ಚಿಕ್ಕಮಗಳೂರು: ಇಂದು ನಡೆದ ಚುನಾವಣೆಯಲ್ಲಿ ಜನತಾದಳ ದ ಶೀಲಾ ದಿನೇಶ್ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಕಾಂಗ್ರೆಸ್ ತಡರಾತ್ರಿವರೆಗೆ ಕಸರತ್ತು ನಡೆಸಿತಾದರೂ ಏನು ಮಾಡಲಾಗಲಿಲ್ಲಾ ಕೊನೆ ಪಕ್ಷ ಕಾಂಗ್ರೆಸ್ ನಿಂದ ನಾಮ ಪತ್ರ ಸಲ್ಲಿಸಲಿಲ್ಲಾ ಎಂದು ಹಲವು ಮುಖಂಡರು ಬಹಿರಂಗವಾಗಿ ಶಪಿಸುತ್ತಿದ್ದರು.
ಕಾಂಗ್ರೆಸ್ ನ ಅಕ್ಮಲ್ ಬಿಜೆಪಿಯ ನಾಲ್ವರು ಸದಸ್ಯರನ್ನು ಕರೆದುಕೊಂಡು ಬರುವ ಪ್ಲಾನ್ ಠುಸ್ ಆಗಿದ್ದು ಏಕೆ ?
ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ವರಸಿದ್ದಿ ವೇಣುಗೋಪಾಲ ಜೊತೆಗೆ ಹಿರೇಮಗಳೂರು ಕಲ್ಲದೊಡ್ಡಿ ದೊಡ್ಡ ಕುರುಬರ ಹಳ್ಳಿಯ ಸದಸ್ಯರು ಗಳು ಬಂದ ದಾರಿಗೆ ಸುಂಕವಿಲ್ಲ ಎಂದು ಹೊರಟರೆ ಇನ್ನೂ ಮೂರು ಜನ ಕಾದು ಕುಳಿತು ನಂತರ ವಾಪಸ್ ತೆರಳಿದರು ಎಂದು ತಿಳಿದು ಬಂದಿದೆ.
ಶಾಸಕ ತಮ್ಮಯ್ಯ ಮನಸ್ಸು ಮಾಡಿದ್ದರೆ ಅಧಿಕಾರ ಹಿಡಿಯಬಹುದಿತ್ತು ಆದರೆ ತಮ್ಮಯ್ಯ ಎಸ್.ಎಲ್.ಬೋಜೇಗೌಡರನ್ನು ಬಿಡುವಂತಿಲ್ಲ ಎಂಬ ಸಂದಿಗ್ಧ ಸ್ಥಿತಿಯಲ್ಲಿರುವುದರಿಂದ ಕೊನೆಗೆ ಕಾಂಗ್ರೆಸ್ ನಾಮ ಪತ್ರ ಸಲ್ಲಿಸಲಿಲ್ಲ ಎಂದು ಕಾಂಗ್ರೆಸ್ ನವರೆ ಮಾತನಾಡುತಿದ್ದಾರೆ.
ದಿನೇಶ್ ಕೂಡ ಎಲ್ಲರೊಂದಿಗೆ ವಿಶ್ವಾಸದಿಂದ ಇರುವುದರಿಂದ ಅವಿರೋಧ ಆಯ್ಕೆಯಾಯಿತು .
Sheela Dinesh was elected unopposed as Chikmagalur Municipal Council President
Leave a comment