ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪ್ರಕರಣಗಳ ಸಭೆ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಸುನೀಲ್ ವಲ್ಲಾಪುರೆ,ಅನಿಲ್ ಕುಮಾರ್, ಎಸ್.ಪಿ.ಸುಂಕನೂರ್,ಎಂ.ಪಿ ಸುಜಾ ಕುಶಾಲಪ್ಪ ಮತ್ತು ಶಾಸಕ ಹೆಚ್.ಡಿ.ತಮ್ಮಯ್ಯ ಭಾಗವಹಿಸಿದ್ದರು.ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು ಅದಕ್ಕೆ ಒತ್ತು ನೀಡಬೇಕು ಮತ್ತು ಇರುವ ಪ್ರಕರಣಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳಲು ಸಭೆ ನಿರ್ಣಯಿಸಿತು.
ಸಭೆಯ ಸ್ವಾರಸ್ಯ ಎಂದರೆ ಈ ಸಭೆ ನಡೆಸಲು ಹಲವು ಇಲಾಖೆಗಳಿಂದ ವಸೂಲಿ ಮಾಡಿರುವುದು .ಬಹುತೇಕ ಇಲಾಖೆಗಳಿಂದ ಇಂತಿಷ್ಟು ಎಂದು ವಸೂಲಿ ಮಾಡಿದವರು ಯಾರು? ಮತ್ತು ಏಕೆ ? ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿಲ್ಲ ಬಂದಂತವರಿಗೆ ಭರ್ಜರಿ ಗಿಫ್ಟ್ ಕೊಡಲು ಎನ್ನಲಾಗಿದೆ.ಇವರಿಗೆಲ್ಲಾ ಟಿ.ಎ. ಡಿ.ಎ.ಉಚಿತ ವಸತಿ,ಊಟ,ತಿಂಡಿ ಓಡಾಡಲು ಕಾರು ಸರ್ಕಾರ ಕೊಟ್ಟರು ಕೂಡ ಇಲಾಖಾವಾರು ವಸೂಲಿ ಮಾಡಿದವರು ಯಾರು ? ಇನ್ನೂ ಸ್ವಾರಸ್ಯ ಸಂಗತಿಯೆಂದರೆ ಇವರಿಗೆಲ್ಲಾ ಸಭೆ ನೆಪ ಮಾತ್ರಕ್ಕೆ ,ಬಂದಿದ್ದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡರ ಮಗನ ಮದುವೆಗೆ ಎಂಬುದು ಬಹಿರಂಗ ಸತ್ಯ.
ಸಭೆಯು ಆಯಿತು, ಭರ್ಜರಿ ಗಿಫ್ಟ್ ಸಿಕ್ಕತು ಮತ್ತು ಮದುವೆಯಲ್ಲಿ ಭಾಗಿಯಾಗಿ ಮೂರು ದಿನ ಗ್ಯಾರಂಟಿ ಸರ್ಕಾರದ ಸೇವೆ ಅನುಭವಿಸದ್ದು ಆಯಿತು .
Tourism development meeting!
Leave a comment