ಚಿಕ್ಕಮಗಳೂರು : ತರೀಕೆರೆಯಲ್ಲಿ ನಾಳೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ಮಾಜಿ ಶಾಸಕ ದಿವಂಗತ ಟಿ.ಹೆಚ್ ಶಿವಶಂಕರಪ್ಪ ಸ್ಮರಣಾರ್ಥ ನೃತ್ಯ ಸ್ಪರ್ಧೆಗಳು ನಡೆಯಲಿದ್ದು ಆಕರ್ಷಕ ಪಾರಿತೋಷಕ ನೀಡಲಾಗುತ್ತದೆ. ಸಿಮ್ರಾನ್ ನೃತ್ಯ ಶಾಲೆಯವರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ.
ಭಾರತೀಯ ಮತ್ತು ಪಾಶ್ಚಿಮಾತ್ಯ ಹಿರಿಯರ ಗುಂಪು ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 20,000 ನಗದು ಮತ್ತು ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ನೀಡಿದರೆ ದ್ವಿತೀಯ ಸ್ಥಾನ ಪಡೆದವರಿಗೆ 12000 ನಗದು ಮತ್ತು ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ಮತ್ತು ತೃತೀಯ ಬಹುಮಾನ ಪಡೆದವರಿಗೆ 7000 ನಗದು ಮತ್ತು ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ನೀಡಲು ತೀರ್ಮಾನಿಸಲಾಗಿದೆ.
ಕಿರಿಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 6000 ನಗದು ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ದ್ವಿತೀಯ ಬಹುಮಾನ 4000 ನಗದು ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ತೃತೀಯ ಬಹುಮಾನ ಪಡೆದವರಿಗರ 3000 ನಗದು ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದು ಟಿ.ಜಿ ಸದಾನಂದ ತಿಳಿಸಿದ್ದಾರೆ.
Leave a comment