ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಯಗಟಿ ಗ್ರಾಮದ ಕುಮಾರ್(27) ಹಾಸನ ಜಿಲ್ಲೆಯ ಪುರ್ಲೆಹಳ್ಳಿಯ ಸುಚಿತ್ರ(21) ಎಂಬ ಪ್ರೇಮ ಪಕ್ಷಿಗಳು ಪ್ರೇಮಿಗಳ ದಿನವೇ ಕಡೂರಿನ ಅಂಬೇಡ್ಕರ್ ಪುತ್ಥಳಿ ಮುಂದೆ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಪ್ರೇಮ ಎಂಬ ಮಾಯೆ ಯಾವಾಗ ಎಲ್ಲಿಂದ ಆರಂಭವಾಗಿ ಹೇಗೆ ದಡ ಸೇರುತ್ತದೆ ಎಂಬುದಕ್ಕೆ ಕುಮಾರ್ ಮತ್ತು ಸುಚಿತ್ರ ವಿವಾಹವೇ ಸಾಕ್ಷಿ.
ಕುಮಾರ್ ಒಂಬತ್ತನೇ ತರಗತಿ ಓದಿದ ದಲಿತ ಯುವಕ ಸುಚಿತ್ರ ದ್ವಿತೀಯ ಪಿಯುಸಿ ಮುಗಿಸಿರುವ ಲಂಬಾಣಿ ಜನಾಂಗದವರು ಜಾತಿ ಮೀರಿದ ಪ್ರೀತಿ ಹುಟ್ಟದ್ದು ಆಕಸ್ಮಿಕವಾಗಿ
ಕುಮಾರ್ ಅರಸೀಕೆರೆ ಸಮೀಪದ ಜೇನು ಕಲ್ಲು ದೇವಾಲಯಕ್ಕೆಎರಡು ವರ್ಷದ ಹಿಂದೆ ಹೋದಾಗ ಸುಚಿತ್ರಳ ಪರಿಚಯವಾಗುತ್ತದೆ.ಸುಚಿತ್ರ ಪ್ರೇಮ ನಿವೇದನೆ ಮಾಡಿದಾಗ ಕುಮಾರ್ ಕೂಡ ಒಪ್ಪಿದ್ದಾರೆ.
ಎರಡು ವರ್ಷಗಳಿಂದ ಆಸೆ,ಆಕಾಂಕ್ಷೆಗೆ ಪ್ರೇಮಿಗಳ ದಿನವೇ ಅಂಬೇಡ್ಕರ್ ಪುತ್ಥಳಿ ಯ ಮುಂದೆ ವಿವಾಹವಾಗಿದೆ.
ಸುಚಿತ್ರಗೆ ವರನ ಹುಡುಕಲು ತಯಾರಿ ನಡೆದಿತ್ತು ಹೀಗಾಗಿ ಕುಮಾರ್ ಜೊತೆಗೆ ಬಂದು ಸಮಾಜದ ಮತ್ತು ಸಂಘಟನೆಯ ಮುಖಂಡರಾದ ಗಂಗರಾಜ್ ಮತ್ತಿತರರು ಜಿಗಣೇಹಳ್ಳಿ ನೀಲಕಂಠಪ್ಪ ಮದುವೆಗೆ ಸಾಕ್ಷಿಯಾಗಿದ್ದಾರೆ.
ಮದುವೆಯಾಗುವುದಾದರೆ ಅಂಬೇಡ್ಕರ್ ಪುತ್ಥಳಿಯ ಮುಂದೆ ಆಗಬೇಕೆಂಬ ಕುಮಾರ್ ಆಸೆ ಈಡೇರಿದೆ.ಸುಚಿತ್ರಳನ್ನು ಓದಿಸ ಬೇಕೆಂಬ ಬಯಕೆ ಇದ್ದರು ಸುಚಿತ್ರ ಸಂಸಾರದ ದೋಣಿಯಲ್ಲಿ ಸಾಗುವ ಆಸೆಗೆ ಶುಭವಾಗಲಿ.
Valentine’s Day is the day for lovers to get married.
Leave a comment