ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್ ಪಲ್ಟಿ ಆಗಿರುವ ಘಟನೆ ಕೊಪ್ಪ ತಾಲೂಕಿನ ಸೀಗೋಡು ಬಳಿ ನಡೆದಿದೆ.
ನಿದ್ದೆಗಣ್ಣು, ಘಾಟಿ ರಸ್ತೆಯಲ್ಲಿ ಚಾಲಕನ ಕಂಟ್ರೋಲ್ ತಪ್ಪಿದ ಹಿನ್ನೆಲೆಯಲ್ಲಿ 17 ಜನರಿದ್ದ ಬಸ್ಸಿನಲ್ಲಿ ಡ್ರೈವರ್ ಹಾಗೂ ಕಾರ್ತಿಕ್, ಮಧು, ಚೈತ್ರ ಎಂಬ ಮೂವರಿಗೆ ಗಾಯ ವಾಗಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 17 ಜನ ಸ್ನೇಹಿತರು ಆಗುಂಬೆಗೆ ಹೋಗುತ್ತಿದ್ದರು. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Tourist bus overturns after driver loses control
Leave a comment