ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕಿನ ಮೆಣಸೂರು ರಾವೂರು ಕ್ಯಾಂಪಿನ ಜನ, ಸ್ಮಶಾನವಿಲ್ಲದೇ ಮೃತದೇಹವನ್ನು ತೆಪ್ಪದಲ್ಲಿ ಕೊಂಡೊಯ್ದು ಭದ್ರಾ ಹಿನ್ನೀರಿನ ನಡುಗಡ್ಡೆಯಲ್ಲಿ ಶವಸಂಸ್ಕಾರ ನಡೆಸಿದ್ದಾರೆ.
ರಾವೂರು ಕ್ಯಾಂಪಿನಲ್ಲಿ ಶಿಳ್ಳೆಕ್ಯಾತ ಜನಾಂಗಕ್ಕೆ ಸೇರಿದ 150ಕ್ಕೂ ಹೆಚ್ಚು ಕುಟುಂಬಗಳಿವೆ. ಇಲ್ಲಿ 600ಕ್ಕೂ ಹೆಚ್ಚು ಜನರಿದ್ದಾರೆ. ರಾವೂರಿನ ವ್ಯಕ್ತಿಯೊಬ್ಬರು ಭಾನುವಾರ ಮೃತಪಟ್ಟಿದ್ದರು.
ಅವರ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೆ ಭದ್ರಾ ಹಿನ್ನೀರಿನ ಮಧ್ಯೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಸುಮಾರು 1 ಕಿ.ಮೀ. ನದಿ ಮಧ್ಯೆ ತೆಪ್ಪದಲ್ಲಿ ಕೊಂಡೊಯ್ದು ನದಿ ಮಧ್ಯೆಯ ನಡುಗಡ್ಡೆಯಲ್ಲಿ ಶವಸಂಸ್ಕಾರ ಮಾಡಲಾಗಿದೆ.
ಮೃತದೇಹ ಹೂಳಲು ಗುಂಡಿ ತೆಗೆದಾಗಲೂ ಇಲ್ಲಿ ನೀರು ಬರುತ್ತದೆ. ಆಗ ಗುಂಡಿಯಲ್ಲಿರೋ ನೀರನ್ನ ತೆಗೆದು ಕೆಳಗಡೆ ಸೊಪ್ಪು ಹಾಕಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಕೆಲವೊಮ್ಮೆ ಹಿಂದೆ ಮೃತದೇಹ ಅಂತ್ಯಸಂಸ್ಕಾರ ಮಾಡಿದ ಜಾಗದಲ್ಲೇ ಗುಂಡಿ ತೆಗೆದಿರುವಂತಹಾ ಉದಾಹರಣೆಯೂ ಇದೆ. ಮಳೆಗಾಲದಲ್ಲಿ ಭದ್ರಾ ಹಿನ್ನೀರು ಮನೆ ಹಿಂದೆಯೇ ಬರುತ್ತೆ. ಬೇಸಿಗೆಯಲ್ಲಿ ನೀರು ಇರೋದಿಲ್ಲ ಆಗ ಭದ್ರಾ ಹಿನ್ನೀರಿನ ಮಧ್ಯೆಯೇ ಅಂತ್ಯ ಸಂಸ್ಕಾರ ಮಾಡುತ್ತಾರೆ. ಮಳೆಗಾಲದಲ್ಲಿ ಭದ್ರಾ ಹಿನ್ನೀರು ಮನೆಯವರೆಗೂ ಬರುತ್ತದೆ.
ಆಗ ತೆಪ್ಪ ಬಳಸಿ ನಡುಗಡ್ಡೆಗೆ ತೆರಳಿ ಅಂತ್ಯಸಂಸ್ಕಾರ ಮಾಡುತ್ತಾರೆ. ರಾವೂರು ಕ್ಯಾಂಪಿನ ಈ ಸ್ಥಿತಿಗೆ ಎರಡು ದಶಕಗಳ ಇತಿಹಾಸವಿದೆ.
ಚಿಕ್ಕಮಗಳೂರು: ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...
ByN Raju Chief EditorAugust 30, 2025ಚಿಕ್ಕಮಗಳೂರು: ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...
ByN Raju Chief EditorAugust 30, 2025ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...
ByN Raju Chief EditorSeptember 6, 2025ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...
ByN Raju Chief EditorSeptember 6, 2025ಚಿಕ್ಕಮಗಳೂರು: ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....
ByN Raju Chief EditorSeptember 6, 2025ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...
ByN Raju Chief EditorSeptember 6, 2025Excepteur sint occaecat cupidatat non proident
Leave a comment