ಚಿಕ್ಕಮಗಳೂರು: ರಾಜ್ಯಸರ್ಕಾರ ಭರವಸೆ ಈಡೇರಿಸುವತನಕ ಆಶಾ ಕಾರ್ಯಕರ್ತೆ ಯರ ಹೋರಾಟ ನಿಲ್ಲದಿರಲೀ, ಕರ್ತವ್ಯಕ್ಕೆ ತೆರಳಬೇಡಿ ಹಾಗೂ ಬೆದರಿಕೆಗೆ ಅಂಜದಿರಿ. ಕಾರ್ಯಕರ್ತೆಯರ ನ್ಯಾಯಬದ್ಧ ಹಕ್ಕು ಕೊಡಿಸುವಲ್ಲಿ ಸದಾಕಾಲ ನಿಮ್ಮೊಟ್ಟಿಗೆ ಜೊತೆಗಿರುತ್ತೇನೆ ಎಂದು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಭರವಸೆ ನೀಡಿದರು.
ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮೂರ ನೇ ದಿನದ ಪ್ರತಿಭಟನೆಯಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದ ಅವರು ಹೋರಾಟದ ಕಷ್ಟ ತಮಗೆ ಗೊತ್ತಿದೆ. ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಜೀವನದ ಭವಣೆ ಅರಿತಿದ್ದೇನೆ. ಹೀಗಾಗಿ ಸರ್ಕಾರ ಕನಿಷ್ಟ ಮಾಸಿಕ ವೇತನ ನೀಡುವವರೆಗೆ ಹೋರಾಟ ನಿಲ್ಲದಿರಲಿ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರು ಬದುಕಿನಲ್ಲಿ ಸಾಕಷ್ಟು ಕಷ್ಟವಿದೆ. ಕೆಲವರು ಕುಟುಂಬಗಳಲ್ಲಿ ಗಂಡನಿಲ್ಲ, ಗಂಡನಿದ್ದರೂ ಕುಡಿತದ ಚಟಕ್ಕೆ ಒಳಗಾಗಿ ಮನೆಯ ಜವಾಬ್ದಾರಿ ಯಜಮಾನಿಯೇ ವಹಿಸುತ್ತಿದ್ದಾರೆ. ಜೊ ತೆಗೆ ಮಕ್ಕಳ ಪಾಲನೆ, ವಿದ್ಯಾಭ್ಯಾಸದ ಖರ್ಚುವೆಚ್ಚವು ಎಲ್ಲವೂ ಹೆಚ್ಚಳವಾಗಿರುವ ಸಮಾಜದಲ್ಲಿ ಸರ್ಕಾರ ದುಡಿಮೆಗೆ ತಕ್ಕಂತೆ ವೇತನ ಕಲ್ಪಿಸುವುದು ನ್ಯಾಯಯುತವಾಗಿದೆ ಎಂದರು.
ಪ್ರಸ್ತುತ ಸಮಾಜದಲ್ಲಿ ಕಡಿಮೆ ಕೆಲಸದ ವ್ಯಕ್ತಿಗಳಿಗೆ ಕೈತುಂಬ ಸಂಬಳವಿದೆ. ಆದರೆ ಸರ್ಕಾರದ ಅತಿ ಹೆಚ್ಚು ಯೋಜನೆಗಳನ್ನು ಅಚ್ಚುಕಟ್ಟಾಗಿ ಜನಸಾಮಾನ್ಯರಿಗೆ ತಲುಪಿಸುವ ಆಶಾ ಕಾರ್ಯಕರ್ತೆಯರಿಗೆ ಕಡಿಮೆ ವೇತನ ನೀಡುವುದು ಒಂದು ರೋಗವಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನದ ನೀತಿ ಕಡ್ಡಾಯವಾಗ ಬೇಕು. ಸಮಾಜದಲ್ಲಿ ಎಲ್ಲರನ್ನೂ ಒಂದೇ ರೀತಿ ಕಾಣುವುದನ್ನು ಕಲಿಯಬೇಕು ಎಂದು ತಿಳಿಸಿದರು.
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮಾತನಾಡಿ ಸರ್ಕಾರದ ಉನ್ನತ ಅಧಿ ಕಾರಿಗಳಿಗೆ ಕೆಲಸವು ನಿಗಧಿತ ಸಮಯವಿದೆ. ಆದರೆ ಆಶಾರವರ ಕೆಲಸಕ್ಕೆ ಸಮಯ ಎಂಬುದು ಇರುವುದಿಲ್ಲ, ಆರೋಗ್ಯ ಸಮಸ್ಯೆ, ಸಾಂಕ್ರಾಮಿಕ ರೋಗ ತಡೆಗಟ್ಟಲು, ಸುರಕ್ಷಿತ ಕ್ರಮ ವಹಿಸಲು ಆಶಾ ಕಾರ್ಯಕರ್ತೆಯರು ಸಮಯವನ್ನು ಲೆಕ್ಕಿಸದೇ ಕರ್ತವ್ಯಕ್ಕೆ ತೆರಳಿ ದಿನಪೂರ್ತಿ ಕಾರ್ಯನಿರ್ವಹಿಸುತ್ತಾರೆ ಎಂದರು.
ಸರ್ಕಾರದ ಬಹುತೇಕ ಯೋಜನೆಗಳನ್ನು ಅಂಕಿ ಅಂಶಗಳ ಮೂಲಕ ಆಶಾ ಕಾರ್ಯಕರ್ತೆಯರು ತಿಳಿ ಸಲು ಕಠಿಣ ಪರಿಶ್ರಮವೇ ಕಾರಣ. ಈ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ದುಡಿಯುವ ವರ್ಗಕ್ಕೆ ಸಮಾನ ವೇತನ ಒದಗಿಸುವುದು ಮೂಲ ಕರ್ತವ್ಯವಾಗಿದೆ. ಹೀಗಾಗಿ ಆಶಾ ಕಾರ್ಯಕರ್ತೆಯರ ಜೀವನಕ್ಕಾಗಿ ಕನಿಷ್ಟ ಮಾಸಿಕ ೧೦ ಸಾವಿರ ವೇತನ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.
ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮೀ ಮಾತನಾಡಿ ಗುಡ್ಡಗಾಡು ಪ್ರದೇಶದಲ್ಲಿ ಬಹುತೇ ಕ ಶೇ.೮೫ರಷ್ಟು ತಾಯಿ ಮತ್ತು ಶಿಶು ಮರಣ ತಪ್ಪಿಸಲು ಮೂಲವೇ ಆಶಾ ಕಾರ್ಯಕರ್ತೆಯರ ಸೇವೆ. ಈ ಪವಿತ್ರ ವೃತ್ತಿಯಲ್ಲಿರುವ ಕಾರ್ಯಕರ್ತೆಯರಿಗೆ ಅಲ್ಪಪ್ರಮಾಣದ ವೇತನ ನೀಡಿ ಅವರ ಬದುಕನ್ನು ಕಸಿದುಕೊ ಳ್ಳುವುದು ಸರಿಯಲ್ಲ ಎಂದು ತಿಳಿಸಿದರು.
ಅಪರಾಧ ಎಸಗಿ ಸೆರೆವಾಸ ಅನುಭವಿಸುವ ಕೈದಿಗಳಿಗೆ ಸಿಗುವ ಊಟ, ಬಟ್ಟೆ, ವಾಸ್ತವ್ಯ ಹಾಗೂ ನಿಗ ಧಿತ ವೇತನವು ದಿನವೀಡಿ ನ್ಯಾಯವಾಗಿ ದುಡಿಯುವ ಕಾರ್ಯಕರ್ತೆಯರಿಗಿಲ್ಲ. ಹೀಗಾಗಿ ನಮ್ಮನ್ನು ಬಂಧಿಸಿ ಸೆರೆವಾಸದಲ್ಲಿಡಿ, ಊಟ, ಬಟ್ಟೆ ಮತ್ತು ೬೫೦ ರೂ. ಸಂಬಳ ನೀಡಿ, ಸರ್ಕಾರ ನಿರ್ಣಯ ಕೈಗೊಳ್ಳುವವರೆಗೂ ಜೈಲಿನಲ್ಲಿಯೇ ಕಾಲಕಳೆಯುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಎಸ್ಸಿ ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿ ತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್, ಮುಖಂಡರುಗಳಾದ ರಮೇಶ್, ಕಿರಣ್, ದಿಲೀಪ್ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
The lives of ASHA workers are very difficult.
Leave a comment