ರಾಜ್ಯ ಸರ್ಕಾರಿ ನೌಕರರ ಸಂಘ ದ ರಾಜ್ಯ ಅಧ್ಯಕ್ಷ ಸ್ಥಾನ ಮತ್ತು ಖಜಾಂಚಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.
964 ಮತದಾರರು ಇದ್ದು ಬಿರುಸಿನಿಂದ ಚುನಾವಣೆಯಲ್ಲಿ ಮತ ಚಲಾಯಿಸಲಾಯಿತು.
ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಷಡಕ್ಷರಿ ಸ್ಪರ್ಧೆ ಮಾಡಿದ್ದು ಇವರ ವಿರುದ್ಧ ಕೃಷ್ಣೇಗೌಡರು ಪ್ರಬಲವಾದ ಪೈಪೋಟಿ ನೀಡಿದರೂ ಷಡಕ್ಷರಿ 59 ಮತಗಳ ಅಂತರದಿಂದ ವಿಜಯ ಮಾಲೆ ತನ್ನದಾಗಿಸಿ ಕೊಂಡಿದ್ದಾರೆ.
ಖಜಾಂಚಿ ಸ್ಥಾನಕ್ಕೆ ಕೃಷ್ಣೇಗೌಡರ ಬಣದ ಶಿವರುದ್ರಯ್ಯ ಚುನಾಯಿತರಾದರೆ ಷಡಕ್ಷರಿ ಬಣದ ನಾಗರಾಜ್ ಆರ್ ಜುಮನ್ನನವರ್ ಪರಾಭವಗೊಂಡರು.
ಬೆಳಗ್ಗೆಯಿಂದ ನಡೆದ ಬಿರುಸಿನ ಮತದಾನ ನೋಡಿದರೆ ಯಾವ ಕಾರ್ಪೊರೇಟ್ ಎಲೆಕ್ಷನ್ ಮೀರಿಸುವಂತೆ ಇತ್ತು ಒಂದೊಂದು ಮತಕ್ಕೂ ರೇಟ್ ಫಿಕ್ಸ್ ಮಾಡಲಾಗಿತ್ತು ಎಂಬ ಮಾತುಗಳನ್ನು ನೌಕರರೇ ಮಾತನಾಡುತ್ತಿದ್ದರು.
ಕೃಷ್ಣೇಗೌಡರ ಪರ ಸರ್ಕಾರವೇ ಟೊಂಕಕಟ್ಟಿ ನಿಂತಿದ್ದು ಷಡಕ್ಷರಿಗೆ ಆತಂಕ ತದ್ದಿತ್ತು ಆದರೂ ಮಾಡಿದ ಕೆಲಸ ಕೈ ಹಿಡಿದಿದೆ ಎನ್ನನುತ್ತಾರೆ.
Leave a comment