ಚಿಕ್ಕಮಗಳೂರು: – ಅಂಬೇಡ್ಕರ್ ಸಿದ್ಧಾಂತದಡಿ ಉಗಮವಾಗಿರುವ ಬಿಎಸ್ಪಿ ರಾಜಕೀಯ ಪಕ್ಷವನ್ನು ದೇಶದ ಉಜ್ವಲ ಭವಿಷ್ಯಕ್ಕಾಗಿ ಮತದಾರರ ಸ್ವಯಂಪ್ರೇರಿತರಾಗಿ ಬೆಂಬಲಿಸಬೇಕು ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.
ನಗರದ ಜಿಲ್ಲಾ ಬಿಎಸ್ಪಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಸಹೋದರತ್ವ ಸಮಿತಿಯ ೧೦೫ನೇ ಮಾ ಸಿಕ ಸಭೆಯ ಅಂಗವಾಗಿ ಡಾ|| ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾ ಡಿದರು.
ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಸ್ಥಳೀಯ ಮಟ್ಟದ ಹಲವಾರು ಚುನಾವಣೆ ಎದುರಾಗಲಿದೆ. ಆ ನಿಟ್ಟಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಲು ಮುಂದಾಗಬೇಕು. ಅಂಬೇಡ್ಕರ್ ಚಿಂತನೆಗಳಡಿ ಕಾನ್ಸಿ ರಾಂ ನಿರ್ಮಿಸಿರುವ ಬಿಎಸ್ಪಿ ಪಕ್ಷದ ರಥವನ್ನು ಎಳೆಯುವ ಮೂಲಕ ಕಾರ್ಯಕರ್ತರು ಮತಚಲಾಯಿಸಲು ಪ್ರೇರೇಪಿಸಬೇಕು ಎಂದರು.
ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರದಲ್ಲಿ ಕೆಲವು ಮಂತ್ರಿಗಳು ಸೆರೆವಾಸ ಅನುಭವಿಸಿ ಸಚಿವರಾಗಿ ಮೆರೆಯುತ್ತಿದ್ದಾರೆ. ಜೊತೆಗೆ ದೇಶವನ್ನಾಳಿರುವ ರಾಜಕೀಯ ಪಕ್ಷಗಳು ಹತ್ತಾರು ಸಮಸ್ಯೆಗಳನ್ನು ದೇಶಕ್ಕೆ ಹೊರಿಸುತ್ತಿದೆ. ಇದರಿಂದ ಹೊರಬರಲು ರಾಷ್ಟ್ರದಲ್ಲಿ ಬಿಎಸ್ಪಿ ಅಧಿಕಾರ ಹಿಡಿಯಬೇಕಿದೆ ಎಂದು ತಿಳಿ ಸಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ ದೇಶದಲ್ಲಿ ಮಹಾಮೇಧಾವಿ ಅಂಬೇಡ್ಕರ್ ಜನಿ ಸದಿದ್ದರೆ ಇಂದಿಗೂ ಗುಲಾಮರಾಗಿ ಬದುಕುವಂತ ಸ್ಥಿತಿ ನಿರ್ಮಾಣವಾಗಿತ್ತು. ಆದರೀಗ ಸಂವಿಧಾನದಡಿ ಜನತೆಯು ಉದ್ಯೋಗ, ಅಧಿಕಾರ, ಸ್ವಾತಂತ್ರ್ಯತೆ ಹಾಗೂ ಸಾಮಾಜಿಕ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ವಾಗಿದೆ ಎಂದು ತಿಳಿಸಿದರು.
ಮತದಾನದ ಹಕ್ಕನ್ನು ಜನತೆಗೆ ಕೊಡಿಸಲು ಅಂಬೇಡ್ಕರ್ ಎಂದಿಗೂ ಕಟುವಾಗಿ ನಡೆದುಕೊಳ್ಳದೇ ತಾ ಳ್ಮೆಯಿಂದಲೇ ನಿಭಾಯಿಸಿ ಮತಚಲಾಯಿಸುವ ಹಕ್ಕು ನೀಡಿದರು. ಆದರೆ ಇಂದಿನ ರಾಜಕೀಯ ಪಕ್ಷಗಳು ಅ ಧಿಕಾರದಾಸೆಗಾಗಿ ಮತಗಟ್ಟೆಗಳಲ್ಲಿ ಮತವನ್ನೇ ಕಳ್ಳತನ ಮಾಡುವ ಸ್ಥಿತಿಗೆ ತಂದೊಡ್ಡಿರುವುದು ವಿಪರ್ಯಾಸ ಎಂದು ಹೇಳಿದರು.
ಜಿಲ್ಲಾ ಸಹೋದರತ್ವ ಸಮಿತಿ ಸಂಸ್ಥಾಪಕ ಕೆ.ಆರ್.ಗಂಗಾಧರ್ ಮಾತನಾಡಿ ದೌರ್ಜನ್ಯ, ಶೋಷಣೆಗೆ ಒಳಗಾದವರನ್ನು ಸಹೋದರತ್ವ ಸಮಿತಿಯಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಹೋದರತ್ವ ಸಮಿತಿ ಕಾರ್ಯದರ್ಶಿ ಕೆ.ಎಸ್.ಮಂಜುಳಾ, ಮುಖಂಡರುಗಳಾದ ಆರ್.ವಸಂತ್, ಗಿರೀಶ್, ಹೊನ್ನಪ್ಪ, ಎನ್.ಎಸ್.ಮಂಜುನಾಥ್, ಮಗಣ್ಣಗೌಡ, ಮಹಾದೇವಮ್ಮ ಇದ್ದರು.
Support BSP for the bright future of the country
Leave a comment