ಚಿಕ್ಕಮಗಳೂರು: ನಗರ ಸಮೀಪದ ಗಿರಿಪ್ರದೇಶದಲ್ಲಿ ಧಾರಾಕಾರ ಮಳೆಸುರಿಯುತ್ತಿದ್ದು, ಇದರ ನಡುವೆಯೇ ಗಿರಿಭಾಗಕ್ಕೆ ಭಾರೀ ಪ್ರವಾಸಿಗರ ದಂಡು ಭೇಟಿಕೊಟ್ಟಿದೆ.
ಕಾರು, ಬೈಕ್, ಟಿಟಿ ಸೇರಿದಂತೆ ೧೮೫೦ ವಾಹನಗಳು ಗಿರಿಭಾಗಕ್ಕೆ ಪ್ರವಾಸಿಗರನ್ನು ಕರೆದೊಯ್ದಿದೆ. ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರು-ಜೀಪ್ ಮುಖಾಮುಖಿ ಡಿಕ್ಕಿಯಾಗಿದ್ದು,ಎರಡು ವಾಹನದ ಮುಂಭಾಗ ಜಖಂಗೊಂಡಿದೆ.
ಕಾರು ಮುಳ್ಳಯ್ಯನಗಿರಿಯಿಂದ ಕೆಳಗೆ ಇಳಿಯುವಾಗ ಮಾರ್ಗ ಮಧ್ಯೆ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅನಾಹುತ ಸಂಭವಿಸಿಲ್ಲ.ಗಿರಿಯಲ್ಲಿ ವಾಹನ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುವಂತಾಯಿತು.
ವಾಹನಗಳನ್ನು ನಿಯಂತ್ರಿಸಲಾಗದೆ ೨ ಗಂಟೆಗಳ ಕಾಲ ವಾಹನಗಳನ್ನು ಪೊಲೀಸರು ತಡೆಹಿಡಿಯ ಬೇಕಾಯಿತು.ಗಿರಿಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾದ ಮೇಲೆ ಮತ್ತೆ ವಾಹನಗಳನ್ನ ಬಿಡಲಾಗಿದೆ. ಪೊಲೀಸರು ಸುರಿಯುತ್ತಿರೋ ಮಳೆ ನಡುವೆಯೇ ಪೊಲೀಸರು ವಾಹನ ನಿಯಂತ್ರಿಸಲು ಮುಂದಾಗಬೇಕಾಯಿತು.
ಜಿಲ್ಲಾಡಳಿತ ಮುಂದಿನ ವಾರದಿಂದ ಗಿರಿಪ್ರದೇಶಕ್ಕೆ ಪ್ರವಾಸಿಗರು ಬೇಟಿನೀಡಬೇಕಾದರೆ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು, ಸ್ಥಳೀಯ ವಾಹನಗಳನ್ನು ಹೊರತುಪಡಿಸಿ ಬೆಳಿಗ್ಗೆ ೬ರಿಂದ ಮಧ್ಯಾಹ್ನ ೧೨ಗಂಟೆಯವರೆಗೆ ೬೦೦ ವಾಹನಗಳನ್ನು ಮಧ್ಯಾಹ್ನ ೧ರಿಂದ ಸಂಜೆ ೬ರವರೆಗೆ ೬೦೦ ವಾಹನಗಳನ್ನು ಬಿಡುತ್ತಿದ್ದು, ಆಗ ವಾಹನ ದಟ್ಟಣೆ ಕಡಿಮೆಯಾಗುವ ಸಾಧ್ಯತೆಗಳಿವೆ. ಭಕ್ತರು ಗಿರಿಗೆ ಬರಬೇಕಾದರೆ ಅವರು ಸಹ ಆನ್‌ಲೈನ್ ಬುಕ್ಕಿಂಗ್ ಮಾಡಬೇಕಾಗಿದೆ.
Tourists flock to the hilly region amid torrential rains
Leave a comment