ಚಿಕ್ಕಮಗಳೂರು :
ತರೀಕೆರೆ :
ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆಯುವ ಕುಸ್ತಿ ಪಂದ್ಯ ಬಿಟ್ಟರೆ ತರೀಕೆರೆಯಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗಳು ಹೆಸರು ಮತ್ತು ಕೀರ್ತಿಗೆ ಭಾಜನವಾಗಿದೆ.
ಪಾಳೇಗಾರರ ಕಾಲದಲ್ಲಿ ಪ್ರಾರಂಭವಾದ ತರೀಕೆರೆ ಕುಸ್ತಿ ಪಂದ್ಯಗಳು ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುತ್ತಿವೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಅನ್ಯ ರಾಜ್ಯಗಳಿಂದ ಕುಸ್ತಿಪಟುಗಳು ಆಗಮಿಸುತ್ತಾರೆ. ಇಲ್ಲಿನ “ಬೆಳ್ಳಿ ಗಧೆ” ಕುಸ್ತಿ ಎಲ್ಲೆಡೆ ಪ್ರಖ್ಯಾತಿ ಪಡೆದಿದೆ.
ಈ ಹಿಂದೆ ಕುಸ್ತಿಪಟುಗಳಿಗೆ ಮನೆಯಲ್ಲಿ ಆತಿಥ್ಯ ನೀಡುವುದರ ಮೂಲಕ ತರೀಕೆರೆಯ ಜನ ಕುಸ್ತಿಕಾಳಗಕ್ಕೆ ಉತ್ತೇಜನ ನೀಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಶ್ರೀ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಕುಸ್ತಿ ಪಟುಗಳಿಗೆ ಆತಿಥ್ಯ ನೀಡಲಾಗುತ್ತಿದೆ. ದಿವಂಗತ ಮಾಜಿ ಶಾಸಕ ಟಿ.ಹೆಚ್.ಶಿವಶಂಕರಪ್ಪನವರ ನೇತೃತ್ವದಲ್ಲಿ ಅಧುನಿಕ ಸ್ಪರ್ಶ ನೀಡಿ ಕುಸ್ತಿ ವೀಕ್ಷಿಸಲು ಬರುವ ಜನರಿಗೆ ಕುಳಿತುಕೊಳ್ಳಲು ಸ್ಟೇಡಿಯಂ ಸ್ವರೂಪ ಕೊಡಲಾಗಿದೆ. ಇಂದಿನಿಂದ ಮೂರು ದಿನಗಳಕಾಲ ನಡೆಯುವ ಕುಸ್ತಿ ಕಾಳಗಕ್ಕೆ ಚಾಲನೆ ನೀಡಲಾಗಿದ್ದು ಮಂಗಳವಾರ ಬೆಳ್ಳಿ ಗಧೆ ಕುಸ್ತಿ ನಡೆಯುತ್ತದೆ.
ಶ್ರೀ ಗುರು ರೇವಣಸಿದ್ದೇಶ್ವರ ಕುಸ್ತಿ ಸಂಘದ ಅಧ್ಯಕ್ಷರಾದ ಜಯಸ್ವಾಮಿ ಕಾರೆ ನೇತೃತ್ವದಲ್ಲಿ ಅಯೋಜನೆ ಮಾಡಲಾಗಿದೆ. ಹಿರಿಯ ಕುಸ್ತಿ ಪಟುಗಳಾದ ವಗ್ಗಪ್ಪರ ಮಂಜಣ್ಣ, ಸೀನಣ್ಣ,ಪುರಸಭಾ ಅಧ್ಯಕ್ಷ ವಂಸತಕುಮಾರ್, ಉಪಾಧ್ಯಕ್ಷ ಗಿರಿಜಾ ಪ್ರಕಾಶ್, ಪುರಸಭಾ ಸದಸ್ಯರಾದ ದಾದಪೀರ್, ಟಿ.ಜಿ.ಮಂಜುನಾಥ್ ಮಾಜಿ ಪುರಸಭಾ ಅಧ್ಯಕ್ಷ ಬೈಟು ರಮೇಶ್ ಮತ್ತು ವಿವಿಧ ಸಮಾಜದ ಮುಖಂಡರು ಜಂಗಿಕುಸ್ತಿ ಪಂದ್ಯವಳಿ ಯಶಸ್ವಿ ಯಾಗಲೇಂದು ಶುಭಹಾರೈಸಿದರು.
Leave a comment