ಚಿಕ್ಕಮಗಳೂರು: ರಾಷ್ಟ್ರದಲ್ಲಿ ಹಿಂದೂವಿರೋಧಿ ಚಟುವಟಿಕೆ ಹಾಗೂ ಕುತಂತ್ರ ನಡೆಸುವವರ ವಿರುದ್ಧ ಹಿಂದೂ ಸಮಾಜ ಗಟ್ಟಿಯಾಗಿ ನಿಲ್ಲಬೇಕು. ಗಡಿಕಾಯುವ ವೀರ ಯೋಧರಂತೆ ದೇಶದಲ್ಲಿ ಹಿಂದುತ್ವದ ಉಳಿವಿಗೆ ಸರ್ವರು ಒಂದಾಗುವ ಸಂಕಲ್ಪ ಮಾಡಿಕೊಳ್ಳಬೇಕು ಎಂದು ಖ್ಯಾತವಾಗ್ಮಿ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.
ನಗರದ ಬಸವನಹಳ್ಳಿ ಸಮೀಪ ಹಿಂದೂ ಮಹಾಗಣಪತಿ ೧೨ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಶನಿವಾರ ಸಂಜೆ ಆಯೋಜಿಸಿದ್ಧ ?ವಿಜಯ ಸಿಂಧೂರ? ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವ ರು ಮಾತನಾಡಿದರು.
ಜಗತ್ತಿನಲ್ಲಿ ಹಲವಾರು ಮತ, ಪಂಥಗಳು ಅವರವರ ಧರ್ಮಕ್ಕೆ ಮಾತ್ರ ಸೀಮಿತವಾಗಿದ್ದು, ಸನಾತನ ಧರ್ಮವು ವಿಶ್ವಧರ್ಮವಾಗಿ ಮುನ್ನೆಲೆಯಲ್ಲಿದೆ. ಕುರಾನ್ ಮತ್ತು ಬೈಬಲ್ ಆಯಾ ಧರ್ಮಗ್ರಂಥವಾದರೆ, ಗ್ರಂಥಾಲಯದಲ್ಲಿರುವ ಪ್ರತಿ ಪುಸ್ತಕಗಳು ಹಿಂದೂಗಳ ಸಾರ್ವತ್ರಿಕ ಧರ್ಮಗ್ರಂಥಗಳಾಗಿದ್ದು ಅಪ್ಪಿಕೊಳ್ಳುವ ಬಾಹುಗಳು ತೆರೆದಿಡಬೇಕು ಎಂದರು.
ಪ್ರಸ್ತುತ ಕಾಲಮಾನದಲ್ಲಿ ಹಿಂದುತ್ವವು ಆಪತ್ತಿನಲ್ಲಿದೆ. ಹಿಂದೂವಾದಿಗಳು ಕೈಕಟ್ಟಿ ಕೂಳಿತುಕೊಂಡರೆ ಭ ವಿಷ್ಯದಲ್ಲಿ ಪ್ರಾಚೀನ ಸಂಸ್ಕೃತಿ ಮರೆಯಾಗುವ ಆತಂಕವಿದೆ. ಆ ನಿಟ್ಟಿನಲ್ಲಿ ಹಿಂದುತ್ವವನ್ನು ಬೇರುಸಮೇತ ಗಟ್ಟಿ ಗೊಳಿಸಲು ಎಲ್ಲೆಡೆ ಬಡಿದೆಬ್ಬಿಸುವ ಕಾರ್ಯ ಮಾಡಬೇಕು. ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಐನೂರು ವರ್ಷಗಳ ಶ್ರೀರಾಮ ಮಂದಿರದ ಹೋರಾಟವು ಕಳೆದ ಹನ್ನೊಂದು ವರ್ಷಗಳಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದಿಂದ ಈಡೇರಿಸಿದೆ. ಪ್ರಧಾನಿಗಳು ದೇಗುಲ ಅಥವಾ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದರೆ ಸನಾತನಿ ವ್ಯಕ್ತಿಯಾಗಿ ಹಣೆತುಂಬ ವಿಭೂತಿ, ಸಂಪ್ರದಾಯಿಕ ಉಡುಗೆಯಲ್ಲಿ ತೆರಳಿ ಹಿಂದುತ್ವದ ಸಂಕೇತವನ್ನು ಪ್ರತಿಬಿಂಬಿಸುತ್ತಿದ್ದಾರೆ ಎಂದು ಹೇಳಿದರು.
ಎಡಪಂಥಿಯರ ಹಾವಳಿಯಿಂದ ಹಿಂದೂ ಸಂಸ್ಕೃತಿಯನ್ನು ಉಳಿಸುವ ಕರ್ತವ್ಯ ಎಲ್ಲರೂ ಮಾಡಬೇ ಕು. ಹಿಂದುತ್ವ ಹಾಗೂ ಹಿಂದೂ ನಾಯಕರನ್ನು ಹೊಗಳಿದರೆ ಅಪ್ಪಿಕೊಳ್ಳಿ. ಧರ್ಮವನ್ನು ತೆಗಳಿದರೆ ಸಾಕ್ಷಿ ನೀಡ ಬೇಕು ಎಂದು ಎಡಪಂಥೀಯಲ್ಲಿ ಪ್ರಶ್ನಿಸಬೇಕು. ಮುಂದಿನ ಪೀಳಿಗೆಗೆ ಹಿಂದೂ ಸಮಾಜ ಶಾಶ್ವತವಾಗಿ ರಾಷ್ಟ್ರದಲ್ಲಿ ನೆಲೆಯೂರಲು ಒಗ್ಗಟ್ಟಿನ ಅವಶ್ಯವಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಪೂರ್ವದ ನೆಹರು ಸರ್ಕಾರದಲ್ಲಿ ಸೋಮನಾಥ ದೇವಾಲಯವನ್ನು ಮ್ಯೂಸಿಯಂ ಮಾಡ ಲು ಹೊರಟಿದ್ದರು. ದೇವಾಲಯ ನಿರ್ಮಾಣಕ್ಕೂ ಅನುದಾನ ನೀಡಲಿಲ್ಲ. ಇದನ್ನು ವಿರೋಧಿಸಿ ದೇಶದ ಸ ಮಸ್ತ ಹಿಂದೂಗಳಿಂದ ದೇಣಿಗೆ ಸಂಗ್ರಹಿಸಿ ದೇಗುಲ ನಿರ್ಮಾಣಗೊಂಡಿರುವ ಸನ್ನಿವೇಶಗಳು ನಮ್ಮಮುಂ ದಿವೆ ಎಂದು ತಿಳಿಸಿದರು.
ಮೋದಿಯವರು ಮೊಟ್ಟಮೊದಲು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ರಫೇಲ್ ಯುದ್ಧ ವಿಮಾನಗಳು ಖರೀದಿಸಲು ಮುಂದಾದಾಗ, ಇದೇ ಕಾಂಗ್ರೆಸ್ ನಾಯಕರು ವಿರೋಧಿಸಿದ್ದರು. ಆದ ರೆ ಆಪರೇಷನ್ ಸಿಂಧೂರ್ ಯಶಸ್ವಿಗೆ ರಫೇಲ್, ಮಿಸೈಲ್‌ಗಳ ಮೂಲಕ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಲು ಸಾಧ್ಯವಾಗಿರುವುದನ್ನು ವಿರೋಧಿಗಳು ಮನಗಾಣಬೇಕು ಎಂದರು.
ಕಾಶ್ಮಿರದ ಹಿಮಪರ್ವತದಲ್ಲಿ ಪ್ರವಾಸಕ್ಕೆ ತೆರಳಿದ ನಾಗರೀಕರನ್ನು ಧರ್ಮಕೇಳಿ ಹತ್ಯೆಗೈದು ಸುಮಂಗಲಿ ಯರ ಸಿಂಧೂರ ಅಳಿಸಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಭಾರತ ಸರ್ಕಾರ ಅತ್ಯಂತ ಕಡಿಮೆ ಅವಧಿಯಲ್ಲಿ ಪಾಕಿಸ್ತಾನದ ಓರ್ವ ಪ್ರಜೆಗಳಿಗೆ ಹಾನಿಯಾಗದೇ, ಭಾರತದ ಗಡಿಯು ದಾಟದೇ ಉಗ್ರವಾದಿಗಳ ಅಡಗುತಾ ಣಗಳನ್ನು ಧ್ವಂಸಗೊಳಿಸಿ ಸಿಂಧೂರದ ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಿದರು.
ಭಾರತೀಯ ಸೈನಿಕರು ಪ್ರಾಣಬಿಟ್ಟವೇ, ಭಾರತದ ಭೂಮಿ, ಹಿಂದೂಗಳಿಗೆ ಹಾನಿಯಾದಲ್ಲಿ ಸಹಿಸಿಕೊ ಂಡು ಕೂರುವುದಿಲ್ಲ ಎಂದು ಧೀರತನದಿಂದ ಹೋರಾಡಿದ ಯೋಧರಿಗೆ ದೊಡ್ಡದೊಂದು ನಮನ. ಆಪರೇ ಷನ್ ಸಿಂಧೂರ್ ಸಮಯದಲ್ಲೇ ಪಾಕಿಸ್ತಾನ ಯುದ್ಧ ನಿಲ್ಲಿಸಿ ಎಂದು ಕಾಲಿಡಿದುಕೊಂಡ ಕಾರಣ ಯುದ್ಧ ನಿಂತಿದೆ ಹೊರತು ಅಮೇರಿಕಾರ ಅಧ್ಯಕ್ಷರ ಮಧ್ಯಪ್ರವೇಶದಿಂದಲ್ಲ ಎಂದು ಪ್ರಧಾನಿಗಳೇ ನೇರವಾಗಿ ತಿಳಿಸಿ ದ್ದಾರೆ ಎಂದರು.
ಹಿಂದೂಗಳ ಆರಾಧ್ಯ ದೇವಾಲಯ ಧರ್ಮಸ್ಥಳವನ್ನು ಸುಳ್ಳು ಸುದ್ದಿಹಬ್ಬಿಸಿ ಪವಿತ್ರ ಕ್ಷೇತ್ರವನ್ನು ಹಾಳು ಗೆಡಲು ಕುತಂತ್ರಗಳು ನಡೆಯುತ್ತಿವೆ. ಯೂಟ್ಯೂಬರ್‌ಗಳು ಹೆಣ್ಣುಮಗಳ ಅತ್ಯಾಚಾರವನ್ನು ಎಐ ತಂತ್ರಜ್ಞಾನ ಬಳಸಿ ಆರೋಪಿಸುತ್ತಿದೆ. ಆದರೆ ಅದೇ ಯೂಟ್ಯೂಬರ್‌ಗಳು ರಾಜ್ಯದಲ್ಲಿ ಮೌಲ್ವಿಗಳಿಂದ ಯುವತಿಯ ಅತ್ಯಾ ಚಾರವೆಸಗಿರುವ ಪ್ರಕರಣ ಬಯಲಿಗೆಳೆಯದೇ ಕಣ್ಮುಚ್ಚಿವೆ ಎಂದು ಪ್ರಶ್ನಿಸಿದರು.
ಪವಿತ್ರ ಕ್ಷೇತ್ರದಲ್ಲಿ ತಲೆಬುರುಡೆ, ಮೂಳೆಗಳಿವೆ ಎಂದ ಅನಾಮಿಕ ವ್ಯಕ್ತಿಯ ಹಿನ್ನೆಲೆ ಪರಿಶೀಲಿಸದೇ ರಾ ಜ್ಯ ಸರ್ಕಾರ ಏಕಾಏಕಿ ತನಿಖೆಗೆ ಆರಂಭಿಸಿತು. ಕೆಲವು ಮೂಳೆಗಳು ಸಿಕ್ಕರೂ ಅವು ಕೂಡಾ ಪುರುಷರದಾ ಗಿತ್ತು. ಅದು ಸಾಲದೇ ಆಳವಾಗಿ ಭೂಪರಿಶೀಲನೆಗೆ ಯಂತ್ರಗಳನ್ನು ಬಳಸಿ ಎಸ್‌ಐಟಿ ತನಿಖೆ ಆರಂಭಿಸಿದ ರೂ ಕೊನೆಗೂ ಅನಾಮಿಕ ವ್ಯಕ್ತಿಯೇ ಸುಳ್ಳು ಕಥೆ ಸಮಾಜದ ಮುಂದೆ ಬಯಲಾಯಿತು ಎಂದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ ಪಾಕಿಸ್ತಾನದ ಕೃಪಪೋಷಿತ ಉಗ್ರವಾದಿ ಗಳ ತಂಡ ಪ್ರವಾಸದಲ್ಲಿರುವ ಹಿಂದೂ ಪುರುಷರನ್ನು ಗುರಿಯಾಗಿಸಿ ಕೊಲೆಗೈದಿರುವುದು ಹೇಯಕೃತ್ಯ. ಈ ಪ್ರಕರಣ ಇಡೀ ದೇಶದ ಜನತೆಗೆ ನೋವುಂಟಾಗಿದ್ದು, ಈ ಪ್ರತೀಕಾರವಾಗಿ ಭಾರತೀಯ ಸೈನ್ಯ ಉಗ್ರರ ನೆಲೆ ಗಳನ್ನು ನಾಲ್ಕು ಗಂಟೆಗಳಲ್ಲಿ ಪತ್ತೆಹಚ್ಚಿ ಧ್ವಂಸಗೊಳಿಸಿ ನೊಂದವರಿಗೆ ನ್ಯಾಯ ಒದಗಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಹಿಂದೂ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಆಟೋ ಶಿವಣ್ಣ, ಕಾರ್ಯದರ್ಶಿ ಕೃಷ್ಣ, ಸದಸ್ಯರಾದ ಸಂತೋಷ್ ಕೋಟ್ಯಾನ್, ಶ್ಯಾಮ್.ವಿ.ಗೌಡ, ಸುನೀಲ್ ಆಚಾರ್ಯ, ಅಮೀತ್, ಕಿಶೋರ್,ಅಂಕಿತಾ, ನಯನ್, ಗೌತಮ್, ಆಕಾಶ್ ಹಾಗೂ ಮಾಜಿ ಸೈನಿ ಕರು, ಭಕ್ತಾಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Resolve to unite for the survival of Hindutva.
Leave a comment