ಚಿಕ್ಕಮಗಳೂರು: ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ದಲಿತ ಮತ್ತು ಕನ್ನಡಪರ ಸಂಘ ಟನೆಗಳ ಪದಾಧಿಕಾರಿಗಳು ಸೋಮವಾರ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಕೊಪ್ಪಳ ಜಿಲ್ಲೆಯ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆಗೈದಿರುವ ದುರುಳರು ಹಾಗೂ ಚಿಕ್ಕ ಮಗಳೂರಿನ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣವನ್ನು ಕೂಲಂಕುಶವಾಗಿ ತನಿಖೆಗೆ ನಡೆಸಬೇಕು ಎಂದು ಒತ್ತಾ ಯಿಸಿದರು.
ಬಾಲಕಿಯರ ಅತ್ಯಾಚಾರ ಪ್ರಕರಣಗಳು ರಾಜ್ಯದಲ್ಲಿ ಕಡಿವಾಣವಾಗುತ್ತಿಲ್ಲ. ಧರ್ಮಸ್ಥಳದ ಸೌಜನ್ಯ ಪ್ರಕ ರಣದ ಚಳಿವಳಿಯಂತೆ ಬೃಹತ್ ಮಟ್ಟದಲ್ಲಿ ಆರಂಭಿಸುವ ಮೂಲಕ ಸರ್ಕಾರವನ್ನು ಬಡಿದೇಳಿಸಿದರೆ ಅಮಾ ಯಕ ಬಾಲಕಿಯರ ಕುಟುಂಬಕ್ಕೆ ನ್ಯಾಯವನ್ನು ಒದಗಿಸಬಹುದು ಎಂದು ಹೇಳಿದರು.
ಅತ್ಯಾಚಾರಿ ಆರೋಪಿಗಳನ್ನು ಶೀಘ್ರವೇ ಬಂಧಿಸಿ ನ್ಯಾಯಾಂಗ ವ್ಯವಸ್ಥೆಯಡಿ ಶಿಕ್ಷಿಸಲು ಸರ್ವರು ಒಂ ದಾಗಬೇಕಿದೆ. ಅಲ್ಲದೇ ಈ ಚಳುವಳಿಗಳು ಒಂದು ದಿನಕ್ಕೆ ಸೀಮಿತಗೊಳಿಸಬಾರದು. ನಿರಂತರವಾಗಿ ಹೋ ರಾಟ ನಡೆಸಿ ಸರ್ಕಾರದ ಕಣ್ತೆರೆಸಬೇಕು. ಮುಂದಿನ ದಿನಗಳಲ್ಲಿ ಅತ್ಯಾಚಾರಿಗಳು ಈ ದುಕೃತ್ಯಕ್ಕೆ ಕೈಹಾಕದಂತೆ ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು ಎಂದರು.
ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್ ಮಾತನಾಡಿ ಕೊಪ್ಪಳದ ಬಾಲಕಿಯ ಪಾಲ ಕರು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ದುಷ್ಕರ್ಮಿಗಳು ಅತ್ಯಾಚಾರವೆಸಗಿ, ಮಾರಾಕಾಸ್ತ್ರಗಳಿಂದ ಕೊಲೆಗೈದು ದುಷ್ಕತ್ಯ ಮೆರೆದಿದ್ದಾರೆ. ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಆತ್ಮಹತ್ಯೆ ಪ್ರಕ ರಣ ಸಾಕಷ್ಟು ಅನುಮಾನ ಮೂಡಿಸಿರುವ ಕಾರಣ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾ ಯಿಸಿದರು.
ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ ರಾಜ್ಯದಲ್ಲಿ ಪುಟ್ಟ ಬಾಲಕಿಯರ ಮೇಲೆ ಅತ್ಯಾ ಚಾರಗಳು ನಡೆಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿ ಸಿರುವುದು ಸರಿಯಲ್ಲ. ಇಂಥಹ ಪ್ರಕರಣಗಳನ್ನು ಗಂಭೀರವಾಗಿ ಚಿಂತಿಸುವ ಮೂಲಕ ನೊಂದ ಬಾಲಕಿ ಯರ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ಲಕ್ಷ್ಮಣ್, ರಮೇಶ್, ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್, ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ವಿವಿಧ ಮುಖಂ ಡರುಗಳಾದ ಕುರುವಂಗಿ ವೆಂಕಟೇಶ್, ಹೆಚ್.ಪಿ.ಮಂಜೇಗೌಡ, ಹಂಪಯ್ಯ, ಶಂಕರೇಗೌಡ, ಅನ್ವರ್, ರವಿ, ಹರೀಶ್‌ಮಿತ್ರ, ಭಾರತಿ, ರತ್ನ, ಡಾ|| ಸುಂದರಗೌಡ, ಹೇಮಂತ್ ಮತ್ತಿತರರಿದ್ದರು.
Protest for disciplinary action against rapists of girls
Leave a comment