Home namma chikmagalur chikamagalur ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುವುದೇ ಚೈತ್ರೋತ್ಸವದ ಉದ್ದೇಶ
chikamagalurHomeLatest Newsnamma chikmagalur

ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುವುದೇ ಚೈತ್ರೋತ್ಸವದ ಉದ್ದೇಶ

Share
Share

ಚಿಕ್ಕಮಗಳೂರು: ಜಿಲ್ಲೆಯರೈತರು ಮತ್ತು ಬೆಳೆಗಾರರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವುದೇಚೈತ್ರೋತ್ಸವದಉದ್ದೇಶಎಂದುಜಿಲ್ಲಾಧಿಕಾರಿಎಂ.ಎನ್ ನಾಗರಾಜ್ ತಿಳಿಸಿದರು.

ಅವರುಇಂದು ನಗರದ ನೇತಾಜಿ ಸುಭಾಷ್‌ಚಂದ್ರಬೋಸ್‌ಜಿಲ್ಲಾಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿಏರ್ಪಡಿಸಲಾಗಿದ್ದಚೈತ್ರೋತ್ಸವ-ಶ್ವಾನ ಉತ್ಸವ-೨೦೨೬ನ್ನು ಉದ್ಘಾಟಿಸಿ ಮಾತನಾಡಿದರು.

ಗಣರಾಜ್ಯೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಚೈತ್ರೋತ್ಸವವನ್ನುಅರ್ಥಪೂರ್ಣವಾಗಿಆಚರಿಸುವ ಮೂಲಕ ಜನರಿಗೆಅಗತ್ಯ ಮಾಹಿತಿ ನೀಡಲಾಗುತ್ತಿದು, ಅತೀ ಹೆಚ್ಚಿನ ಸಂಖ್ಯೆಯಲ್ಲಿರೈತರು, ಬೆಳೆಗಾರರು ಈ ಫಲಪುಷ್ಪ ಪ್ರದರ್ಶನ ಹಾಗೂ ಚೈತ್ರೋತ್ಸವದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ತಂಡ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಬೇರೆ ಬೇರೆಜಿಲ್ಲೆಯ ಉದ್ಯಮಶೀಲ ಚಟುಚಟಿಕೆಗಳನ್ನು ಪ್ರೋತ್ಸಾಹಿಸಲು ಫಲಪುಷ್ಪ ಪ್ರದರ್ಶನದಲ್ಲಿ ಅವಕಾಶ ಕಲ್ಪಿಸಲಾಗಿದೆಎಂದು ಶ್ಲಾಘಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಯಾರಾಗುವ ಇಳಕಲ್ ಮತ್ತು ಮೊಳಕಾಲ್ಮೂರು ಸೀರೆಗಳ ಪ್ರದರ್ಶನದಜೊತೆಗೆ ಶ್ವಾನ ಪ್ರದರ್ಶನದಲ್ಲಿ ಚಾರ್ಲಿ-೭೭೭ ಚಿತ್ರದಲ್ಲಿ ಕಾಣಿಸಿಕೊಂಡ ಶ್ವಾನ ಸಹ ಭಾಗವಹಿಸಿದೆ. ಜೊತೆಗೆ ವಿವಿಧ ತಳಿಯ ಜಾನುವಾರು, ಕುರಿ, ಕೋಳಿ ಪ್ರದರ್ಶನ ಸಹ ಏರ್ಪಡಿಸಲಾಗಿದೆಎಂದರು.

ಜಿಲ್ಲೆಯಲ್ಲಿಅತೀ ಹೆಚ್ಚು ಕೃಷಿಕರು, ರೈತರು, ಬೆಳೆಗಾರರು, ರೈತಕಾರ್ಮಿಕರುಇದ್ದು, ಅವರಿಗೆ ಈ ಚೈತ್ರೋತ್ಸವದ ಮೂಲಕ ಅಗತ್ಯ ಮಾಹಿತಿಯನ್ನುಒದಗಿಸಲಾಗುತ್ತಿದ್ದು, ಈ ಬಗ್ಗೆ ಯುವಜನಾಂಗಕ್ಕೂ ಪೂರಕವಾಗಿ ಪರಿಚಯಿಸಲಾಗುತ್ತಿದೆಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿಜಿಲ್ಲೆಯಜನತೆ ಪಾಲ್ಗೊಳ್ಳುವುದರಿಂದ ಮನರಂಜನೆಜೊತೆಗೆ ಫಲಪುಷ್ಪ ಪ್ರದರ್ಶನ, ವಿವಿಧ ಪ್ರಾಣಿಗಳ ಪ್ರದರ್ಶನಎಲ್ಲವೂ ನೆನಪಾಗಿ ಉಳಿಯುತ್ತದೆ. ಈವರೆಗೆ ೨ ಲಕ್ಷಜನ ಈ ಪ್ರದರ್ಶನವನ್ನು ವೀಕ್ಷಣೆ ಮಾಡಿದ್ದಾರೆಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕನಿಷ್ಠ ೩.೫೦ ಲಕ್ಷಜನರು ವೀಕ್ಷಣೆ ಮಾಡಬಹುದುಎಂದು ನಿರೀಕ್ಷಿಸಲಾಗಿದೆಎಂದರು.

ಜಿಲ್ಲೆಯಜನರಿಗೆ ಪ್ರವಾಸೋದ್ಯಮ ಚಟುವಟಿಕೆಗಳ ಬಗ್ಗೆ ಅತೀ ಹೆಚ್ಚಿನ ಮಾಹಿತಿ ನೀಡಲಾಗುವುದು. ಇದರಿಂದಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆಎಂದು ಹೇಳಿದರು.

ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್‌ಕೀರ್ತನ ಮಾತನಾಡಿ, ಇಂದು ಏರ್ಪಡಿಸಿರುವ ಡಾಗ್ ಶೋ ಮತ್ತು ಪಶುಗಳ ಪ್ರದರ್ಶನದಲ್ಲಿ ಹೊರರಾಜ್ಯಗಳ ಪ್ರಾಣಿಗಳು ಪ್ರದರ್ಶಿಸಲ್ಪಡುತ್ತಿದ್ದು, ಆಸ್ಟ್ರೇಲಿಯಾದಡಾಗ್ ಹಾಗೂ ಹಳ್ಳಿಕಾರ್, ಅಮೃತ್ ಮಹಲ್‌ಕಾವಲ್ ತಳಿಗಳು ನೋಡುಗರ ನಿಬ್ಬೆರಗಾಗಿಸುತ್ತಿವೆಎಂದು ಹೇಳಿದರು.

ಜಿಲ್ಲೆಯಜನತೆಕುಟುಂಬದೊಂದಿಗೆ ಆಗಮಿಸಿ ಚೈತ್ರೋತ್ಸವದಲ್ಲಿ ಪಾಲ್ಗೊಂಡುಇದನ್ನು ಸವಿಯಬೇಕೆಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆಯಉಪನಿರ್ದೇಶಕಡಾ. ಮೋಹನ್, ಕೃಷಿ ಇಲಾಖೆ ಜಂಟಿ ನಿರ್ದೇಶಕತಿರುಮಲೇಶ್, ಡಾ. ಲೋಕೇಶ್, ಡಾ. ನಾಗರಾಜ್, ಮಾದವರಾವ್, ಪ್ರಮೋದ್ ಸೇರಿದಂತೆಜಿಲ್ಲೆಯಎಲ್ಲಾ ಮುಖ್ಯ ಪಶುವೈದ್ಯಾಧಿಕಾರಿಗಳು ಭಾಗವಹಿಸಿದ್ದರು.

The purpose of Chaitrotsava is to provide information about horticultural crops to farmers.

Share

Leave a comment

Leave a Reply

Your email address will not be published. Required fields are marked *

Don't Miss

ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

ಚಿಕ್ಕಮಗಳೂರು:  ಸಂಗೊಳ್ಳಿ ರಾಯಣ್ಣ ನಾಡು ಅಪ್ರತಿಮೆ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ಕಪಿಮುಷ್ಠಿಯಿಂದ ನಲುಗುತ್ತಿದ್ಧ ಭಾರತೀಯರಿಗೆ ನ್ಯಾಯ ಒದಗಿಸಲು ಪ್ರಾಣವನ್ನೆ ಅರ್ಪಿಸಿದ ಧೀ ಮಂತ ಮಹಾಪುರುಷ ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು....

ವಿಬಿ-ಜಿ ರಾಮ್‌ಜೀ ಹೊಸ ಕಾಯ್ದೆ ನೆಲಕಚ್ಚಿಸಲು ಕಾಂಗ್ರೆಸ್ ಕುತಂತ್ರ

ಚಿಕ್ಕಮಗಳೂರು:  ಕೇಂದ್ರ ಸರ್ಕಾರದ ಹೊಸ ಕಾಯ್ದೆ ನೆಲಕಚ್ಚಿಸಲು ಕಾಂಗ್ರೆಸ್ ಪಕ್ಷ ಹ ಲವಾರು ಕುತಂತ್ರ ನಡೆಸಿ ಅಪಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರದ ಸತ್ಯ ದರ್ಶನ ಮಾಡಿಸಲು ರಾಜ್ಯಾ ದ್ಯಂತ ಜನಜಾಗೃತಿ ನಡೆಸಿ...

Related Articles

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು

ಚಿಕ್ಕಮಗಳೂರು :ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವಪ್ಪಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್...

ಸಾಮಾಜಿಕ ಪರಿವರ್ತನೆಗೆ ಮಾಚಿದೇವರ ಕೊಡುಗೆ ಅಪಾರ

ಚಿಕ್ಕಮಗಳೂರು: ಸಾಮಾಜಿಕ ಪರಿವರ್ತನೆ ಮತ್ತು ಸಾಹಿತ್ಯ ಪರಿವರ್ತನೆಗೆ ಮಡಿವಾಳ ಮಾಚಿದೇವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ...

ಇತಿಹಾಸ ಸೃಷ್ಠಿಸಿದ ವ್ಯಕ್ತಿಗಳ ಜೀವನ ಚರಿತ್ರೆ ಓದಬೇಕು

ಚಿಕ್ಕಮಗಳೂರು: ನಾಡಪ್ರಭು ಕೆಂಪೇಗೌಡರು ತಮ್ಮ ಬದುಕನ್ನು ಓದಿಸಿಕೊಳ್ಳಲು ಯೋಗ್ಯವಾದ ರೀತಿಯಲ್ಲಿ ಬದುಕಿ ಹೋದವರು ಎಂದು ಆದಿಚುಂಚನಗಿರಿ...