ಚಿಕ್ಕಮಗಳೂರು : ನಿವೃತ್ತ ಸರ್ಕಾರಿ ನೌಕರರೊಬ್ಬರು ಡಿಜಿಟಲ್ ಅರಸ್ ಗೆ ಒಳಗಾಗಿ ೩೭ ಲಕ್ಷ ಹಣ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಶೃಂಗೇರಿಯಲ್ಲಿ ವರದಿಯಾಗಿದೆ.
ದೆಹಲಿಯಿಂದ ಸಿಬಿಐ ಅಧಿಕಾರಿ ಸುನಿಲ್ ಗೌತಮ್ ಎಂಬ ಹೆಸರಿನಲ್ಲಿ ೮೩೧೦೬೮೧೫೬೮ ಸಂಖ್ಯೆಯಿಂದ ವಾಟ್ಸಪ್ ವಿಡಿಯೋ ಕರೆ ಮಾಡಿ, ಯಾವುದೇ ಕಾರಣಕ್ಕೂ ಕಾಲ್ ಮಾಡದಂತೆ ಸಿಬಿಐ ಐಡಿ ಕಾರ್ಡ್ ತೋರಿಸಿ, ನಿಮ್ಮ ಹೆಸರಿನಲ್ಲಿರುವ ಆಧಾರ್ ಕಾರ್ಡನ್ನು ಬೇರೊಬ್ಬರು ಉಪಯೋಗಿಸಿ ಮನಿ ಲಾಂಡರಿಂಗ್ ಮಾಡುತ್ತಿದ್ದು ಆ ಆರೋಪಿಯನ್ನು ಬಂಧಿಸಲಾಗಿದೆ.
ಈ ಕೇಸ್ ಕೋರ್ಟ್‌ನಲ್ಲಿದೆ, ಹೀಗಾಗಿ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ಆರ್.ಬಿ.ಐ ನಿಂದ ಪರಿಶೀಲನೆ ಮಾಡಿಸಿ ನಿಮ್ಮ ಹಣವನ್ನು ನಿಮಗೆ ಮರಳಿ ನೀಡುವುದಾಗಿ ಹೇಳಿದ್ದರಿಂದ ಸಿಬಿಐ ಅಧಿಕಾರಿ ಎಂದು ನಂಬಿ ನಿವೃತ್ತ ನೌಕರ ಹಂತ ಹಂತವಾಗಿ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣದ ಜೊತೆಗೆ ತಮ್ಮ ಪತ್ನಿಯ ಖಾತೆಯಲ್ಲಿದ್ದ ಒಟ್ಟು ೩೭ ಲಕ್ಷ ಹಣವನ್ನು ವರ್ಗಾಯಿಸಿದ್ದಾರೆ.
ಅಲ್ಲದೇ ಈ ವಿಷಯವನ್ನು ಯಾರಿಗೂ ಹೇಳದೆ ಆರು ತಿಂಗಳು ಕಳೆದರೂ ಹಣ ವಾಪಾಸ್ ಬರದೆ ಇದ್ದುದರಿಂದ ವಂಚನೆಗೆ ಒಳಗಾಗಿರುವುದು ತಿಳಿದು ಶೃಂಗೇರಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದು ವೇಳೆ ಯಾರಾದರೂ ಸೈಬರ್ ಕ್ರೈಂಗೆ ಒಳಗಾದರೆ ಅಂತವರು ಸಹಾಯವಾಣಿ ೧೯೩೦ ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ.
Retired government employee loses Rs 37 lakh
Leave a comment