers protest against entry fee-pass to hill stations
Leave a comment