ಚಿಕ್ಕಮಗಳೂರು : ಆಂಬುಲೆನ್ಸ್ ನಲ್ಲಿ ಕಾಪರ್ ಸ್ಕ್ರಾಪ್ ಕಳವು ಮಾಡಿದ್ದ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ನಗರ ರಾಂಪುರದಲ್ಲಿರುವ ಕಾಪರ್ ಸಲ್ಫೇಟ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮೂರು ಜನ ಖದೀಮರು ಸುಮಾರು 16,320 ಕೆ.ಜಿ. ಕಾಪರ್ ಸ್ಕ್ರಾಪ್ ಕಳ್ಳತನ ಮಾಡಿದ್ದರು. ನಗರ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿ 88.21 ಲಕ್ಷ ಮೌಲ್ಯದ 12,425 ಕೆ.ಜಿ. ಕಾಪರ್ ಸ್ಕ್ರಾಪ್ ಮತ್ತು 2 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಚಾರಣೆಯಲ್ಲಿ ಪಿ.ಎಸ್.ಐ. ರವಿ ಜಿ ಎ, ಶಂಭುಲಿಂಗನಗೌಡ ಮತ್ತು ಸತೀಶ್ ಕೆ ಎಸ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ನಂಜಪ್ಪ, ದಿನೇಶ್, ಪ್ರದೀಪ ಹೆಚ್ ಜಿ, ನವೀನ ಎ ಎಸ್, ಮಹಮ್ಮದ್ ರಫೀಕ್ ಮತ್ತು ರವೀಂದ್ರ ಇದ್ದರು.
Leave a comment