ಚಿಕ್ಕಮಗಳೂರು: ಲಿಂಗಾಯಿತ ಎಲ್ಲ ಒಳ ಪಂಗಡಗಳು ಒಟ್ಟಾಗಿ ಸರ್ವ ಶರಣರ ಜಾಥಾ ಕಾರ್ಯಕ್ರಮವನ್ನು ಮೇ.೧೩ ರಂದು ಮಂಗಳವಾರ ಸಂಜೆ ೪ ಗಂಟೆಗೆ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕೆ.ಸಿ. ನಿಶಾಂತ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಅಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಕಲ್ಯಾಣ ಮಂಟಪದಿಂದ ವೀರಗಾಸೆ, ಡೊಳ್ಳುಕುಣಿತ, ಮಲೆನಾಡು ಹಳ್ಳಿ ವಾದ್ಯ, ನಾಸಿಕ್ ಡೋಲು, ಡಿಜೆಯೊಂದಿಗೆ ಶರಣರ ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ ಹೊರಟು ಅರಳೀಮರ, ಶಂಕರ ಮಠ, ಹನುಮಂತಪ್ಪ ವೃತ್ತ ಮಾರ್ಗವಾಗಿ ಎಂ.ಜಿ ರಸ್ತೆಯಲ್ಲಿ ಸಾಗಿ ಅಜಾದ್ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸಂಜೆ ೭ ಗಂಟೆಗೆ ನಡೆಯಲಿರುವ ಬೃಹತ್ ಧಾರ್ಮಿಕ ಸಭೆಯ ದಿವ್ಯಸಾನಿಧ್ಯವನ್ನು ಕಲ್ಯಾಣ ನಗರ ಬಸವತತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹಾಗೂ ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ ಎಂದರು.
ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು, ಪುಷ್ಪಗಿರಿ ಮಹಾ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಬೇರುಗಂಡಿ ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಹಾಗೂ ಸಿಂದಿಗೆರೆ ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಮಹಾಸ್ವಾಮಿಗಳು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ, ಬಸವರಾಜ್ ಯು.ಎಂ, ಸುದರ್ಶನ್ ಬಸವೇಗೌಡ, ಬಿ.ಹೆಚ್. ಹರೀಶ್, ಪಿ.ಜಿ. ಸೋಮಶೇಖರಪ್ಪ. ಎಂ.ಸಿ ಶಿವಾನಂದಸ್ವಾಮಿ, ಹೆಚ್.ಸಿ. ಕಲ್ಮರುಡಪ್ಪ, ಮಹಡಿಮನೆ ಸತೀಶ್, ಬಿ.ಸಿ. ಬಸವರಾಜು ಸೇರಿದಂತೆ ಸಮಾಜದ ಮುಖಂಡರುಗಳು ಭಾಗವಹಿಸಲಿದ್ದಾರೆಂದು ಹೇಳಿದರು.
ಈ ಕಾರ್ಯಕ್ರಮವನ್ನು ವೀರಶೈವ ಲಿಂಗಾಯಿತ ಸಮುದಾಯದ ಎಲ್ಲಾ ಒಳಪಂಗಡಗಳು ಒಟ್ಟಾಗಿ ಸೇರಿ ಆಚರಣೆ ಮಾಡುತ್ತಿದ್ದು, ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ನಂಜೇಶ್ ಬೆಣ್ಣೂರು, ಮುಖಂಡರಾದ ಕೆ.ಆರ್. ಚರಣ್ ಕುಮಾರ್, ಶರತ್ ಎಲ್.ಎಂ, ಸಿ.ಎಂ. ಧನಂಜಯ್‌ಗೌಡ, ಕಾರ್ತಿಕ್ ಸೋಮಶೇಖರ್, ದರ್ಶನ್ ನಲ್ಲೂರು, ಹೃತಿಕ್ ಕೆ.ಎಸ್, ಕೀರ್ತನ್ ಮಲ್ಲಿನಾಥ್ ಮತ್ತಿತರರು ಉಪಸ್ಥಿತರಿದ್ದರು
Sarva Sharanara Jatha program on May 13th
Leave a comment