ತರೀಕೆರೆ: ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯಗಳ ಜೊತೆಗೆ ದೈಹಿಕ ಶಿಕ್ಷಣವು ಬಹು ಮುಖ್ಯ. ಮಕ್ಕಳ ಆಸಕ್ತಿ ಗಮನಿಸಿ ಪ್ರೋತ್ಸಾಹ ನೀಡುವುದರ ಜೊತೆಗೆ ತರಭೇತಿ ನೀಡಿದರೆ ತಾಲ್ಲೂಕು, ಜಿಲ್ಲೆ,ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸಲು ಸಾಧ್ಯ ಎಂಬುದನ್ನು ಎಂ.ಸಿ.ಹಳ್ಳಿ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕ ಕುಮಾರಸ್ವಾಮಿ ನಿರೂಪಿಸಿದ್ದಾರೆ.
ಕುಮಾರಸ್ವಾಮಿ ಆಟದ ಅಂಗಳಕ್ಕೆ ಇಳಿದರೆ ಮಕ್ಕಳ ಜೊತೆಗೆ ಮಕ್ಕಳಂತೆ ಇದ್ದು ತರಬೇತಿ ನೀಡಿದ್ದರ ಫಲವಾಗಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಮಕ್ಕಳು ಬಹುಮಾನ ಪಡೆದು ಶಾಲೆಗೆ ಊರಿಗೆ ಗೌರವ ತಂದಿದ್ದಾರೆ.
ಕುಮಾರಿ ಸಮೀಕ್ಷಾ ಎಂಬ ವಿದ್ಯಾರ್ಥಿ ಜೂನಿಯರ್ ಥ್ರೋ ಬಾಲ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಮಧ್ಯಪ್ರದೇಶದ ಭೂಪಾಲ್ ನಲ್ಲಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದು ವಿಶೇಷ.
ಭೂಮಿಕ ಮತ್ತು ಶಶಾಂಕ್ ಎಂಬ ವಿದ್ಯಾರ್ಥಿಗಳು ಜಾರ್ಖಂಡ್ ನ ಬಿಲೈನಲ್ಲಿ ನಡೆದ ರಾಷ್ಟ್ರ ಮಟ್ಟದ ಸಬ್ ಜೂನಿಯರ್ ತಂಡ ಪ್ರತಿನಿಧಿಸಿ ಕರ್ನಾಟಕ ತಂಡ ಪ್ರಶಸ್ತಿಗಳಿಸಲು ಕಾರಣರಾಗಿದ್ದನ್ನು ಮರೆಯುವಂತಿಲ್ಲ.
ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಗುರ್ತಿಸಿ ಉದಯೋನ್ಮುಖ ಆಟಗಾರರನ್ನಾಗಿಸುವ ಕೌಶಲ್ಯ ಕೂಡ ಮುಖ್ಯ. ಕುಮಾರಸ್ವಾಮಿ ಯ ಕೌಶಲ್ಯ ಎಂ.ಸಿ.ಹಳ್ಳಿ ಶಾಲೆ ಕೀರ್ತಿಗಳಿಸಿದೆ.
ಕಳೆದ19 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಶಾಲೆಯಲ್ಲಿ ಅಷ್ಟೇ ಅಲ್ಲ ಊರಿನ ಜನರಿಂದ ಮುಖ್ಯವಾಗಿ ಶಾಲಾ ಮಕ್ಕಳ ಮೆಚ್ಚುಗೆಗಳಿಸಿರುವ ಇವರನ್ನು ಗುರ್ತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕುಮಾರಸ್ವಾಮಿಯ ಉತ್ತಮ ಸೇವೆಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಮಟ್ಟದಲ್ಲಿ ಅನಿತ್ ಕೌಲ್ ಉತ್ತಮ ಶಿಕ್ಷಕ ಪ್ರಶಸ್ತಿ, ಕನ್ನಡ ವಿಕಾಸ ರತ್ನ ಪ್ರಶಸ್ತಿ, ರಾಜ್ಯ ಮಟ್ಟದ ಸೇವಾ ಭೂಷಣ ಪ್ರಶಸ್ತಿ ಪಡೆಯುವುದರ ಮೂಲಕ ಶಾಲೆ ಮತ್ತು ಶಿಕ್ಷಕ ವೃಂದದವರ ಗೌರವ ಹೆಚ್ಚಿಸಿದ್ದಾರೆ.
ಎಂ.ಸಿ.ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮೇಗೌಡ ಕುಮಾರಸ್ವಾಮಿಯಂತಹ ಶಿಕ್ಷಕರಿಂದ ನಮ್ಮ ಊರ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಕೀರ್ತಿಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಲ್ಲಿ ಕ್ರೀಡಾ ಆಸಕ್ತಿಯ ಜೊತೆಗೆ ಶಿಸ್ತು ಬೆಳೆಸುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾರೆ.
ಶಾಲಾ ಮಕ್ಕಳು ರಾಷ್ಟ್ರ ಮಟ್ಟದ ಪ್ರಶಸ್ತಿ ತಂದಾಗ ಊರಲ್ಲಿ ಮೆರವಣಿಗೆ ಮಾಡಿ ಪ್ರೋತ್ಸಾಹ ನೀಡಿರುವ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ.
ಕುಮಾರಸ್ವಾಮಿಯಂತಹ ದೈಹಿಕ ಶಿಕ್ಷಕರು ಇನ್ನಷ್ಟು ಮತ್ತಷ್ಟು ಸಾಧನೆ ಮಾಡಿ ಶಾಲೆಗೆ ಊರಿಗೆ ಕೀರ್ತಿ ತರಲಿ ಎಂದು ಹಾರೈಕೆ ಮಾಡೋಣ.
Sports teacher who showcased children’s talents at the national level
Leave a comment