ಚಿಕ್ಕಮಗಳೂರು: ಶಾಲೆಗೆ ಹೋಗಲು ಯೂನಿಫಾರಂ ಇಲ್ಲ ಎಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ೮ ನೇ ತರಗತಿಯ ವಿದ್ಯಾರ್ಥಿನಿ ನಿವೇದಿತಾ (೧೩) ಎಂದು ಗುರುತಿಸಲಾಗಿದೆ.
ಯೂನಿಫಾರಂ ಧರಿಸದೆ ಶಾಲೆಗೆ ತೆರಳಿದರೆ ಶಿಕ್ಷಕರು ಬಯ್ಯುತ್ತಾರೆ ಎಂದು ವಿಷ ಸೇವಿಸಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಲಿಂಗದಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಯೂನಿಫಾರಂ ನೀಡಿದ್ದರು.
ತರಗತಿಗೆ ಯೂನಿಫಾರಂ ಧರಿಸಿ ಬರುವಂತೆ ಸೂಚನೆ ನೀಡಿದ್ದರು. ಯೂನಿಫಾರಂ ಹೊಲಿಯಲು ಟೈಲರ್‌ಗೆ ಪಾಲಕರು ನೀಡಿದ್ದರು.
ಆದರೆ ಟೈಲರ್ ಯೂನಿಫಾರಂ ನೀಡಿರಲಿಲ್ಲ. ಶಾಲೆಗೆ ಹೋದರೆ ಶಿಕ್ಷಕರು ಹೊಡೆಯುತ್ತಾರೆ ಎಂದು ವಿಷ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Student commits suicide over lack of uniform
Leave a comment