ಚಿಕ್ಕಮಗಳೂರು: ಚಿಕ್ಕಮಗಳೂರಿನಿಂದ ಬೇಲೂರು ಮಾರ್ಗದ ೨೪ ಕಿ.ಮೀ.ನ ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಮತ್ತು ಚತುಷ್ಟಥ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ೫೮೪.೩೯ ಕೋಟಿ ಅನುದಾನದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಚಿಕ್ಕಮಗಳೂರು-ಬೇಲೂರು ರಾಷ್ಟ್ರೀಯ ಹೆದ್ದಾರಿ ೩೭೩ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳಲು ಮೊಟ್ಟ ಮೊದಲು ಸ್ಥಳೀಯರಲ್ಲಿ ಭೂ ಸ್ವಾಧೀನಪಡಿಸಿಕೊಂಡು ಶೀಘ್ರಗತಿಯಲ್ಲಿ ರಸ್ತೆ ಅಭಿವೃಧ್ದಿಗೆ ಚಾಲನೆ ನೀಡಲಾ ಗುವುದು ಎಂದು ಸಂಸದರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎರಡು ಜಿಲ್ಲೆಗಳನ್ನು ಒಗ್ಗೂಡಿಸುವ ಚಿಕ್ಕಮಗಳೂರು-ಬೇಲೂರು ರಸ್ತೆಯನ್ನು ಈ ಹಿಂದಿದ್ದ ರಾಜ್ಯ ಹೆದ್ದಾರಿ ೫೭ರನ್ನು ರಾಷ್ಟ್ರೀಯ ಹೆದ್ದಾರಿ-೩೭೩ ರಸ್ತೆಯಾಗಿ ಮೇಲ್ದರ್ಜೇಗೇರಿಸಲಾಗಿದೆ. ರಸ್ತೆ ಅಭಿವೃದ್ದಿ ಮತ್ತು ಚತುಷ್ಟಥ ನಿರ್ಮಾಣ ಕಾಮಗಾರಿಯ ವರದಿಗೆ ಕೇಂದ್ರ ಹೆದ್ದಾರಿ ಮಂತ್ರಾಲಯ ಅನುಮೋದನೆಯನ್ನು ನೀ ಡಲಾಗಿದೆ ಎಂದಿದ್ದಾರೆ.
ಈ ಕಾಮಗಾರಿಗೆ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಸಮಾಲೋಚಕರಿಂದ ದೆಹಲಿ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು ಸಮಾಲೋಚಕರು ಪ್ರಾರಂಭಿಕ ಸರ್ವೆ ಕಾರ್ಯ ಸೇರಿದಂತೆ ಮುಂತಾದ ಸರ್ವೆಗಳನ್ನು ಪೂರ್ಣಗೊಳಿಸಿ ಕರಡು ಸಮಗ್ರ ಯೋಜನಾ ವರದಿಯನ್ನು ತಯಾರಿಸಿದ್ದು ಸಮಗ್ರ ಯೋ ಜನಾ ವರದಿಯನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಪ್ರಾದೇಶಿಕ ಅಧಿಕಾರಿಗಳು ಯೋಜನಾ ಪ್ರಸ್ತಾವನೆಯನ್ನು ಆಡಳಿತಾತ್ಮಕ, ಆರ್ಥಿಕ ಅನು ಮೋದನೆಗಾಗಿ ಕೇಂದ್ರ ಸರ್ಕಾರದ ಮುಂದೆ ಮಂಡಿಸಲಾಗಿದೆ. ಅದರಂತೆ ಕೇಂದ್ರ ಹೆದ್ದಾರಿ ಮಂತ್ರಾಲಯ ದಿಂದ ಆಡಳಿತಾತ್ಮಕ ಅನುಮೋದನೆ ನಿರೀಕ್ಷಿಸಲಾಗಿದ್ದು ಎಂಬ ಮಾಹಿತಿಯನ್ನು ಹಾಸನ ರಾಷ್ಟ್ರೀಯ ಪ್ರಾಧಿ ಕಾರ ತಮ್ಮ ಗಮನಕ್ಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Rs 584 crore grant for Chikkamagaluru-Belur highway
Leave a comment