ಚಿಕ್ಕಮಗಳೂರು : ಹಾರ್ಟ್ ಅಟ್ಯಾಕ್ ಸಾವು ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು. ಕಾಫಿ ನಾಡು ಚಿಕ್ಕಮಗಳೂರು ಕೂಡ ಅದರಿಂದ ಹೊರತಾಗಿಲ್ಲ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೂಡಾ ಹಾರ್ಟ್ ಅಟ್ಯಾಕ್ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲೆಯ ಅಜ್ಜಂಪುರ ಪಟ್ಟಣದ ನಿವಾಸಿ 45 ವರ್ಷದ ಸಗೀರ್ ಅಹ್ಮದ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಲಾರಿ ಚಾಲಕನಾಗಿದ್ದ ಸಗೀರ್ ಅಹ್ಮದ್ ಲಾರಿಯಿಂದ ಬಂದು ಊಟಕ್ಕೆ ಕುಳಿತಿದ್ದ ವೇಳೆ ದಿಡೀರ್ ಎದೆನೋವು ಕಾಣಿಸಿಕೊಂಡಿದೆ. ತೀವ್ರ ಎದೆ ನೋವಿನಿಂದ ಕುಸಿದುಬಿದ್ದ ಸಗೀರ್ ಅಹ್ಮದ್ ಮೃತಪಟ್ಟಿದ್ದಾರೆ.
Resident of Ajjampur town died of heart attack
Leave a comment