ಚಿಕ್ಕಮಗಳೂರು: ಬೆಳಗಾವಿ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂತ್ರಿ ಲಕ್ಮೀ ಹೆಬಾಳ್ಕರ್ ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು.ಇದನ್ನು ಪ್ರಶ್ನೆ ಮಾಡಿ ಹೈಕೋರ್ಟ್ನಲ್ಲಿ ಸಿ.ಟಿ.ರವಿ ತಡೆಯಾಜ್ಞೆ ತಂದಿದ್ದರು. ಆದರೆ ನಂತರ ನಡೆದ ವಿಚಾರಣೆಯಲ್ಲಿ ತಡೆಯಾಜ್ಞೆ ತೆರವು ಗೊಳಿಸಿ ಮತ್ತೆ ಪೊಲೀಸ್ ರಿಗೆ ವಿಚಾರಣೆ ನಡೆಸಲು ಆದೇಶ ನೀಡಲಾಯಿತು. ಇದರಿಂದ ಸಿ.ಟಿ.ರವಿಗೆ ಹಿನ್ನೆಡೆ ಆಯಿತು .
ಹೈಕೋರ್ಟ್ ಆದೇಶ ಪ್ರಶ್ನೆ ಮಾಡಿ ಸಿ.ಟಿ.ರವಿ ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಸಿ.ಟಿ.ರವಿಗೆ ಬಿಗ್ ರಿಲೀಫ್ ಸಿಕ್ಕಂತಾಯಿತು.
ಸಣ್ಣ,ಪುಟ್ಟ ವಿಚಾರ ಗಳಿಗೂ ಹೈಕೋರ್ಟ್, ಸುಪ್ರೀಂ ಕೋರ್ಟ್ ಎನ್ನುವ ರಾಜಕಾರಣಿಗಳು ಲಕ್ಷ, ಲಕ್ಷ ಲಯಮಾಡುತ್ತಾರೆ.ಮನೆ ಬಾಗಿಲಿಗೆ ಕಷ್ಟ ಹೇಳಿಕೊಂಡ ಬಂದ ಜನರಿಗೆ ನೀತಿ ಹೇಳುತ್ತಾರೆ ಎಂದು ಲಕ್ಷ್ಮೀ ಗೆ ಹೇಳುತ್ತಾರೋ ರವಿಗೆ ಹೇಳುತ್ತಾರೋ ಎಂಬುದನ್ನು ಪತ್ತೆ ಹಚ್ಚಲು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಲು ಹೈಕಮ್ಯಾಂಡ್ ಗ್ರೀನ್ ಸಿಗ್ನಲ್ ಗೆ ಕಾಯುತ್ತಿದ್ದಾರಂತೆ !
ಸುಪ್ರೀಂ ಖುಷಿ ಮೂಡ್ ನಲ್ಲಿ ಸಿ.ಟಿ.ರವಿ ರಾಜ್ಯ ಸರ್ಕಾರದ ಎರಡು ವರ್ಷಗಳ ವಿಫಲತೆ ಬಗ್ಗೆ ಪತ್ರಿಕಾ ಗೋಷ್ಟಿ ನಡೆಸಿ ಹಿಗ್ಗಾ,ಮುಗ್ಗಾ ಜಾಡಿಸಿದ್ದಾರೆ ಅದೇ ಜೋಸ್ ನಲ್ಲಿ ಹೊರಗಡೆ ಬಂದಾಗ ಕಾಂಗ್ರೆಸ್ ನವರು ಎದುರುಬದುರಾಗಿದ್ದಾರೆ.ನನ್ನ ಲೆಟರ್ ಹೆಡ್ ಮಾರಿ ಕೊಂಡವರು ಜನಪ್ರತಿನಿಧಿಯಾಗಿದ್ದಾರೆ ಎಂದಾಗ ಕಾಂಗ್ರೆಸ್ ನವರು ಇನ್ಯಾರು ನಮ್ಮ ತಮ್ಮಯ್ಯ ಇರಬೇಕು ಎಂದು ಪೇಚಿಗೆ ಸಿಕ್ಕರು ಹೀಗೂ ಉಂಟೇ ಎಂದು ಅಲ್ ಪಾರ್ಟಿ ಅರಾಧ್ಯರ ಹತ್ತಿರ ದುಃಖ ಹೇಳಿಕೊಂಡಿದ್ದಾರೆ.ನಾವು ಛತ್ರ ಕಟ್ಟಬೇಕು ನಮಗೆ ಎಲ್ಲರೂ ಬೇಕು ಎಂದು ತಿಪ್ಪೇ ಸಾರಿಸಿದ್ದಾರಂತೆ.
Supreme Court relief for C.T. Ravi interesting letterhead!
Leave a comment