ಚಿಕ್ಕಮಗಳೂರು: ಚಿಕ್ಕಮಗಳೂರು ಕಾಂಗ್ರೆಸ್ ನಲ್ಲಿ ಕೋಲಾಹಲದ ಜೊತೆಗೆ ಅಪಸ್ವರ ಬಹಿರಂಗವಾಗಿ ಇದ್ದರು ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವಂತೆ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ.
ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಕಳೆದರು ಯಾರು ಹೇಳುವವರು ಇಲ್ಲ ಕೇಳುವವರು ಇಲ್ಲ ಎಂದು ಬಹಿರಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ದೂರುತ್ತಿದ್ದಾರೆ.
ಕಾಂಗ್ರೆಸ್ ಶಾಸಕರುಗಳ ಬಗ್ಗೆ ಮತ್ತು ಪದಾಧಿಕಾರಿಗಳ ಬಗ್ಗೆ ಬಹಳ ಖಾರವಾಗಿ ಮಾತನಾಡುತ್ತಾ ಸಭೆಗಳನ್ನು ನಡೆಸುತ್ತಿದ್ದಾರೆ.
ಮುಸ್ಲಿಂ ಸಮುದಾಯದವರು ಈಗಾಗಲೇ ಹಲವು ಬಾರಿ ಸಭೆ ಸೇರಿ ತಮಗೆ ಯಾರು ಸ್ಪಂದಿಸುತ್ತಿಲ್ಲ ಎಂದು ದೂರಿದರು ಕೇಳುವವರು ಇಲ್ಲ ಎಂದು ಮೊನ್ನೆ ಮಾಜಿ ಜಿ.ಪಂ.ಅಧ್ಯಕ್ಷ ಮಹಮದ್ ನೇತೃತ್ವದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.ಜಿಲ್ಲೆಯ ಶಾಸಕರುಗಳು ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದುಡಿದ ತಪ್ಪಿಗೆ ಪಶ್ಚಾತ್ತಾಪ ಪಡಬೇಕಾಗಿದೆ ಎಂದಿದ್ದಾರೆ.
ಕ್ರಿಶ್ಚಿಯನ್ ಸಮುದಾಯದವರು ನೂರಕ್ಕೆ ನೂರರಷ್ಟು ಕಾಂಗ್ರೆಸ್ ಗೆ ಮತ ಚಲಾಯಿಸಿದ ತಪ್ಪಿಗೆ ನಮ್ಮ ಸಮುದಾಯ ನಿರ್ಲಕ್ಷ್ಯ ಮಾಡಲಾಗಿದೆ. ಜೊತೆಗೆ ಯಾವುದೇ ಸ್ಥಾನ ಮಾನ ಅಥವಾ ಜವಬ್ದಾರಿ ನೀಡಿಲ್ಲ ಎಂದು ರೂಬಿನ್ ಮೋಸೆಸ್ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಗೆಲುವಿಗೆ ದಲಿತ ಸಂಘಟನೆಗಳ ಕೊಡಿಗೆ ಮರೆಯುವಂತಿಲ್ಲ ಆದರೆ ನಮ್ಮನ್ನು ಯಾರೂ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ ಎಂದು ದಂಟರಮಕ್ಕಿ ಶ್ರೀನಿವಾಸ್ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಇನ್ನೂ ಕಾಂಗ್ರೆಸ್ ನವರ ಮನಸ್ಥಿತಿ ಮತ್ತು ವರ್ತನೆ ಸಹಿಸಲು ಸಾಧ್ಯವಿಲ್ಲ. ಪರ್ಯಾಯ ರಾಜಕಾರಣ ಅನಿವಾರ್ಯ ಎಂದಿದ್ದಾರೆ.
ಈ ಎಲ್ಲಾ ಬೆಳವಣಿಗೆಗೆ ಕಾಂಗ್ರೆಸ್ ನ ಶಾಸಕರುಗಳ ಅಧಿಕಾರದ ಹಪಾಹಪಿ ಅಧಿಕಾರದ ಮುಂದೆ ಲೆಕ್ಕಕ್ಕಿಲ್ಲ ಎಂಬ ಉದಾಸೀನ ವರ್ತನೆಗಳು ಕಾರಣ ಎನ್ನಲಾಗಿದೆ. ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಯಾರ ಮಾತನ್ನು ಕೇಳಲ್ಲಾ ಜೊತೆಗೆ ಪಾಳೇಗಾರಕೆಯವರನ್ನು ಬಿಡಲ್ಲ ಜೊತೆಗೆ ಹಿಂದು ಮಹಾಗಣಪತಿ ಕಾರ್ಯಕ್ರಮ ದಲ್ಲಿ ಮಾತನಾಡಿದ್ದನ್ನು ಮುಸ್ಲಿಂ ಸಮುದಾಯದವರು ಸಹಿಸಲು ಸಾಧ್ಯವಿಲ್ಲ ಎನ್ನಲಾಗಿದೆ.
ಚಿಕ್ಕಮಗಳೂರು ಶಾಸಕ ಹೋದ ಪುಟ್ಟ ಬಂದ ಪುಟ್ಟ ಎನ್ನುವಂತೆ ಯಾವುದೇ ಕೆಲಸ ಹೇಳಿದರು ಇದೊಂದು ಬಿಟ್ಟು ಹೇಳಿ ಎಂಬ ಮಾತು ನಾಲಿಗೆ ತುದಿಯಲ್ಲಿ ಇಟ್ಟುಕೊಂಡಿದ್ದಾರೆ ಎನ್ನುತ್ತಿದ್ದಾರೆ.ಅಂತಹ ಎಂ.ಎಲ್.ಮೂರ್ತಿಯೇ ಸುಮ್ಮನಿರುವಂತೆ ಮಾಡಿರುವಾಗ ಇವರುಗಳ ಬಗ್ಗೆ ಸಮಯ ಬಂದಾಗ ನೋಡುವ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ.
ತರೀಕೆರೆ ಶಾಸಕ ಶ್ರೀನಿವಾಸ್ ಕುಟುಂಬ ರಾಜಕಾರಣ ಬಿಟ್ಟು ಒಂದು ಹೆಜ್ಜೆ ಮುಂದಿಡಲ್ಲಾ ಎಂದು ಮುಖಂಡರು ಕಾರ್ಯಕರ್ತರ ನೋವು.ಇನ್ನೂ ಕಡೂರು ಕ್ಷೇತ್ರದ ಶಾಸಕ ಆನಂದ್ ಗೆ ರಿಯಲ್ ಎಸ್ಟೇಟ್ ಮುಖ್ಯ ಎಂದರೆ ಶೃಂಗೇರಿ ಶಾಸಕರಾದ ಟಿ.ಡಿ.ರಾಜೇಗೌಡರು ಏನೂ ಹೇಳಿದರು ಮರೆತುಬಿಡುತ್ತಾರೆ.
ಕಾಂಗ್ರೆಸ್ ಪದಾಧಿಕಾರಿಗಳು ಸರ್ಕಾರದ ಹುದ್ದೆಯಲ್ಲಿ ಕಂಗೊಳಿಸುತ್ತಾ ಕರಟಕ ದಮನಕರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಜೊತೆಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯ ಕಾಂಗ್ರೆಸ್ ಬಿಟ್ಟು ಹೋಗಲು ಸಾಧ್ಯವಿಲ್ಲ. ಇನ್ನೂ ದಲಿತ ಸಂಘಟನೆಗಳು ಹಲವಾರು ಇವೆ ಇವರು ಹೋದರೆ ಅವರು ಬರುತ್ತಾರೆ ಅವರು ಹೋದರೆ ಇನ್ನೊಂದು ಸಂಘಟನೆಯವರು ಬರುತ್ತಾರೆ ಎಂಬ ಭ್ರಮೆಯಲ್ಲಿ ಇರುವುದರಿಂದ ಸದ್ಯಕ್ಕೆ ಪರಿಹಾರ ಇಲ್ಲ ಎಂದು ಹಿರಿಯ ರಾಜಕಾರಣಿಯ ಅಭಿಪ್ರಾಯ ವಾಗಿದೆ.
Uproar in Congress
Leave a comment