ಚಿಕ್ಕಮಗಳೂರು: ಕಾಫಿನಾಡಲ್ಲಿ 2 ಸರ್ಕಾರಿ ಬಸ್ ಗಳ ಪ್ರತ್ಯೇಕ ಅಪಘಾತಗಳು ನಡೆದಿದ್ದು, ಓರ್ವ ಮೃತಪಟ್ಟು, ಓರ್ವನಿಗೆ ಗಂಭೀರ ಗಾಯವಾದ ಘಟನೆ ಜೂ.13ರ ಶುಕ್ರವಾರ ಕಡೂರು ಪಟ್ಟಣದ ಕೊಪ್ಪ ತಾಲೂಕಿನ ಹಿರಿಕೆರೆ ಬಳಿ ನಡೆದಿದೆ.
ಕಡೂರು ಪಟ್ಟಣದ ಹುಸೇನ್ (23) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ.ಹುಸೇನ್ ಕಡೂರು ಎಪಿಎಂಸಿಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಇನ್ನೊಂದೆಡೆ ಕೊಪ್ಪ ತಾಲೂಕಿನಿಂದ ತರೀಕೆರೆ ಹೋಗುತ್ತಿದ್ದ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಬಸ್ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಬಸ್ಸಿನಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನೊಂದೆಡೆ ವಿದ್ಯುತ್ ಕಂಬಕ್ಕೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಂಬ ಬಸ್ ಮೇಲೆ ಮುರಿದು ಬಿದ್ದ ಘಟನೆ ಜೂ.13ರ ಶುಕ್ರವಾರ ಜಿಲ್ಲೆಯ ಕಡೂರು-ಕೊಪ್ಪ ತಾಲೂಕಿನಲ್ಲಿ ನಡೆದಿದೆ. ವಿದ್ಯುತ್ ಲೈನ್ ನ ಪ್ಯೂಸ್ ತುಂಡಾಗಿದ್ದರಿಂದ ಭಾರೀ ಅನಾಹುತ ತಪ್ಪಿದೆ.
Separate accident in Kaffi Nadu – one dead
Leave a comment