Home namma chikmagalur ಆಪರೇಷನ್ ಸಿಂಧೂರ: ರಾಜಕೀಯ ನಿಲುವು ತಾಳುವಲ್ಲಿ ಕೇಂದ್ರಸರ್ಕಾರ ವಿಫಲ
namma chikmagalurchikamagalurHomeLatest News

ಆಪರೇಷನ್ ಸಿಂಧೂರ: ರಾಜಕೀಯ ನಿಲುವು ತಾಳುವಲ್ಲಿ ಕೇಂದ್ರಸರ್ಕಾರ ವಿಫಲ

Share
Share

ಚಿಕ್ಕಮಗಳೂರು: ಭಾರತ ಸೇನೆ ಯಶಸ್ವಿಯಾಗಿ ಆಪರೇಷನ್ ಸಿಂಧೂರ ನಡೆಸಿದಾಗ ಕೇಂದ್ರ ಸರ್ಕಾರ ಸ್ಪಷ್ಟ ರಾಜಕೀಯ ನಿಲುವು ತಾಳುವಲ್ಲಿ ವಿಫಲವಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಗಂಭೀರತೆ ಇಲ್ಲದ ಕಾರಣದಿಂದ ಸೇನೆಯ ಶೌರ್ಯ ಮತ್ತು ತ್ಯಾಗಕ್ಕೆ ಸರಿಯಾದ ಮಾನ್ಯತೆ ದೊರಕಿಲ್ಲ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಪತ್ರಿಕಾಗೋಷ್ಠಿಯನ್ನು ನಡೆಸಿ ಪರಿಸ್ಥಿತಿಯ ಬಗ್ಗೆ ದೇಶವಾಸಿಗಳಿಗೆ ವಿವರಣೆ ನೀಡಬೇಕೆಂದು ಆಗ್ರಹಿಸಿದರು.

ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಸೀಸ್ ಫೈರ್ ಕುರಿತು ಕೇಂದ್ರ ಸರ್ಕಾರ ಮೌನ ವಹಿಸಿದ್ದು, ದೇಶದ ಪರವಾಗಿ ಸ್ಪಷ್ಟವಾದ ರಾಜಕೀಯ ಹೇಳಿಕೆಯನ್ನು ನೀಡಬೇಕಿದ್ದ ಸಂದರ್ಭದಲ್ಲಿ ಮೌನ ವಹಿಸಿದೆ. ವಿದೇಶಿ ಒತ್ತಡಕ್ಕೆ ಮಣಿದು ದೇಶದ ಭದ್ರತೆಗೆ ಕುತ್ತು ತಂದಿರುವುದು ಮೋದಿ ಸರ್ಕಾರದ ದೌರ್ಬಲ್ಯ ಎಂದು ಟೀಕಿಸಿದರು.

ಭಾರತ ಸೇನೆಯ ಶೌರ್ಯ ಮತ್ತು ತ್ಯಾಗವನ್ನು ಗೌರವದಿಂದ ಸ್ಮರಿಸುತ್ತೇವೆ. ಆಪರೇ?ನ್ ಸಿಂಧೂರನಲ್ಲಿ ನಮ್ಮ ಯೋಧರು ತೋರಿಸಿದ ಧೈರ್ಯ, ತಾಂತ್ರಿಕ ಚಾತುರ್ಯ ಮತ್ತು ದೇಶಾಭಿಮಾನವು ನಿಜಕ್ಕೂ ಅಭಿಮಾನದ ಸಂಗತಿ ಎಂದರು.

ಭಾರತದ ಭದ್ರತೆಗೆ ಬೆನ್ನು ತಟ್ಟುವಂತೆ ಕಾರ್ಯನಿರ್ವಹಿಸಿದ ಸೇನೆ, ಉಗ್ರರನ್ನು ನಿ?ಕ್ಷಪಾತವಾಗಿ ಎದುರಿಸಿ, ದೇಶದ ನಾಗರಿಕರನ್ನು ರಕ್ಷಿಸಿರುವುದು ಅತ್ಯಂತ ಶ್ಲಾಘನೀಯ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಯೋಧರು ದೇಶದ ಹೆಮ್ಮೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಹಾಗೂ ಈ ಅಪೂರ್ವ ಕಾರ್ಯಾಚರಣೆಯ ಯಶಸ್ಸಿಗೆ ಶ್ಲಾಘಿಸಿದರು.

ಏಪ್ರಿಲ್ ೨೨ ರಂದು ಪೆಹಲ್ಗಾಮ್‌ನಲ್ಲಿ ನಡೆದ ಆತಂಕವಾದಿ ಕೃತ್ಯದಿಂದ ಸುಮಾರು ೨೬ ಜನರು ಹತ್ಯೆಗೀಡಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿ ಸರ್ವ ಪಕ್ಷ ಸಭೆ ಮತ್ತು ವಿಶೇಷ ಅಧಿವೇಶನ ಕರೆಯಲು ಒತ್ತಾಯಿಸಿದರು ಎಂದು ತಿಳಿಸಿದರು.

ನಂತರ ಸರ್ಕಾರ ಪಾಕಿಸ್ತಾನದ ೯ ಉಗ್ರ ನೆಲೆಗಳನ್ನು ದ್ವಂಸ ಮಾಡಿ ಪಾಕಿಸ್ತಾನಕ್ಕೆ ಸಿಂಹ ಸ್ವಪ್ನವಾಯಿತು. ಇಡೀ ದೇಶ ೧೯೭೧ ರಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರು ಪ್ರಧಾನಮಂತ್ರಿ ಆದ ಸಂದರ್ಭದಲ್ಲಿ ನಮ್ಮ ಸೇನೆ ಪಾಕಿಸ್ಥಾನ ಮತ್ತು ಬಾಂಗ್ಲಾದೇಶವನ್ನು ಎರಡು ತುಂಡುಗಳಾಗಿ ಮಾಡಿ ೯೩ ಸಾವಿರ ಪಾಕಿಸ್ತಾನದ ಸೈನಿಕರನ್ನು ಭಾರತದ ಸೈನ್ಯದ ಎದುರು ಮಂಡಿಯೂರಿ ಶರಣಾಗಿದ್ದನ್ನು ದೇಶ ಸ್ಮರಿಸಿಕೊಳ್ಳುತ್ತದೆ ಎಂದು ವಿವರಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗೈರು ಹಾಜರಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಪೆಹಲ್ಗಾಮ್‌ನಲ್ಲಿ ನಡೆದ ದುರಂತಕ್ಕೆ ಬೇಹುಗಾರಿಕೆ ಮತ್ತು ಭದ್ರತಾ ವೈಫಲ್ಯ ಕಾರಣ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿತು ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಗಂಭೀರ ಭದ್ರತಾ ಪರಿಸ್ಥಿತಿಯ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆಯಬೇಕಾಗಿತ್ತು. ಇದು ಕೇವಲ ಸಂವಿಧಾನಿಕ ಶಿ?ಚಾರವಲ್ಲ, ಜವಾಬ್ದಾರಿ ಮತ್ತು ಭದ್ರತೆ ಕುರಿತು ಗಂಭೀರ ಅಭಿಪ್ರಾಯ ವಿನಿಮಯ ಮಾಡಲು ಅಗತ್ಯವಿದ್ದಂತ ಪ್ರತಿ ಪಕ್ಷಗಳನ್ನೂ ಒಳಗೊಂಡಿರುವ ಎಲ್ಲಾ ಪಕ್ಷಗಳ ಸಭೆ, ರಾ?ದ ಏಕತೆ, ಭದ್ರತೆ, ಮತ್ತು ಸಾಮೂಹಿಕ ಸಮಾಲೋಚನೆಗೆ ಸಾಕ್ಷಿಯಾಗುತ್ತಿತ್ತು. ಆದರೆ ಪ್ರಧಾನಿ ಮೋದಿಯವರು ಅವರು ಭಾರತ ಒಂದು ಪ್ರಜಾಪ್ರಭುತ್ವ ಎಂಬುದನ್ನು ಮರೆತು ಇದನ್ನು ಲಘುವಾಗಿ ತೆಗೆದುಕೊಂಡು, ರಾಜಕೀಯವಾಗಿ ತಾನೊಬ್ಬನೇ ನಿರ್ಧಾರ ಮಾಡುವಂತೆ ನಡೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಇದೇ ಸಮಯದಲ್ಲಿ, ಸಂಸತ್ ಅಧಿವೇಶನವನ್ನು ಕೂಡ ಕರೆದು, ಈ ವಿಚಾರದಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿತ್ತು. ಇದು ಜನಪ್ರತಿನಿಧಿ ಸಂಸ್ಥೆಗಳ ಗೌರವವನ್ನು ಹೆಚ್ಚಿಸುತಿತ್ತು ಮತ್ತು ಜನರ ಭರವಸೆಯನ್ನು ಕಟ್ಟಿಕೊಡುತ್ತಿತ್ತು.

ರಾಜಕೀಯ ವೈಚಾರಿಕ ಭಿನ್ನತೆಗಳ ಹೊರತಾಗಿ, ರಾ?ದ ಭದ್ರತೆಗೆ ಸಂಬಂಧಿಸಿದ ವಿ?ಯಗಳಲ್ಲಿ ಸಾಮೂಹಿಕ ಸಹಕಾರ, ಸಮಾಲೋಚನೆ, ಮತ್ತು ಪ್ರಾಮಾಣಿಕತೆ ಅಗತ್ಯವಾಗಿವೆ. ಅದಕ್ಕೆ ಪ್ರಧಾನಿ ಮೋದಿಯವರು ಮುನ್ನುಡಿಯಾಗಬೇಕಾಗಿತ್ತು ಎಂದರು.

ಆದರೆ, ನಮ್ಮ ಸೈನ್ಯ ಪಾಕಿಸ್ತಾನದ ಸೈನ್ಯವನ್ನು ಹಿಮ್ಮೆಟ್ಟಿಸಿ ಹೋರಾಡುವ ಸಮಯದಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಏಕಾಏಕಿಯಾಗಿ ಕದನ ವಿರಾಮ ಘೋಷಿಸಿದ್ದು, ನಿಜವಾದ ದುರದೃಷ್ಟಕರ ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ತಾಲ್ಲೂಕು ಅಧ್ಯಕ್ಷ ಮಲ್ಲೇಶ ಸ್ವಾಮಿ, ನಗರ ಕಾಂಗ್ರೆಸ್ ಅಧ್ಯಕ್ಷ ತನೂಜ್ ಕುಮಾರ್ ನಾಯ್ಡು , ಎನ್‌ಎಸ್‌ಯುಐ ನ ಸುಮಂತ್ ಉಪಸ್ಥಿತರಿದ್ದರು.

Scheduled Castes should enter their sub-caste in the census.

Share

Leave a comment

Leave a Reply

Your email address will not be published. Required fields are marked *

Don't Miss

ಮೂಡಿಗೆರೆ ತಾಲ್ಲೂಕಿನಾದ್ಯಂತ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಭಾನುವಾರ ಇಡೀ ದಿನ‌ ಬಿಡುವಿಲ್ಲದೇ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ತಾಲ್ಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ಮಂಜುನಾಥ್ ಹಾಗೂ ಗಿರೀಶ್ ಅವರಿಗೆ ಸೇರಿದ ಹಳೆಯ ಕಟ್ಟಡವೊಂದು ಕುಸಿದಿದ್ದು, ಅಪಾರ ಪ್ರಮಾಣದ...

40 ಸಾವಿರ ಮೌಲ್ಯದ 400 ಮೀಟರ್ ಪೈಪ್‌  ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ 9ನೇ ಮೈಲಿಕಲ್ಲು ಸಮೀಪದಲ್ಲಿ ಪೈಪ್‌ಲೈನ್ ಕಾಮಗಾರಿ ಜಾಗದಲ್ಲಿದ್ದ ₹ 40ಸಾವಿರ ಮೌಲ್ಯದ 400 ಮೀಟರ್ ಪೈಪ್‌  ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಸಿಂಗಟಗೆರೆ ಪೊಲೀಸರು ಬಂಧಿಸಿ,...

Related Articles

ವೇದಾನದಿಯಿಂದ ಕೆರೆ ತುಂಬಿಸುವ ಯೋಜನೆ ಸ್ಥಗಿತಗೊಳಿಸಬೇಕು

ಚಿಕ್ಕಮಗಳೂರು:  ವೇದಾ ನದಿಯ ಅಗ್ರಹಾರ ಬಳಿ ಇರುವ ಚೆಕ್‌ಡ್ಯಾಂನಿಂದ ಹುಲಿಕೆರೆ, ಬೆರಟಿಕೆರೆ, ನಾಗೇನಹಳ್ಳಿಯ ಕೆರೆಗಳಿಗೆ ನೀರೊದಗಿಸುವುದನ್ನು...

ನಿಷೇಧಿತ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್-103 ಪ್ರವಾಸಿಗರು ಪೊಲೀಸರು ವಶಕ್ಕೆ

ಚಿಕ್ಕಮಗಳೂರು: ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶ ಬಿದಿರುತಳದಲ್ಲಿ ಅನುಮತಿ ಇಲ್ಲದೆ ಟ್ರಕ್ಕಿಂಗ್ ನಡೆಸುತ್ತಿದ್ದ ೧೦೩...

ಕೇಂದ್ರ ಗುಪ್ತಚರ ಇಲಾಖೆ ಪೇದೆ ಆತ್ಮಹತ್ಯೆ

ಚಿಕ್ಕಮಗಳೂರು: ಅನಾರೋಗ್ಯದ ಸಮಸ್ಯೆ ಹಿನ್ನೆಲೆ ಗುಪ್ತಚರ ಇಲಾಖೆಯ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ...

ದೇಶ ಸುಭದ್ರಗೊಳಿಸಲು ಯುವಕರು ಯೋಧರಾಗಿ

ಚಿಕ್ಕಮಗಳೂರು:  ಭವ್ಯ ಭಾರತದ ಕನಸನ್ನು ಹೊತ್ತಿರುವ ಯುವಕರು ವಯಸ್ಸಿನಲ್ಲಿ ವ್ಯಸ ನಗಳ ಚಟಕ್ಕೆ ಬಲಿಯಾಗದೇ, ದೇಶವನ್ನು...