ಚಿಕ್ಕಮಗಳೂರು: ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 25 ರಿಂದ 29 ರವರೆಗೆ ಪಂಜಾಬಿನ ಬರ್ನಾಲದಲ್ಲಿ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ( CISCE ) ವತಿಯಿಂದ ಆಯೋಜಿಸಲಾಗಿದ್ಧ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗಳ 19 ರ ವಯೋಮಿತಿಯ ಬಾಲಕಿಯರ ಪಂದ್ಯಾವಳಿ ನಡೆಯಿತು
ಚಿಕ್ಕಮಗಳೂರು ನಗರದ ಪ್ರತಿಷ್ಟಿತ ಸೈಂಟ್ ಮೇರಿಸ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯರಾದ ಸಿಂಚನ, ಜ್ಞಾನ ಗೌಡ, ಮೋಕ್ಷ ಲೋಕೇಶ್, ಸಾನ್ವಿ ಆಳ್ವಾ, ಹಿತೈಶಿಗೌಡ,ಶ್ರೇಷ್ಠ ಶೆಟ್ಟಿಯವರು ನಮ್ಮ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗೆದ್ದಿರುವುದು ನಮ್ಮ ರಾಜ್ಯಕ್ಕೆ ಹಾಗು ನಮ್ಮ ಜಿಲ್ಲೆಗೆ ಅತ್ಯಂತ ಸಂತಸದ ಸುದ್ದಿಯಾಗಿದೆ
ಇದರಲ್ಲಿ ಸಿಂಚನ, ಜ್ಞಾನ ಗೌಡ, ಮೋಕ್ಷ ಲೋಕೇಶ್, ಸಾನ್ವಿ ಆಳ್ವಾ, ಹಿತೈಶಿಗೌಡರವರು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ( SGFI ) ಆಯೋಜಿಸುವಂತ ಕಬಡ್ಡಿ ಪಂದ್ಯಾವಳಿಗಳಿಗೆ ಆಯ್ಕೆಗೊಂಡಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ
ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರನ್ನು ಸೈಂಟ್ ಮೇರಿಸ್ ಇಂಟರ್ನ್ಯಾಷನಲ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಜೆರಾಲ್ಡ್ ಲೋಬೊರವರು ಅಭಿನಂದಿಸಿ ಹಾಗು ಮುಂದಿನ ಪಂದ್ಯಾವಳಿಗೆ ಶುಭವನ್ನು ಹಾರೈಸಿದ್ದಾರೆ. ಪಂಜಾಬ್ ನಿಂದ ಆಗಮಿಸಿದ ವಿದ್ಯಾರ್ಥಿನಿಯರಿಗೆ ಭವ್ಯ ಸ್ವಾಗತ ನೀಡಲಾಯಿತು.
Students from the Coffee Country who excelled at the national level
Leave a comment